ಧಾರವಾಡ - ಹುಬ್ಬಳ್ಳಿ

ವಿದ್ಯಾರ್ಥಿಗಳು ಗುರಿ ತಲುಪಲು ಕಠಿಣ ಶ್ರಮ ಅವಶ್ಯಕ : ಡಾ. ಪ್ರಸಾದ

ವಿದ್ಯಾರ್ಥಿಗಳು ಗುರಿ ತಲುಪಲು ಕಠಿಣ ಶ್ರಮ ಅವಶ್ಯಕ : ಡಾ. ಪ್ರಸಾದ

ಧಾರವಾಡ 12: ವಿದ್ಯಾರ್ಥಿಗಳು ಕನಸುಗಳನ್ನು ಕಾಣುವುದರ ಜೊತೆಗೆ ಅವುಗಳನ್ನು ಸಾಕಾರಗೊಳಿಸಲು ನಿರಂತರವಾದ ಕಠಿಣ ಶ್ರಮ ಅವಶ್ಯಕ ಎಂದು ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಚಿ.ವಿ. ಎಚ್‌. ವಿ ಪ್ರಸಾದ ಹೇಳಿದರು.ಇಲ್ಲಿನ ಕೆ.ಇ. ಬೋರ್ಡಿನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿ ಒಕ್ಕೂಟ, ಸಾಂಸ್ಕೃತಿಕ, ಎನ್‌.ಎಸ್‌.ಎಸ್  ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶುಕ್ರವಾರದಂದು ಮಹಾವಿದ್ಯಾಲಯದ ಸಭಾಭವನದಲ್ಲಿ ಏರಿ​‍್ಡಸಲಾಗಿತ್ತು.  

ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ. ಸುನೀತ ಪುರೋಹಿತ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ, ತಮ್ಮ ಸಾಧನೆಯ ಮೆಟ್ಟಿಲೇರಬೇಕು ಎಂದು ಹೇಳಿದರು.  

ಕಾಲೇಜು ಪ್ರಾಚಾರ್ಯ ಪ್ರೊ.ಎಂ.ವಿ ಸಿದ್ಧಾಂತಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಅತಿಥಿಗಳ ಸ್ವಾಗತ ಮತ್ತು ಪರಿಚಯವನ್ನು ಪ್ರೊ. ಡಿ ಆರ್ ಉಡಕೇರಿ, ಹಾಗೂ ಪ್ರೊ. ವಿದ್ಯಾ ಜಮಖಂಡಿ ವಾರ್ಷಿಕ ವರದಿಯನ್ನು ಮಂಡಿಸಿದರು. ಎನ್ ಎಸ್ ಎಸ್ ಅಧಿಕಾರಿ ಈಶ್ವರರಾವ್ ಕರಾತ್, ಶಿವಪ್ಪ ಗಾಣಿಗೇರ, ಆನಂದ ಯಲಿಗಾರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಹುಣಸಿಕಟ್ಟಿ ಹಾಗು ವಿಜಯ ಹಂದಿಗನೂರ ಉಪಸ್ಥಿತರಿದ್ದರು. ಪ್ರೊ. ಶಿವಾನಂದ ಗಾಯಕವಾಡ ನಿರೂಪಿಸಿದರು. 


ಸುದ್ದಿ ಓದಿ