ಚಿಕ್ಕ ಕುಟುಂಬದಿಂದ ಆರೋಗ್ಯವಂತ ಜೀವನ: ಆಯ್ ಆರ್ ಗಂಜಿ
ಯರಗಟ್ಟಿ 07: ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಜೂನ್ 27ರಿಂದ ಜು. 10ರವರೆಗೆ ಸಮುದಾಯ ಜಾಗೃತಿ ಪಾಕ್ಷಿಕ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಮಕ್ಕಳ ನಡುವೆ ಅಂತರವಿಡಲು ಹೆಣ್ಣು ಮಕ್ಕಳಿಗೆ ತಾತ್ಕಾಲಿಕ ವಿಧಾನಗಳಾದ ನುಂಗುವ ಮಾತ್ರೆ, ಅಂತರಾ ಇಂಜೆಕ್ಷನ್, ಛಾಯಾ ಮಾತ್ರೆ ಕಾಪರ್ ಟಿ ಮತ್ತು ಗಂಡಸರಿಗೆ ನಿರೋಧ ಹಾಗೂ ಶಾಶ್ವತ ವಿಧಾನಗಳಾದ ಹೆಣ್ಣು ಮಕ್ಕಳಿಗೆ ಉದರದರ್ಶಕ ಉದರಛೇದಕ ಮತ್ತು ಗಂಡಸರಿಗೆ ಎನ್ಎಸ್ವಿ ಸಂತಾನಹರಣ ಶಸ್ತ್ರ ಚಿಕಿತ್ಸೆಗಳಿವೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್ ಆರ್ ಗಂಜಿ ಹೇಳಿದರು.
ಸ್ಥಳೀಯ ಅಂಗನವಾಡಿ ನಂ 7ರಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಏರಿ್ಡಸಲಾಗಿದ್ದ ಕುಟುಂಬ ಯೋಜನೆ ವಿಧಾನಗಳ ಜಾಗ್ರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಈ ವರ್ಷದ ಘೋಷಣೆ "ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೆವೆಂದುಪ್ರತಿಜ್ಞೆಯನ್ನು ಮಾಡೋಣ" ಎಂಬುದಾಗಿದೆ.ಕುಟುಂಬ ಯೋಜನೆ ವಿಧಾನಗಳು ಆಶಾ ಆರೋಗ್ಯ ಇಲಾಖೆಯ ಸಿಬ್ಬಂದಿಯರ ಕಡೆಗೆ ಲಭ್ಯವಿರುತ್ತವೆ ಅವುಗಳನ್ನ ಬಳಸಿ ಕುಟುಂಬದ ಗಾತ್ರವನ್ನು ಚಿಕ್ಕದಾಗಿಸಿ ಆರೋಗ್ಯವಂತ ಜೀವನ ನಮ್ಮದಾಗುತ್ತೆ ಎಂದು ಆಯ್ ಆರ್ ಗಂಜಿ ಹೇಳಿದರು.
ನಂತರ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಎಸ್. ಬಿ. ಬೆಂಡಿಗೇರಿ ಇವರು ಮಾತನಾಡಿ ಡೆಂಗೀ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು ಹೆಣ್ಣು ಈಡಿಸ್ ಈಜಿಪ್ಟ್ ಸೊಳ್ಳೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವದು.ಇದರ ಲಕ್ಷಣಗಳಾದ ತೀವ್ರ ಜ್ವರ ಕಣ್ಣುಗಳ ಹಿಂಭಾಗದಲ್ಲಿ ನೋವು ಮೈಮೇಲೆ ಕೆಂಪು ಮಿಶ್ರಿತ ಗುಳ್ಳೆಗಳು ತಲೆನೋವು ಮೈಕೈನೋವು ಕಂಡು ಬಂದಲ್ಲಿ ಆಶಾ ಆರೋಗ್ಯ ಇಲಾಖೆಯ ಸಿಬ್ಬಂದಿ ಅಥವಾ ಸರಕಾರಿ ಆಸ್ಪತ್ರೆಗೆ ಭೆಟ್ಟಿ ನೀಡುವದು ಇದರ ನಿಯಂತ್ರಣ ಮಾಡಲು ಸೊಳ್ಳೆಗಳು ಕಚ್ಚದಂತೆ ವ್ಯವಸ್ಥೆ ಮಾಡಿಕೊಳ್ಳುವದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು.
ಜ್ಯೋತಿಮದ್ದಾನಿ, ಶೋಭಾ ಅಂಗಡಿ, ರೇಖಾ ಗಿರಿಯವ್ವಗೋಳ ಸೇರಿದಂತೆ ತಾಯಂದಿರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಲಕ್ಷ್ಮಿ ಬಾಯಿ ಕಿಟದಾಳ ವಹಿಸಿದ್ದರು. ಜ್ಯೋತಿ ಮದ್ದಾನಿ ಸ್ವಾಗತಿಸಿ ನಿರೂಪಿಸಿದರು. ಶೋಭಾ ದಿಡಗನ್ನವರ ವಂದಿಸಿದರು.