ಒತ್ತಡದ ಬದುಕಿನಲ್ಲಿ ಆರೋಗ್ಯ ತಪಾಸಣೆ ಅವಶ್ಯಕ; ಉಮೇಶ್ ನಾಯ್ಕ್

ಒತ್ತಡದ ಬದುಕಿನಲ್ಲಿ ಆರೋಗ್ಯ ತಪಾಸಣೆ ಅವಶ್ಯಕ; ಉಮೇಶ್ ನಾಯ್ಕ್

ಬಳ್ಳಾರಿ 03: ಪ್ರಸ್ತುತ ಒತ್ತಡ ಜೀವನದ ಬದುಕಿನಲ್ಲಿ ಆರೋಗ್ಯ ತಪಾಸಣೆ ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎಂದು ನಗರ ಡಿವೈಎಸ್ಪಿ ಉಮೇಶ್ ಈಶ್ವರ ನಾಯ್ಕ್ ಹೇಳಿದರು. ನಗರದ ಎಪಿಎಂಸಿ ಪ್ರದೇಶದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಸ್ಪತ್ರೆಯಲ್ಲಿ ಭಾನುವಾರ  ಸನ್ಮಾರ್ಗ ಗೆಳೆಯರ ಬಳಗ ಮತ್ತು ಬಂಡಾರಿ ಏಜೆನ್ಸೀಸ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರಗಳು ಹಮ್ಮಿಕೊಳ್ಳುವುದರಿಂದ ಬಡವರಿಗೆ, ನಿರ್ಗತಿಕರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸನ್ಮಾರ್ಗ ಗೆಳೆಯರ ಬಳಗ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಅಲ್ಲದೆ, ಎಪಿಎಂಸಿ ಯಾಡರ್್ನಲ್ಲಿ ಈ ಶಿಬಿರ ಹಮ್ಮಿಕೊಂಡಿರುವುದು ಇನ್ನೂ ವಿಶೇಷ

ಈ ಪ್ರದೇಶದಲ್ಲಿ ಕಾಮರ್ಿಕರು, ಹಮಾಲಿಗಳು, ಕೂಲಿ ಕೆಲಸಗಾರರು ಇರುವುದರಿಂದ ಅವರಿಗೆ ಅನುಕೂಲವಾಗಲಿದೆ. ಇಂತಹ ಶಿಬಿರದ ಸುದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿಪಿಐ ಪ್ರಸಾದ್ ಕೆ ಗೋಖಲೆ, ಪಿಎಸ್ಐಗಳಾದ ಹನುಮಂತಪ್ಪ, ಚಿದಾನಂದ ಎಂ.ಗದಗ, ಎಂಪಿಎಂಸಿ ಕಾರ್ಯದಶರ್ಿ ಖಲೀಲ್ ಸಾಬ್, ಎಪಿಎಂಸಿ ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಸಿರಿಗೇರಿ ಬಿ.ಮಹಾರುದ್ರಗೌಡ, ಕಾರ್ಯದಶರ್ಿ ವಿ.ರಾಮಚಂದ್ರ, ಕೆ.ಸಿ.ಸುರೇಶ್, ಅಶೋಕ್ ಬಂಡಾರಿ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದಶರ್ಿ ಕಪ್ಪಗಲ್ಲು ಚಂದ್ರಶೇಖರ ಆಚಾರ್, ತೇಜ ರಘು, ರಾಮರಾವ್, ಗೋಪಾಲ್, ಮಹೇಶ್, ವಿಶ್ವ ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಡಾ. ವಿಜಯಶಂಕರ್, ಡಾ.ಶರಣ, ಡಾ. ಪರಸಪ್ಪ, ಡಾ.ರಘುಕುಮಾರ್ ಅವರು ಶಿಬಿರದಲ್ಲಿ  ಆಗಮಿಸಿದ್ದ  ರೋಗಿಗಳ ನೇತ್ರ ಮತ್ತು ಆರೋಗ್ಯ ತಪಾಸಣೆ ನಡೆಸಿದರು. ರೋಗಿಗಳಿಗೆ ಸಬಂಧಿಸಿದಂತೆ ಉಚಿತ ಔಷಧಗಳನ್ನು ನೀಡಲಾಯಿತು.  ನೆತ್ರ ತಪಾಸಣೆಗೆ ಆಯ್ಕೆಯಾದವರನ್ನು ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಕರೆದೊಯ್ಯಲಾಗುವುದು ಎಂದು ಕಪ್ಪಗಲ್ಲು ಚಂದ್ರಶೇಖರ ಆಚಾರ್ ತಿಳಿಸಿದರು.

ಸುದ್ದಿ ಓದಿ