ಬದುಕಿನಲ್ಲಿ ಆರೋಗ್ಯ ಪೂರ್ಣ ಜೀವನ ಶಾಶ್ವತ
ತಾಳಿಕೋಟೆ09: ಬದುಕಿನಲ್ಲಿ ಎಲ್ಲ ಸಂಪತ್ತಿಗಿಂತ ಆರೋಗ್ಯ ಪೂರ್ಣ ಜೀವನವೇ ಶಾಶ್ವತ ಎಂಬುದು ಎಲ್ಲರಿಗೂ ಮನದಟ್ಟಾಗುತ್ತಿದೆ. ಅಂತಹ ಆರೋಗ್ಯಕ್ಕೆ ಸುಂದರ ಬೆಟ್ಟ, ಗಿಡ, ಮರಗಳು ತುಂಬಿರುವ ಸ್ವಚ್ಛ ಪರಿಸರ ನಮ್ಮದಾಗಬೇಕು ಅಂತಹ ಕಾರ್ಯಕ್ಕೆ ಗ್ರಾಮದ ಯುವಪಡೆ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು.ತಾಲೂಕಿನ ಬ.ಸಾಲವಾಡಗಿ ಪರಮಾನಂದ ಬೆಟ್ಟದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ಗ್ರಾಮದಲ್ಲೂ ಯುವಪಡೆ ಇಂತಹ ಹಸಿರು ಪ್ರೀತಿ ಮೂಡಿಸಿಕೊಂಡರೆ ಇಡೀ ನಾಡು ಹಸಿರಾಗುತ್ತದೆ. ಸ್ವಚ್ಛ ಪರಿಸರ ನಿಮರ್ಾಣವಾಗಿ ಆರೋಗ್ಯ ಪೂರ್ಣ ಬದುಕು ನಮ್ಮದಾಗುತ್ತದೆ. ಕೊರೊನಾದಂತಹ ರೋಗಗಳು ನಮ್ಮನ್ನು ಬಾಧಿಸವು. ಪರಮಾನಂದ ಬೆಟ್ಟ ಭವಿಷ್ಯದಲ್ಲಿ ಹಸಿರಿಂದ ಪ್ರವಾಸಿತಾಣವಾಗುವುದರಲ್ಲಿ ಸಂಶಯವಿಲ್ಲ. ಪ್ರಕೃತಿ ರಮ್ಯನೋಟ ಇಲ್ಲಿದೆ. ಗಹನವಾದ ಕಾರ್ಯಕ್ಕೆ ಯುವಬಳಗ, ಪ್ರೇರಣೆಯಾಗಿ ಹಿರಿಯರು ಜೊತೆ ನಿಂತಿರುವುದು ಹೆಮ್ಮೆ ತಂದಿದೆ ಎಂದರು.
ನಿವೃತ್ತ ಎಸ್.ಪಿ. ರವಿ ಪಾಟೀಲ ಮಾತನಾಡಿ, ಯುವಪಡೆ ಕಲ್ಲು ಬೆಟ್ಟದಲ್ಲಿ ಸ್ವಪರಿಶ್ರಮದಿಂದ ನೂರಾರು ತೆಗ್ಗು ತೆಗೆದು ಸಸಿ ನಾಟಿಸಲು ಮುಂದಾಗಿರುವುದು ಖುಷಿ ತಂದಿದೆ. ಅವರಿಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.ಗುರುನಾಥ ಹೊರಗಿನಮನಿ ಮಾತನಾಡಿದರು. ಗ್ರಾಮದ ಯುವಕರು, ಹಿರಿಯರು ಸೇರಿ ಬೆಟ್ಟದಲ್ಲಿ ತೋಡಲಾಗಿದ್ದ ಗುಂಡಿಗಳಲ್ಲಿ ಸಸಿಗಳನ್ನು ನೆಟ್ಟರು. ಸಸಿಗಳ ಬುಡದಲ್ಲಿ ಬೇವಿನಹಿಂಡಿ ಹಾಗೂ ಎನ್.ಪಿ.ಕೆ.ಗೊಬ್ಬರವನ್ನು ಹಾಕಲಾಯಿತು. ಬೆಟ್ಟದಲ್ಲಿ 200 ಸಸಿ ನೆಟ್ಟಿದ್ದು ಬೆಟ್ಟದ ಬುಡದಿಂದ ಗ್ರಾಮದವರೆಗಿನ ರಸ್ತೆಯಲ್ಲೂ ಗ್ರಾಮ ಪಂಚಾಯತ ವತಿಯಿಂದ ತೆಗ್ಗು ತೆಗೆಸಿದ್ದು ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿಗಳನ್ನು ನೆಡಲಾಗುವದು ಎಂದು ತಿಳಿಸಿದರು.
ಪರಿಸರ ಕಾರ್ಯಕ್ರಮದಲ್ಲಿ ವೇ.ಮೂತರ್ಿ ಮಲ್ಲಿಕಾಜರ್ುನಸ್ವಾಮಿ ಹಿರೇಮಠ, ಗುರುನಾಥಗೌಡ ಗುರಡ್ಡಿ, ಕುಮಾರಗೌಡ ದೊಡಮನಿ, ಮಧುಗೌಡ ಪಾಟೀಲ, ಶಶಿಗೌಡ ಕಾರಲಕುಂಟಿ, ಮಲ್ಲನಗೌಡ ಕಾರಲಕುಂಟಿ, ಮುದಕನಗೌಡ ದೊಡಮನಿ, ಅಯ್ಯನಗೌಡ ಯಾಳಗಿ, ವೀರೇಶ ಚಿಂಚೋಳಿ, ಮುದುಕನಗೌಡ ಹೊರಗಿನಮನಿ, ಶೇಖುಗೌಡ ದೊಡಮನಿ, ಚಂದ್ರಗೌಡ ಮೂಲಿಮನಿ, ರಾಜುಗೌಡ ಕೋಳೂರ, ರಾಮನಗೌಡ ವಠಾರ, ಶಿವರಾಮ ಪಾಟೀಲ, ನಿಂಗನಗೌಡ ಯಾಳಗಿ, ಮುತ್ತು ಯಾಳಗಿ, ಶ್ರೀಕಾಂತ ಪತ್ತಾರ, ಶರಣು ಗಡೇದ, ಇದ್ದರು.ತಾನಾಜಿ ಪ್ರಾಥರ್ಿಸಿದರು. ಅಜೀತ ಯಾಳಗಿ ಸ್ವಾಗತಿಸಿದರು. ಅಪ್ಪಾಸಾಹೇಬ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಮ ಪಾಟೀಲ ವಂದಿಸಿದರು.