ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ
ಯರಗಟ್ಟಿ 04: ದಿ. 3ರಂದು ಯರಗಟ್ಟಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಟ್ಟಣ ಪಂಚಾಯತಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಅಸಾಂಕ್ರಾಮಿಕ ರೋಗಗಳ ಕುರಿತು ಮತ್ತು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಎಸ್ ಆರ್ ಪಾಟೀಲ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆಯ ಡಾ ಬಿ ಎಸ್ ಬಳ್ಳೂರ ಆಯ್ ಆರ್ ಗಂಜಿ ಮಂಜುಳಾ ಈರಗಾರ ಸುನಿಲ ಕಾಶನ್ನವರ ಸರಸ್ವತಿ ಬಾಲನ್ನವರ ಸಮೀರ ಗೊರೆಕಾನ ಲಕ್ಷ್ಮಿ ಕಟಾಕಟಿ ರುದ್ರಗೌಡ ಪಾಟೀಲ ಆಶಾ ಕಾರ್ಯಕರ್ತೆಯರು ಪೌರಕಾರ್ಮಿಕರು ಹಾಜರಿದ್ದರು.
ಇವತ್ತಿನ ಆಧುನಿಕ ಜೀವನ ಶೈಲಿ ಒತ್ತಡದ ಜೀವನ, ಚಟಗಳು ಅನುವಂಶೀಯತೆಯಿಂದ
ಅಸಾಂಕ್ರಾಮಿಕ ರೋಗಗಳಾದ Non Communicable Diseases) ಬಿಪಿ ಶುಗರ್ ಕ್ಯಾನ್ಸರ್ ಹೃದಯಕ್ಕೆ ಸಂಬಂಧಪಟ್ಟಂತ ಕಾಯಿಲೆ ಕಣ್ಣಿನ ಪೊರೆ ಕಿಡ್ನಿ ತೊಂದರೆ ಬರುತ್ತಲಿವೆ.
ಇವುಗಳನ್ನು ನಿಯಂತ್ರಿಸಲು ಆಹಾರ ಪದ್ಧತಿಯಲ್ಲಿ ಇತಿಮಿತಿ ಚಟಗಳಿಂದ ದೂರ ಇರುವುದು ಜೀವನ ಶೈಲಿಯಲ್ಲಿ ಬದಲಾವಣೆ ವ್ಯಾಯಾಮ ಯೋಗಾಸನ ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಶ್ರೀ ಆಯ್ ಆರ್ ಗಂಜಿ ಹೇಳಿದರು. ತುಂಬಾಕು ಮತ್ತು ತಂಬಾಕು ಉತ್ಪನ್ನಗಳಿಂದ ಮಾನವ ಶರೀರದ ಮೇಲೆ ಅನೇಕ ಸಮಸ್ಯೆಗಳು ಆಗುತ್ತಲಿವೆ. ಮೋಜಿಗಾಗಿ ಮಸ್ತಿಗಾಗಿ ಸ್ನೇಹಿತರ ಒತ್ತಡಕ್ಕಾಗಿ ಚಿಂತೆಯನ್ನು ಮರೆಯಲು ಮತ್ತೊಬ್ಬರ ನಟನೆಯನ್ನು ಅನುಕರಣೆ ಮಾಡಲು ಧೂಮಪಾನ ಮದ್ಯಪಾನಕ್ಕೆ ಇವತ್ತಿನ ಜನರು ಒಳಗಾಗುತ್ತಿದ್ದಾರೆ ಎಂದು ಎನ್ ಸಿ ಡಿ ಕೌನ್ಸಲರ್ ಸರಸ್ವತಿ ಬಾಲನ್ನವರ ಹೇಳಿದರು.
ತಂಬಾಕು ಸೇವನೆಯಿಂದ ನಮ್ಮ ದೇಹದ ಬಾಯಿಯ ಆರೋಗ್ಯ ವಸಡು ಹಲ್ಲು ಗಂಟಲಿನ ಕ್ಯಾನ್ಸರ್ ದ ಗಂಭೀರ ಸಮಸ್ಯೆಯಾಗಲಿದೆ. ಇದು ಅಲ್ಲದೆ ದೇಹದ ಹೊಟ್ಟೆಯ ಭಾಗದಲ್ಲಿನ ಅಂಗಾಂಗಗಳಿಗೆ ಹಾಗೂ ಶರೀರದ ಇತರೆ ಭಾಗಗಳಿಗೆ ತೊಂದರೆ ಮಾಡುತ್ತಿದ್ದು ಇದನ್ನು ನಿಯಂತ್ರಿಸುವುದು ಅತೀ ಅವಶ್ಯಕವಾಗಿದೆ.
ಇದರ ನಿಯಂತ್ರಣಕ್ಕಾಗಿ ಯೋಗ ಧ್ಯಾನ ಹಾಗೂ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಸಮುದಾಯ ಆರೋಗ್ಯಾಧಿಕಾರಿಯಾದ ಮಂಜುಳಾ ಈರಗಾರ ಕರೆ ನೀಡಿದರು.
ಪೌರಕಾರ್ಮಿಕರು ಧೂಮ್ರಪಾನ ಮದ್ಯಪಾನ ಚಟಕ್ಕೆ ಬಲಿಯಾಗದೇ ಆರೋಗ್ಯವಂತರಾಗಿ ಇರಲು ಅಧ್ಯಕ್ಷತೆ ವಹಿಸಿದ್ದ ಡಾ ಬಿ ಎಸ್ ಬಳ್ಳೂರ ಕಿವಿಮಾತು ಹೇಳಿದರು.
ಶ್ರೀ ಸುನಿಲ ಕಾಶನ್ನವರ ನಿರೂಪಣೆ ಮಾಡಿ ಸ್ವಾಗತಿಸಿ ವಂದಿಸಿದರು.