ಮರಳಿನಲ್ಲಿ ಅರಳಿದ ಹಂಪಿ ವೈಭವದ ಸ್ಮಾರಕ

ಮರಳಿನಲ್ಲಿ ಅರಳಿದ ಹಂಪಿ ವೈಭವದ ಸ್ಮಾರಕ

ಬಳ್ಳಾರಿ(ಹಂಪಿ) 27: ವಿಜಯನಗರ ಸಾಮ್ರಾಜ್ಯದ ವೈಭವದ ಸ್ಮಾರಕಗಳು ಮರಳು ಶಿಲ್ಪಿಗಾರರ ಕೈಚಳಕದಿಂದ ಮರಳಿನಲ್ಲಿ ಅದ್ಭುತವಾಗಿ ಅರಳಿದ್ದು, ಈ ಬಾರಿಯ ಹಂಪಿ ಉತ್ಸವಕ್ಕೆ ವಿಶೇಷ ಮೆರಗು ನೀಡುವುದರ ಜತೆಗೆ ಕಣ್ಮನ ಸೆಳೆಯುವುದಕ್ಕೆ ಸಜ್ಜಾಗಿವೆ.

ಹಂಪಿಯ ಎದುರು ಬಸವಣ್ಣ ಹತ್ತಿರದ ಮಾತಂಗಪರ್ವತ ಮೈದಾನದ ಆವರಣದಲ್ಲಿ ವಿರೂಪಾಕ್ಷ ದೇವಾಲಯದ ದ್ವಾರಗೋಪುರ, ಸಾಸಿವೆ ಕಾಳು ಗಣೇಶ, ಲಕ್ಷ್ಮೀನರಸಿಂಹ, ಕಮಲಮಹಲ್, ಗಜಶಾಲೆ, ಕಲ್ಲಿನ ರಥ, ವಿಜಯನಗರ ಸಾಮ್ರಾಜ್ಯದ ಲಾಂಛನ, ಹಂಪಿ ಉತ್ಸವದ ಲಾಂಛನ ಹಾಗೂ ನಟರಾಜ ಸ್ಮಾರಕಗಳನ್ನು ಮುಂಬೈ,ಒಡಿಸ್ಸಾ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಮರಳು ಶಿಲ್ಪಿಗಾರರು ಫೆ.24ರಿಂದ ತಮ್ಮ ಕೈಚಳಕದಿಂದ ಅದ್ಭುತವಾಗಿ ನಿಮರ್ಿಸುತ್ತಿದ್ದು, ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಫೆ.28ರ ಸಂಜೆಯವರೆಗೆ ಎಲ್ಲ ಸ್ಮಾರಕಗಳು ಹಂಪಿಗೆ ಆಗಮಿಸುವ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ ಮತ್ತು ಆಕಷರ್ಿಸಲಿವೆ.

ಮುಂಬೈ ಮತ್ತು ಒಡಿಸ್ಸಾದಿಂದ ಆಗಮಿಸಿರುವ ಖ್ಯಾತ ಮರಳು ಶಿಲ್ಪಿಗಳಾದ ನಾರಾಯಣ ಸಾಹು, ಸುಹಾಸ ಮಹಾರಾಣ ಮತ್ತು ಓಂ ಪ್ರಕಾಶ ಹಾಗೂ ಬೆಂಗಳೂರಿನಿಂದ ಆಗಮಿಸಿರುವ ಪ್ರವೀಣ, ಶಾಲಿನಿ, ಸಿ.ಪಿ.ಹಿರೇಮಠ, ಮಲ್ಲಿಕಾಜರ್ುನ ಮತ್ತು ಚಿದಾನಂದ ಅವರ ತಂಡ ಕಳೆದ ಐದು ದಿನಗಳಿಂದ ಮಾತಂಗಪರ್ವತ ಮೈದಾನದಲ್ಲಿ ಅತ್ಯಂತ ತಾಳ್ಮೆಯುತವಾಗಿ ಮರಳಿನಲ್ಲಿ ಹಂಪಿ ವೈಭವದ ಸ್ಮಾರಕಗಳನ್ನು ಅರಳಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಈ ಮರಳು ಶಿಲ್ಪ ಉತ್ಸವಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ ಹಾಗೂ ತಹಸೀಲ್ದಾರ್ ವಿಶ್ವನಾಥ, ಪ್ರವಾಸೋದ್ಯಮ ಇಲಾಖೆಯ ಉಪನಿದರ್ೇಶಕ ಮೋತಿಲಾಲ್ ಲಮಾಣಿ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಿ.ನಾಗರಾಜ ಪರಿಶೀಲಿಸಿದರು.


ಸುದ್ದಿ ಓದಿ