ಯರಗಟ್ಟಿ

ಶಾಲಾ ಮಕ್ಕಳ ಆರೋಗ್ಯ ತಪಾಸಣೆ: ಹೆಗ್ಗನ್ನವರ

ಶಾಲಾ ಮಕ್ಕಳ ಆರೋಗ್ಯ ತಪಾಸಣೆ: ಹೆಗ್ಗನ್ನವರ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ 

ಯರಗಟ್ಟಿ 09: ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ತಾಲೂಕಿನ ಸರಕಾರಿ ಹಾಗೂ ಖಾಸಗಿ ಶಾಲೆಗಳ 1-19 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು. 

ಸಮೀಪದ ಬೆನಕಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆರ್‌ಬಿಎಸ್‌ಕೆ ಯೋಜನೆಯ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. 

ಶಿಕ್ಷಣ ಎಂದರೆ ಮನುಷ್ಯನ ಸರ್ವತೋಮುಖ ಬೆಳವಣಿಗೆ. ಆರೋಗ್ಯವಾದ ಮನಸ್ಸು ಆರೋಗ್ಯವಾದ ದೇಹದೊಳಗೆ ಎನ್ನುವ ನಾಣ್ನುಡಿಯಂತೆ ಮಗುವಿನ ಸವಾಂರ್ಗೀಣ ಬೆಳವಣಿಗೆ ಮಾಡುವುದೇ ಶಿಕ್ಷಣದ ಗುರಿ. ಶಾರೀರಿಕ, ಬೌದ್ಧಿಕ, ಸಾಮಾಜಿಕ, ನೈತಿಕ ವಿಕಾಸವನ್ನುಂಟು ಮಾಡುವಲ್ಲಿ ದೈಹಿಕ ಹಾಗೂ ಆರೋಗ್ಯ ಶಿಕ್ಷಣ ಮಹತ್ವದ ಪಾತ್ತವನ್ನು ವಹಿಸುತ್ತದೆ ಎಂದು ಹೆಗ್ಗನ್ನವರ ತಿಳಿಸಿದರು. 

ಡಾ. ಖಾಜಪ್ಪ ಹೊಸಮನಿ ಮಾತನಾಡಿ ಯೋಜನೆಯಡಿ 1 ರಿಂದ 10ನೇ ತರಗತಿಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು ಎಂದರು. 

ಕಾರ್ಯಕ್ರಮಕ್ಕೆ ತಾಲೂಕಿನಿಂದ ಇಬ್ಬರು ವೈದ್ಯರು ಹಾಗೂ ಒಬ್ಬರು ನೇತ್ರ ಸಹಾಯಕರು, ಒಬ್ಬರು ಎಎನ್‌ಎಂಗಳನ್ನು ನಿಯೋಜಿಸಿದ್ದು ಸೀಳುತುಟಿ, ಉಸಿರಾಟದ ತೊಂದರೆ, ಕಣ್ಣಿನ ತೊಂದರೆ, ಕಿವಿ, ಗಂಟಲು, ಮೂಗಿನ ತೊಂದರೆ, ಅಪೌಷ್ಟಿಕತೆ, ಮೂರ್ಚೆ ರೋಗದಿಂದ ಬಳಲುತ್ತಿರುವ, ಹೃದಯ ಸಂಬಂಧಿ ರೋಗಗಳ ಬಗ್ಗೆ ತಪಾಸಣೆ ನಡೆಸಲಾಗುವುದು. 

ಆರೋಗ್ಯ ಕಾರ್ಡಿನ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಅಥವಾ ಬೆಂಗಳೂರು ಆಸ್ಪತ್ರೆಗೆ ಕಳುಹಿಸಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಹೇಳಿದರು. 

ಚಾಕಲೇಟ್, ಜಿಂಕ್ ಫುಡ್ ಇನ್ನಿತರೆ ಆಹಾರ ಪದಾರ್ಥಗಳು ಮಕ್ಕಳಿಗೆ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹಸಿವು ಕಡಿಮೆಯಾಗಿ ಸರಿಯಾಗಿ ಊಟ ಮಾಡದೇ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗಾಗಿ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಊಟವನ್ನೇ ನೀಡಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು. 

 ಡಾ. ಶಶಿಕಲಾ ತಡಕೋಡ, ನೇತ್ರಸಹಾಯಕ ವಸಂತ ಶಿರೂರ, ಸಿ.ಆರ್‌.ಪಿ. ಜಿ. ಎನ್‌. ಮಲಕನ್ನವರ, ಮುಖ್ಯಶಿಕ್ಷಕ ವಿ. ಸಿ. ಮಡ್ಡಿ ಶಿಕ್ಷಕರಾದ ಎಸ್‌. ಎಚ್‌. ಚೂರಿಖಾನ, ಎನ್‌. ಕೆ. ಪತ್ತಾರ, ಎಲ್‌. ಎ. ಬಾಣದಾರ, ಎಸ್‌. ಬಿ. ಲಾಳಸಂಗಿ, ಆರ್‌. ಜೆ. ದರೆನ್ನವರ, ಮಹಾಂತೇಶ ಎಚ್, ಯು. ಎಲ್‌. ಕಂಕಣವಾಡಿ, ಎ. ಎಸ್‌. ಕಾಡವ್ವಗೋಳ  ಇನ್ನಿತರರು ಹಾಜರಿದ್ದರು. 


ಸುದ್ದಿ ಓದಿ