ಕಾರವಾರ

ಭಾರಿ ಮಳೆ: ವಾಹನ ಸವಾರರ ಪರದಾಟ

ಭಾರಿ ಮಳೆ: ವಾಹನ ಸವಾರರ ಪರದಾಟ

ಬನವಾಸಿ 22: ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ ಬುಧವಾರ ಸಂಜೆಯಿಂದ ಮಳೆಯ ಅಬ್ಬರ ಜೋರಾಗಿದೆ. ಪಟ್ಟಣದಲ್ಲಿ ಭಾರಿ ಮಳೆಯ ಕಾರಣ ಹಲವು ಕಡೆಗಳಲ್ಲಿ ಚರಂಡಿಗಳು ಕಟ್ಟಿಕೊಂಡು ರಸ್ತೆಗೆ  ನೀರು ನುಗ್ಗಿ  ವಾಹನ ಸವಾರರು ಪರದಾಡುವಂತಾಯಿತು.     

ಸಮೀಪದ  ಮೊಗವಳ್ಳಿ, ಭಾಶಿ, ಅಜ್ಜರಣಿ, ಮತ್ತುಗುಣಿ, ಮಧುರವಳ್ಳಿ, ಬೆಂಗಳೆ, ಗುಡ್ನಾಪೂರ, ಕಾಂತ್ರಜಿ, ತಿಗಣಿ ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು  ಬೆಳೆದಿದ್ದ ಬೆಳೆಗಳೆಲ್ಲ ಮಳೆಯ ಪಾಲಾಗುವ ಭೀತಿ ಎದುರಾಗಿದೆ. ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಜೀವನದಿ ವರದಾ  ತುಂಬಿ ಹರಿಯುತ್ತಿದೆ. ಒಂದೆರಡು ಅಡಿ ನೀರು ಬಂದರೆ ಅಪಾಯ ಮಟ್ಬ ಮೀರಿ ಹರಿಯಲಿದೆ. ಕೆಲವು ಕಡೆಗಳಲ್ಲಿ ನದಿಯ ಪ್ರವಾಹ ನೀರು ಗದ್ದೆಗಳಿಗೆ ನುಗ್ಗಿದ್ದು  ಬೆಳೆ  ನಾಶವಾಗಿದೆ. ಭಾಶಿ ಗ್ರಾಮದಲ್ಲಿ ಸಮರ​‍್ಕವಾದ ಚೆರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ರಸ್ತೆ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. 


ಸುದ್ದಿ ಓದಿ