ತಾಳಿಕೋಟಿ

ಆರೋಗ್ಯ ನಿಜವಾದ ಸಂಪತ್ತು: ಡಾ. ಪ್ರಭುಗೌಡ

ಆರೋಗ್ಯ ನಿಜವಾದ ಸಂಪತ್ತು: ಡಾ. ಪ್ರಭುಗೌಡ

ತಾಳಿಕೋಟಿ: ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ ಅದುವೇ ನಿಜವಾದ ಸಂಪತ್ತು. ಅದಕ್ಕಾಗಿ ನಾವು ಆರೋಗ್ಯದ ಕುರಿತು ಹೆಚ್ಚು ಕಾಳಜಿ ವಹಿಸುವ ಅಗತ್ಯ ಇದೆ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ನಾಡಿನ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು. 

ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಕಲಕೇರಿ ಗ್ರಾಮದಲ್ಲಿ ಭೈರಿ ಫೌಂಡೇಶನ್ ಕಲಕೇರಿ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ ಹಾಗೂ ಬಿಎಲ್‌ಡಿಇ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಬೃಹತ್ ಆರೋಗ್ಯ ಶಿಬಿರ ಆದರ್ಶ ಗ್ರಾಮ ಪಂಚಾಯತ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಭೈರಿ ಫೌಂಡೇಶನ್ ಅಧ್ಯಕ್ಷ ಡಾ. ನಂದಕುಮಾರ ಭೈರಿ ಮಾತನಾಡಿ ದೇಶಕ್ಕೆ ಸ್ವಾಂತಂತ್ರ್ಯ ತಂದುಕೊಟ್ಟು ಮಹಾತ್ಮ ಕೇವಲ ಸ್ವಾತಂತ್ರ್ಯವನ್ನು ಕೊಡದೆ ಭವಿಷ್ಯದ ಭಾರತ ಹೇಗಿರಬೇಕೆಂಬುದೂ ತೋರಿಸಿಕೊಟ್ಟು ಹೋಗಿದ್ದಾರೆ. ಅವರು ದೇಶದ ಪ್ರಗತಿಯನ್ನು ಗ್ರಾಮಗಳ ಅಭಿವೃದ್ಧಿಯಲ್ಲಿ ಕಂಡರು ಆದ್ದರಿಂದ ನಾವಿಂದು ಎರಡು ರೀತಿಯ ಶಿಬಿರಗಳನ್ನು ನಡೆಸಿದ್ದೇವೆ. ಒಂದು ದೇಹಕ್ಕೆ ಸಂಬಂಧಿಸಿದ ಮತ್ತೊಂದು ಸಮಾಜದ ಆರೋಗ್ಯಕ್ಕೆ ಸಂಬಂಧಿಸಿದ ಶಿಬಿರ, ಉತ್ತಮವಾಗಿ ಕೆಲಸ ಮಾಡುತ್ತಿರುವ ಪಂಚಾಯತಗಳನ್ನು ಗೌರವಿಸುವ ಕೆಲಸವನ್ನೂ ಮಾಡುತ್ತಿದ್ದೇವೆ ಎಂದರು. 

ಮಾಜಿ ಶಾಸಕ ಶರಣಪ್ಪ ಸುಣಗಾರ ಸುಭಾಷ ಛಾಯಾಗೋಳ, ಬಿ. ಎಸ್‌. ಪಾಟೀಲ(ಯಾಳಗಿ) ಗೌರಮ್ಮ ಮುತ್ತತ್ತಿ ಹಾಗೂ ಸುಜಾತಾ ಕಳ್ಳಿಮನಿ ಮಾತನಾಡಿದರು. ಮಾಜಿ ಶಾಸಕ ಶಿವಪುತ್ರ​‍್ಪ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಕಲಕೇರಿ ಸಂಸ್ಥಾನ ಹಿರೇಮಠದ ಪ.ಪೂ.ಷ.ಬ್ರ. ಸಿದ್ಧರಾಮ ಶಿವಾಚಾರ್ಯ ಶ್ರೀಗಳು ಹಾಗೂ ಕಲಕೇರಿ ಗದ್ದಗಿಮಠ ಸಂಸ್ಥಾನದ ಪ.ಪೂ.ಷ.ಬ್ರ. ಮಡಿವಾಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ವೇದಿಕೆಯಲ್ಲಿ ಮೌಲಾನಾ ನಾಶೀರ ಇನಾಮದಾರ ಡಾ. ವಿಶ್ವನಾಥ ಜಾಲಹಳ್ಳಿಮಠ, ಆನಂದಗೌಡ ದೊಡಮನಿ, ಬ್ಲಾಕ್ ಕಂಗ್ರೆಸ್ ಅಧ್ಯಕ್ಷ ಬಶೀರ ಶೇಠ, ಗ್ರಾ.ಪಂ. ಅಧ್ಯಕ್ಷೆ ಮಕ್ತುಂಬಿ. ದ. ಹೊನ್ನಳ್ಳಿ, ಉಪಾಧ್ಯಕ್ಷೆ ಕಸ್ತೂರಬಾಯಿ .ಮ. ಬಡಿಗೇರ, ಭೈರಿ ಫೌಂಡೇಶನ್ ಸಂಸ್ಥಾಪಕ ಪ್ರಭು ಭೈರಿ, ಸುರೇಶಗೌಡ ನಾಡಗೌಡ ,ಜಹಾಂಗೀರ ಸಿರಸಗಿ, ಸುರೇಶಬಾಬುಗೌಡ ಪೀರಾಪೂರ ಇದ್ದರು. 


ಸುದ್ದಿ ಓದಿ