‘ಕರ್ನಾಟಕ ಏಕೀಕರಣ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಪಾತ್ರ ಪ್ರಮುಖ’
ಶಿಗ್ಗಾವಿ 24: ಕರ್ನಾಟಕ ಏಕೀಕರಣ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಪಾತ್ರ ಪ್ರಮುಖವಾದದ್ದು ಎಂದು ಹಾವೇರಿಯ ಖ್ಯಾತ ಸಾಹಿತಿಗಳಾದ ಸತೀಶ ಕುಲಕರ್ಣಿ ಹೇಳಿದರು.
ತಾಲೂಕಿನ ಕೃಷಿ ನಗರದಲ್ಲಿ ಕರ್ನಾಟಕ ಏಕೀಕರಣ ಟ್ರಸ್ಟ(ರಿ) ಕೃಷಿನಗರ, ಗೊಟಗೋಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಭಿರದಲ್ಲಿ ಮಾತನಾಡಿದ ಅವರು ನಾಡಿನ ಸಾಹಿತ್ಯ,ಕಲೆ,ಸಂಸ್ರ್ಕತಿಯನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಏಕೀಕರಣ ಟ್ರಸ್ಟನ ಕಾರ್ಯ ಮಹತ್ವವಾದದ್ದು ಎಂದರು.
ಜಿಲ್ಲೆಯ ಇನ್ನೋರ್ವ ಹಿರಿಯ ಮಹಿಳಾ ಸಾಹಿತಿಗಳಾದ ಸಂಕಮ್ಮ ಸಂಕಣ್ಣವರ ಅವರು ಮಾತನಾಡಿ ಕರ್ನಾಟಕ ಏಕೀಕರಣ ಟ್ರಸ್ಟ ಮಹಿಳೆಯರ ಸಭಲೀಕರಣವನ್ನು ದ್ರಷ್ಟಿಯಲ್ಲಿ ಇಟ್ಟುಕೊಂಡು ಮಹಿಳೆಯರಿಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸವನ್ನು ಟ್ರಸ್ಟ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಆರ್.ಬಿ.ಎಸ್.ಕೆ ವೈಧ್ಯಾದಿಕಾರಿ ಡಾಽಜಿ.ಜಿ. ನಾಯಕರ ಅವರು ಮಾತನಾಡಿ ಮನುಷ್ಯನಿಗೆ ಇಂದು ಆರೋಗ್ಯ ಬಹಳ ಮುಖ್ಯ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಮನುಷ್ಯನಿಗೆ ನಾಡುನುಡಿ ಸಂಸ್ರ್ಕತಿ ರಕ್ಷಣೆ ಸಾಧ್ಯ ಆ ನಿಟ್ಟಿನಲ್ಲಿ ಇಂತಹ ಸಣ್ಣ ಹಳ್ಳಿಯಲ್ಲಿ ಈ ಆರೋಗ್ಯ ಶಿಭಿರ ಮಾಡಿದ ಟ್ರಸ್ಟನ್ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷೆ ಡಾ.ಸುಜಾತ ಅಕ್ಕಿ ಅವರು ಮಾತನಾಡಿ ಟ್ರಸ್ಟ ಸಂಸ್ಥಾಪನೆ ಆಗಿ 2 ವರ್ಷ ಆಗಿದೆ ಅಲ್ಲಿಂದ ಇಲ್ಲಿಯವರೆಗೂ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೆವೆ ಮುಂದೆಯು ಸಹ ಈ ನಾಡಿನ ಸಾಹಿತ್ಯ,ಜಾನಪದ ಕಲೆ,ಸಂಸ್ರ್ಕತಿಯನ್ನು ಉಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವನಹಳ್ಳಿ ಗ್ರಾಮ ಪಂಚಾಯತ ಸದಸ್ಯ ಗಂಗಾಧರಯ್ಯ ಕಲ್ಮಠ, ಕ್ರಷ್ಣಾ ಪಡವಳ್ಳಿ, ಮೇಘಾ ರಾಮಣ್ಣ ವಡ್ಡರ, ಶಾರದಾ ತಳವಾರ ಹಾಗೂ ತಾಲೂಕ ಆಸ್ಪತ್ರೆ ಸಿಬ್ಬಂಧಿಗಳಾದ ಎಸ್.ಎಸ್.ಪಾಟೀಲ, ಮಂಜುನಾಥ ಸಂಜೀವಣ್ಣವರ ಪ್ರಾಥಮಿಕ ಶಾಲೆಯ ಶಿಕ್ಷಕರಾದ ನಟರಾಜ ದೊಡ್ಮನಿ, ಡಾ.ಪಕ್ಕಿರೇಶ ಕಡ್ಡಿ, ಪಕ್ಕಿರೇಶ ರಿತ್ತಿ, ಕಾಳಪ್ಪ ಇಂದ್ರೇಕರ ಹಾಗೂ ಕೃಷಿನಗರದ ಗ್ರಾಮಸ್ಥರು ಅಂಗನವಾಡಿ ಆಶಾ ಕಾರ್ಯಕರ್ತೆಯರು ಇದ್ದರು. ಬಸವರಾಜ ಶಿಗ್ಗಾಂವ ಹಾಗೂ ತಂಡದವರು ನಾಡು ನುಡಿ ಕುರಿತಾದ ಜನಪದ ಗೀತೆ ಹಾಡಿದರು. ಶರೀಫ ಮಾಕಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ನಾಗರಾಜ ಎಸ್ ಸ್ವಾಗತಿಸಿದರು, ಡಾ.ರಾಜಶೇಖರ ಡೊಂಬರಮತ್ತೂರ ಕಾರ್ಯಕ್ರಮ ನಿರ್ವಹಿಸಿದರು ಡಾ.ಶಂಕರ ಕುಂದಗೋಳ ವಂದಿಸಿದರು.