ತಾಳಿಕೋಟಿ

ಹಿಂದೂ ಮುಸ್ಲಿಂ ಧರ್ಮಗಳ ನಡುವೆ ಸೌಹಾರ್ಧತೆ ಅವಶ್ಯ

ಹಿಂದೂ ಮುಸ್ಲಿಂ ಧರ್ಮಗಳ ನಡುವೆ ಸೌಹಾರ್ಧತೆ ಅವಶ್ಯ


ತಾಳಿಕೋಟೆ02:ಭಾರತದ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ಹಿಂದು ಮುಸ್ಲಿಂರು ಭಾವಕ್ಯದಿಂದ ಬಾಳಬೇಕು. ಹಿಂದೂ ಮುಸ್ಲಿಂ ಧರ್ಮಗಳ ನಡುವೆ ಸೌಹಾರ್ಧತೆ ಬೆಳೆಸುವ ಆಶಯದಿಂದ ಇಫ್ತಾರ ಕೂಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೊಣ್ಣೂರಿನ ಸಿ.ಬಿ.ಅಸ್ಕಿ ಪೌಂಡೇಶನ್ ಮುಖ್ಯಸ್ಥ ಸಿ.ಬಿ.ಅಸ್ಕಿ ಹೇಳಿದರು. 

ಅವರು ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಸಿ.ಬಿ.ಅಸ್ಕಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸೌಹಾರ್ಧ ಇಫ್ತಿಯಾರ್ ಕೂಟದಲ್ಲಿ ಮಾತನಾಡಿದರು. 

ಶ್ರಾವಣ ಮಾಸ ಹಿಂದೂಗಳಿಗೆ ಹಾಗೂ ರಮಜಾನ ತಿಂಗಳು ಮುಸ್ಲಿಂ ಸಮಾಜದವರಿಗೆ ಪವಿತ್ರವಾದ ದಿನಗಳು. ಧರ್ಮ ಮತ್ತು ಆಚರಣೆಗಳು ಭಿನ್ನವಾಗಿ ಇದ್ದರೂ ನಾವೆಲ್ಲಾ ಮನುಷ್ಯರು ಎಂಬ ಸಂದೇಶ ಸಾರಲು ರೋಜಾದಲ್ಲಿರುವ ಮುಸ್ಲಿಮರನ್ನು ಸತ್ಕರಿಸಲಾಗುವದು. ಎಲ್ಲರಲ್ಲಿ ಹರಿಯುವ ರಕ್ತ ಒಂದೇಯಾಗಿದೆ. ಎಲ್ಲರಲ್ಲಿನ ಸಹೋದರತ್ವ ಭಾವನೆ ಕಂಡು ಬದುಕಬೇಕು. ಧರ್ಮದ ಹೆಸರಲ್ಲಿ ಎಲ್ಲಡೆ ಕೋಮು ಸಾಮರಸ್ಯ ಕದಡಲಾಗುತ್ತಿದೆ. ಹಿಂದೂ ಮುಸ್ಲಿಂ ಒಂದೇ ಎಂದು ಭಾವಿಸಿ ಜೀವನ ಸಾಗಿಸಬೇಕು. ಅತಿರೇಕದ ಹೇಳಿಕೆಗಳ ಬಗ್ಗೆ ತೆಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ರಾಜಕೀಯ ಕಾರಣದಿಂದ ಇಫ್ತಿಯಾರ ಕೂಟ ಹಮ್ಮಿಕೊಂಡಿಲ್ಲ. ಪ್ರತಿ ವರ್ಷ ಭಾವೈಕ್ಯತೆಯನ್ನು ಸಾರುವುದಕ್ಕಾಗಿ ನಮ್ಮ ಕುಟುಂಬ ಕೊಣ್ಣೂರದಲ್ಲಿ ಮಾತ್ರ ಇಫ್ತಿಯಾರ್ ಕೂಟಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಈ ಬಾರಿ ಮೊದಲ ಬಾರಿಗೆ ಮುದ್ದೇಬಿಹಾಳ, ನಾಲತವಾಡ ಮತ್ತು ತಾಳಿಕೋಟೆ ಪಟ್ಟಣಗಳಲ್ಲಿ ಇಫ್ತಿಯಾರ್ ಕೂಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ ಮಾತನಾಡಿ, ಭಾರತದ ಸಂವಿಧಾನ ಎಲ್ಲ ಧರ್ಮಗಳು ಒಂದೇ ಎಂದು ಹೇಳುತ್ತದೆ. ನಮ್ಮ ಧರ್ಮವನ್ನು ಪ್ರೀತಿಸಬೇಕು ಇನ್ನೊಬ್ಬರ ಧರ್ಮವನ್ನು ಗೌರವಿಸಿದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದರು. 

ಮುಸ್ಲಿಂ ಧರ್ಮಗುರು ಸೈಯದ ಶಕೀಲಅಹ್ಮದ ಖಾಜಿ, ಖಾಸ್ಗತೇಶ್ವರ ಮಠದ ಆಡಳಿತಾಧಿಕಾರಿ ವೇ.ಮುರಗೇಶ ವೀರಕ್ತಮಠ ಆಶಿರ್ವಚನ ನೀಡಿದರು. 

ವೇದಿಕೆಯಲ್ಲಿ ಮುಖಂಡರಾದ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ, ಕೆ.ಎಚ್‌.ಪಾಟೀಲ, ರಾಮನಗೌಡ ಇಂಗಳಗಿ, ಶಮಶುದ್ದಿನ ನಾಲಬಂದ, ಬಿ.ಎಸ್‌.ಇಸಾಂಪೂರ, ಮಡುಸಾಹುಕಾರ ಬಿರಾದಾರ, ಇಬ್ರಾಹಿಂ ಮನ್ಸೂರ, ಮಹಮ್ಮದ ಗೌಸ್, ಶ್ರೀಧರ ಪಾಟೀಲ, ಹಸನ ಕಾಳಗಿ, ಸುರೇಶ ಹಜೇರಿ, ನದೀಂ ಕಡು ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ