ಆರೋಗ್ಯ ಸೇವೆ ಬಡವರಿಗೆ ಸಿಗುವಂತಾಗಬೇಕು: ಪಲ್ಲವಿ ನಾಡಗೌಡ
ತಾಳಿಕೋಟಿ: ಸಮಾಜದಲ್ಲಿರುವ ಕಡು ಬಡವ ಹಾಗೂ ದುರ್ಬಲರಿಗೆ ಆರೋಗ್ಯ ಸೇವೆಗಳು ಸರಳವಾಗಿ ಸಿಗದೇ ಇರುವುದರಿಂದ ಅವರು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಅನಕೂಲ ಮಾಡಿಕೊಡಲು ಇಂಥಹ ಉಚಿತ ಆರೋಗ್ಯ ಶಿಬಿರಗಳನ್ನು ನಮ್ಮ ಫೌಂಡೇಶನ್ ಹಮ್ಮಿಕೊಳ್ಳುತ್ತಿದೆ ಎಂಧು ದೇವಿಕಾ ಸುಬ್ಬರಾವ್ ಫೌಂಡೇಶನ್ ಅಧ್ಯಕ್ಷ ಪಲ್ಲವಿ ನಾಡಗೌಡ ತಿಳಿಸಿದರು.
ಪಟ್ಟಣದ ಎಸ್.ಕೆ. ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ದೇವಿಕಾ ಸುಬ್ಬರಾವ ಫೌಂಡೇಶನ್ ಮುದ್ದೇಬಿಹಾಳ ಹಾಗೂ ವೀರಶೈವ ವಿದ್ಯಾವರ್ಧಕ ಸಂಘ ತಾಳಿಕೋಟಿ, ಇವರ ನೇತೃತ್ವದಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಖ್ಯಾತ ನೇತ್ರತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ಆರೋಗ್ಯದ ಕುರಿತು ಯಾರೂ ನಿರ್ಲಕ್ಷ್ಯ ವಹಿಸಬಾರದು. ಅದರಲ್ಲಿ ಕಣ್ಣು ಮನುಷ್ಯನ ದೇಹದ ಅತ್ಯಮೂಲ್ಯವಾದ ಅಂಗ ಅದರಿಂದ ಮಾತ್ರ ಜಗತ್ತನ್ನು ಕಾಣಲು ಸಾಧ್ಯ ಎಂದರು.
ಈ ಶಿಬಿರದಲ್ಲಿ ಸುಮಾರು 1350 ಜನ ರೋಗಿಗಳ ತಪಾಸಣೆ ನಡೆಯಿತು. ಇದರಲ್ಲಿ ಹೃದಯರೋಗದ 250, ನರರೋಗದ 150, ಕ್ಯಾನ್ಸರ್ಗೆ ಸಂಬಂಧಿಸಿದ 15 ರೋಗಿಗಳು, ಹಾಗೂ ಸುಮಾರು 320 ಜನರು ಕಣ್ಣಿನ ತಪಾಸಣೆಗೆ ಒಳಪಟ್ಟರು. ಹೆಚ್ಚಿನ ಚಿಕತ್ಸೆಗಾಗಿ ಹೃದಯ ರೋಗದ 20ಜನ, ನರರೋಗದ 25ಜನ, ಕ್ಯಾನ್ಸರ್ದ 5ಜನ, ಕಣ್ಣಿನ ಶಸ್ತ್ರ ಚಿಕಿತ್ಸೆಗೆ 112 ಜನರನ್ನೂ ಆಯ್ಕೆ ಮಾಡಲಾಯಿತು. ಇವರೆಲ್ಲರಿಗೂ ಉಚಿತವಾದ ಚಿಕಿತ್ಸೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರದಲ್ಲಿ ನೀಡಲಾಗುವುದು.
ಈ ಸಂದರ್ಭದಲ್ಲಿ ವೇ.ಮೂ. ಮುರುಗೇಶ ವಿರಕ್ತಮಠ, ಮುಸ್ಲೀಂ ಧರ್ಮಗುರು ಸೈಯದ ಶಕೀಲಅಹ್ಮದ ಖಾಜಿ, ಮಾಜಿ ಸಚಿವ ಸಿ ಎಸ್ ನಾಡಗೌಡ(ಅಪ್ಪಾಜಿ), ಬಿ ಎಸ್ ಗಬಸಾವಳಗಿ, ಬಿ ಎಸ್ ಪಾಟೀಲ(ಯಾಳಗಿ), ಆನಂದಗೌಡ ದೊಡಮನಿ, ಡಾ. ನಂದಕುಮಾರ ಭೈರಿ, ಡಾ. ಸತೀಶ ತಿವಾರಿ, ಡಾ. ಶ್ರೀಶೈಲ ಹುಕ್ಕೇರಿ, ನರರೋಗ ತಜ್ಞ ಡಾ. ರವಿ, ಜನರಲ್ ಸರ್ಜನ್ ಡಾ. ದಿವ್ಯಾ, ಡಾ. ನರೇಂದ್ರ, ಡಾ. ನಜೀರ ಅಹ್ಮದ ಕೊಳ್ಯಾಳ, ಡಾ. ಅಗರವಾಲ, ಡಾ. ಶಿವನಗೌಡ ಪಾಟೀಲ, ಪುರಸಭೆ ಸದಸ್ಯೆ ಅಕ್ಕಮಾಹಾದೇವಿ ಕಟ್ಟಿಮನಿ, ಸಿದ್ದನಗೌಡ ಪಾಟೀಲ(ನಾವದಗಿ), ವಿ ಸಿ ಹಿರೇಮಠ, ಎಸ್ ಬಿ ಕಟ್ಟಿಮನಿ, ರಾಹುಲ ನಾಡಗೌಡ, ಚಿನ್ನು ಧಣಿ(ಬಸರಕೋಡ), ಅಪ್ಪು ಧಣಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಕೆ ಚೋರಗಸ್ತಿ, ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಮಾಸೂಮಸಾಬ ಕೆಂಭಾವಿ, ಇದ್ದರು.