ತಾಳಿಕೋಟಿ

ತಾಲೂಕಿನಾಧ್ಯಂತ ಭಾರಿ ಮಳೆ ಡೋಣಿ ನದಿಗೆ ಪ್ರವಾಹ ಡೋಣಿ ಸೇತುವೆ ಮುಳಗಡೆ ಪ್ರಯಾಣಿಕರ ಪರದಾಟ

ತಾಲೂಕಿನಾಧ್ಯಂತ ಭಾರಿ ಮಳೆ ಡೋಣಿ ನದಿಗೆ ಪ್ರವಾಹ   ಡೋಣಿ ಸೇತುವೆ ಮುಳಗಡೆ ಪ್ರಯಾಣಿಕರ ಪರದಾಟ

ತಾಳಿಕೋಟೆ07: ಕಳೆದ ಒಂದು ವಾರದಿಂದ ಬಿಡುವು ಕೊಟ್ಟ ವರುಣ ನಿನ್ನೆ ರಾತ್ರಿ ಭಾರಿ ಪ್ರಮಾಣದಲ್ಲಿ ಅರ್ಭಟಿಸಿದ್ದು ಡೋಣಿ ನದಿಯ ಪ್ರವಾಹದಿಂದ ಡೋಣಿ ನದಿ ಸೇತುವೆ ಮುಳಗಡೆ ಆಗಿ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.

ತಾಲೂಕು ಸೇರಿದಂತೆ ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಬಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಪಟ್ಟಣದಲ್ಲಿ ಹಾದು ಹೋಗುವ ಬಿಜ್ಜಳ ರಾಜ್ಯ ಹೆದ್ದಾರಿ 61 ರಲ್ಲಿರುವ ಮೇಲ್ಮಟ್ಟದ ಸೇತುವೆ ಶಿಥಿಲವಾಗಿದ್ದರಿಂದ ಸೇತುವೆ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಬ್ರೀಟಿಷರ್ ಕಾಲದಲ್ಲಿ ನಿರ್ಮಾಣ  ಮಾಡಲಾಗಿರುವ ಸೇತುವೆ ಮೇಲೆ ಪರ್ಯಾಯ ರಸ್ತೆ ಮಾಡಲಾಗಿದೆ. ಮಳೆಯಿಂದಾಗಿ ಮಂಗಳವಾರ ಬೆಳಿಗ್ಗೆಯಿಂದ ಭಾರಿ ಪ್ರಮಾಣದಲ್ಲಿ ಪ್ರವಾಹ ಬಂದಿದ್ದರಿಂದ ಕೆಳಮಟ್ಟದ ಸೇತುವೆಯೂ ಕೂಡಾ ಮುಳಗಡೆ ಆಗಿ ಅಲ್ಲಿಯೂ ಸಂಚಾರ ಬಂದ್ ಮಾಡಲಾಯಿತು. ಇದರಿಂದ ಪಯರ್ಾಯವಾಗಿ ಹಡಗಿನಾಳ ಮಾರ್ಗದಲ್ಲಿ ಸಂಚಾರ ಮಾಡಲು ಮುಕಿಹಾಳ ಸೋಗಲಿ ಹಳ್ಳ ತುಂಬಿ ಸೇತುವೆ ಮೇಲೆ ನೀರು ಬಂದಿದ್ದರಿಂದ ಅಲ್ಲಿಯು ಸಂಚಾರ ಬಂದ್ ಆಗಿತ್ತು. ಇದರಿಂದ  ಪಟ್ಟಣದಿಂದ ವಿಜಯಪುರ, ಬಾಗಲಕೋಟೆ, ಮುದ್ದೇಬಿಹಾಳ ಸೇರಿದಂತೆ ಸಂಪರ್ಕ ಕಡಿತಗೊಂಡಿತು. ಇದರಿಂದ ವಿಜಯಪುರ ಹೋಗುವವರು ದೇವರ ಹಿಪ್ಪರಗಿ ಮಾರ್ಗದ ಮೂಲಕ ಸಂಚರಿಸಿದರು. ಇನ್ನು ಮುದ್ದೇಬಿಹಾಳ ಮಾರ್ಗವಾಗಿ ಬಾಗಲಕೋಟೆ, ಹುಬ್ಬಳ್ಳಿ ಹೋಗುವವರು ಕೊಡೆಕಲ್ಲ, ನಾರಾಯಣಪೂರ ಮಾರ್ಗವಾಗಿ ಸಂಚರಿಸಿದರು. ಮಧ್ಯಾಹ್ನದ ನಂತರ ಡೋಣಿ ನದಿಯಲ್ಲಿ ಪ್ರವಾಹ ಕಡಿಯಾಯಿತು. ಸೇತುವೆ ಮೇಲಿನ ನೀರು ಕಡಿಮೆಯಾಗಿದ್ದರಿಂದ ಸಂಚಾರ ಎಂದಿನಂತೆ ಆರಂಭವಾಯಿತು.

ತಾಲೂಕಿನ ಕೊಣ್ಣೂರ, ಮಡಿಕೇಶ್ವರ, ಪಡೇಕನೂರ, ಇಂಗಳಗೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಮೂಕಿಹಾಳದ ಸೋಗಲಿ ತುಂಬಿ ಹರಿದಿದೆ. ಇದರಿಂದ ಕೂಚಬಾಳದ ಸೇತುವೆ ಹಾಗೂ ಮುಕಿಹಾಳ ಗ್ರಾಮದ ಬಳಿ ನಿರ್ಮಿಸಲಾದ ನೂತನ ಸೇತುವೆ ಮುಳಗಡೆ ಆಗಿ ಸಂಚಾರ ಬಂದ್ ಆಗಿದ್ದು ಪ್ರಯಾಣಿ ಪರದಾಟ ನಡೆಸಿದರು. ಮಳೆಯಿಂದ ಬಹುತೇಕ ಜಮೀನದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಹಲವು ಬೆಳೆಗಳು ನಾಶವಾಗುವ ಸ್ಥಿತಿ ನಿಮರ್ಾಣವಾಗಿದೆ.


ಸುದ್ದಿ ಓದಿ