ಕಾರವಾರ

ಅಂಕೋಲಾ, ಕುಮಟಾ, ಕಾರವಾರದಲ್ಲಿ ಭಾರೀ ಮಳೆ : ಜನ ಜೀವನ ಸ್ತಬ್ಧ

ಅಂಕೋಲಾ, ಕುಮಟಾ, ಕಾರವಾರದಲ್ಲಿ ಭಾರೀ ಮಳೆ : ಜನ ಜೀವನ ಸ್ತಬ್ಧ
ಸತತ ಮಳೆಯಲ್ಲಿ ಮಾಗೋಡು ಫಾಲ್ಸ ಕಂಡದ್ದು ಹೀಗೆ....

ಅಂಕೋಲಾ 110.8 , ಕುಮಟಾ 120.4 ಮಿಲಿ ಮೀಟರ್  

ಕಾರವಾರ 13:  ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರದಂತೆ ರವಿವಾರ ಸಹ ಭಾರೀ ಮಳೆ ಸುರಿಯಿತು. ಎಡಬಿಡದೆ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಆದರೆ ಯಾವುದೇ ಅನಾಹುತವಾಗಿಲ್ಲ. ಮನೆಗಳಿಗೆ ನೀರು ನುಗ್ಗಿಲ್ಲ. ಸ್ಥಳೀಯ ಸಂಸ್ಥೆಗಳು ಮೇ ತಿಂಗಳಲ್ಲಿ ನಗರ ಪಟ್ಟಣಗಳ ಕಾಲುವೆ, ಚರಂಡಿ ಸ್ವಚ್ಚ ಮಾಡಿದ ಕಾರಣ ಮಳೆ ನೀರು ಸರಾಗಬವಾಗಿ ಹರಿದು ಸಮುದ್ರ ಸೇರಿದೆ. ಸತತ ಮಳೆಯಿಂದ  ಹೆದ್ದಾರಿಯಲ್ಲಿ ವಾಹನ ಸಂಚಾರ ಕಷ್ಟಕರವಾಗಿದ್ದು, ವಾಹನಗಳು ನಿಧಾನಕ್ಕೆ ಚಲಿಸಿದವು. ಜಿಲ್ಲೆಯ ಕರಾವಳಿಯಲ್ಲಿ ಸತತ ಮಳೆ ಸುರಿಯುತ್ತಿದ್ದು, ಇನ್ನೂ ಮೂರು ದಿನ ಮಳೆ ಇದೆ ಎಂದು ಹವಮಾನ ಇಲಾಖೆ ಹೇಳಿದೆ.  ಎಡಬಿಡದೆ ಸುರಿದ ಮಳೆಯಿಂದ ಜನ ಜೀವನ ಸ್ತಬ್ಧವಾಗಿತ್ತು.  ಹಾಗೂ ಘಟ್ಟದ ಕೆಲ ಪ್ರದೇಶಗಳಲ್ಲಿ ಆಗಾಗ ಮಳೆ ಸುರಿಯುತ್ತಿದೆ. ಧರೆ ಕುಸಿಯುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಗಿನಲ್ ಭೇಟಿ ನೀಡಿದ ನಂತರ ಸ್ಥಳೀಯ ಆಡಳಿತಗಳು ಮೈಯಲ್ಲಾ ಕಣ್ಣಾಗಿ ನೆರೆ ಎದುರಿಸಲು ಸನ್ನದ್ಧವಾಗಿವೆ. ಅಣೆಕಟ್ಟುಗಳ ಮೇಲೆ ಸತತ ನಿಗಾ ಇಡಲಾಗಿದೆ. ಸಹಾಯಕ ಕಮಿಷನರ್‌ಗಳು ತಲಾ ಎರಡು ಗಂಟೆಗೆ ಒಮ್ಮೆ ತಹಶೀಲ್ದಾರರ ಜೊತೆ ಮಾತನಾಡಿ, ಮಳೆಯ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. 

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 110.8 ಮಿ.ಮೀ, ಭಟ್ಕಳ 88.0 ಮಿ.ಮೀ, ಹಳಿಯಾಳ 10.2 ಮಿ.ಮೀ, ಹೊನ್ನಾವರ 101.1 ಮಿ.ಮೀ, ಕಾರವಾರ 82.8 ಮಿ.ಮಿ, ಕುಮಟಾ 120.4 ಮಿ.ಮೀ, ಸಿದ್ದಾಪುರ 61.2 ಮುಂಡಗೋಡ, ಮಿ.ಮೀ. ಶಿರಸಿ 35.5 ಮಿ.ಮೀ, ಜೋಯಡಾ 33.4 ಮಿ.ಮೀ, ಮುಂಡಗೋಡ 13.4, ಯಲ್ಲಾಪುರ 38.4 ಮಿ.ಮೀ. ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ:  

ಕದ್ರಾ: 34.50ಮೀ (ಗರಿಷ್ಟ), 30.10 ಮೀ., 6449..00 ಕ್ಯೂಸೆಕ್ಸ್‌ (ಒಳಹರಿವು) 3743.0 ಕ್ಯೂಸೆಕ್ಸ (ಹೊರ ಹರಿವು),  ಕೊಡಸಳ್ಳಿ: 75.50 ಮೀ (ಗರಿಷ್ಟ), 69.65 ಮೀ. , 4324 ಕ್ಯೂಸೆಕ್ಸ್‌ (ಒಳ ಹರಿವು),  4901 (ಹೊರ ಹರಿವು),   ಸೂಪಾ: 564.00 ಮೀ (ಗ), 535.49 ಮೀ, 3013 ಕ್ಯೂಸೆಕ್ಸ್‌ (ಒಳ ಹರಿವು), 1615.744 ಕ್ಯೂಸೆಕ್ಸ್‌ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 451.05 ಮೀ, 588.00 ಕ್ಯೂಸೆಕ್ಸ್‌ (ಒಳ ಹರಿವು) 0.00 ಕ್ಯೂಸೆಕ್ಸ್‌ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 434.32ಮೀ, 1704 ಕ್ಯೂಸೆಕ್ಸ್‌ (ಒಳ ಹರಿವು), 3584 ಕ್ಯೂಸೆಕ್ಸ್‌ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ),50.89 ಮೀ,  5533 ಕ್ಯೂಸೆಕ್ಸ್‌ (ಒಳ ಹರಿವು) 5881 ಕ್ಯೂಸೆಕ್ಸ್‌ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1775.90 ಅಡಿ,  13843.0 ಕೂಸೆಕ್ಸ (ಒಳ ಹರಿವು) 4747.00   ಕ್ಯೂಸೆಕ್ಸ್‌ (ಹೊರ ಹರಿವು) 


ಸುದ್ದಿ ಓದಿ