ಯರಗಟ್ಟಿ

ಎಲ್ಲರಿಗೂ ಹೆಲ್ಮೆಟ್, ಲೈಸೆನ್ಸ ಕಡ್ಡಾಯ: ಗುಳೆದ

ಎಲ್ಲರಿಗೂ ಹೆಲ್ಮೆಟ್, ಲೈಸೆನ್ಸ ಕಡ್ಡಾಯ: ಗುಳೆದ

ಯರಗಟ್ಟಿ 28: ಸಮೀಪದ ಕಡಬಿ ಬಸ್ಟ್ಯಾಂಡ್ ಪಕ್ಕದ ಭರಮಪ್ಪನ ಕಟ್ಟೆಯ ಆವರಣದಲ್ಲಿ ಲೈಸೆನ್ಸ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಎಎಸ್‌ಐ ಬಿ. ಎನ್‌. ಗುಳೆದ ಕಾರ್ಯಕ್ರಮದಲ್ಲಿ ಮಾತನಾಡಿ, ಯಾರೂ ತಮ್ಮ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ಕೊಡಬೇಡಿ. ಈಗಿನ ಯುವಕರು ಹೆಲ್ಮೇಟ್ ಧರಿಸದೇ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಆದ್ದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಪಘಾತಗಳು ಸಂಭವಿಸಿದಾಗ ಲೈಸೆನ್ಸ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಲೈಸೆನ್ಸ ಮಾಡಿಸಿಕೊಳ್ಳಿ ಎಂದರು. 

ಸಂದರ್ಭದಲ್ಲಿ ಬಿಟ್ ಸಿಬ್ಬಂದಿ ವಿ ಕೆ ಮುರಗೋಡ, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ