ಚಿಕ್ಕೋಡಿ

ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ: ಮಹಾರಾಷ್ಟ್ರದ ಕಬ್ಬು ನುರಿಸಲು ಅನುಮತಿ

ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ: ಮಹಾರಾಷ್ಟ್ರದ ಕಬ್ಬು ನುರಿಸಲು ಅನುಮತಿ

ಚಿಕ್ಕೋಡಿ 02: ಗಡಿ ಭಾಗದ ರೈತರ ಹಿತ ಕಾಯುವ ನಿಪ್ಪಾಣಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯು ಕರ್ನಾಟಕದ ಜೊತೆ ಮಹಾರಾಷ್ಟ್ರದ ಕಬ್ಬು ನುರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ ಕೊಲ್ಲಾಪೂರ ಜಿಲ್ಲೆಯ ಕಾಗಲ ಮತ್ತು ಗಡಹಿಂಗ್ಲಜ್ ತಾಲೂಕು ಕಾರ್ಖಾನೆಯ ಕಾರ್ಯಕ್ಷೇತ್ರಕ್ಕೆ ಸೇರೆ​‍್ಡಗೊಂಡಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು. 

ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರಿ ಕಾರ್ಖಾನೆಯ ಸಭಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಕ್ಕರೆ ಕಾರ್ಖಾನೆಗೆ ಬಹುರಾಜ್ಯ ಸ್ಥಾನಮಾನ ದೊರೆತಿದೆ. ಈ ಕುರಿತು ಕೇಂದ್ರ ಸರ್ಕಾರದ ಸಹಕಾರ ಇಲಾಖೆಯಿಂದ ಆದೇಶ ಪತ್ರ ಬಂದಿದೆೆ. ಇನ್ನುಮುಂದೆ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕಾಗಲ್ ಮತ್ತು ಗಡಹಿಂಗ್ಲಜ್ ತಾಲೂಕುಗಳ ಕೆಲವು ಗ್ರಾಮಗಳು ಅಧಿಕೃತವಾಗಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ಸೇರೆ​‍್ಡಗೊಂಡಿವೆ ಎಂದರು. 

ಕಾರ್ಖಾನೆಯು ಬಹುರಾಜ್ಯಕ್ಕೆ ಪರಿವರ್ತನೆಯಾದ ನಂತರ ಕಾಗಲ್ ತಾಲೂಕಿನ ಅರ್ಜುನಿ, ಲಿಂಗನೂರು, ಚಿಖಲಿ, ಗೊರಂಬೆ, ಶೆಂಡೂರು, ಶಂಕರವಾಡಿ, ವಂದೂರು, ಕರ್ನೂರು ಹಾಗೂ ಗಡಹಿಂಗ್ಲಜ್ ತಾಲೂಕಿನ ಮುತ್ನಾಳ್, ನಿಲಜಿ, ಹೆಬ್ಬಾಳ, ದುಂಡಗೆ, ಅವರನಾಳ ಗ್ರಾಮಗಳು ಕಾರ್ಖಾನೆ ವ್ಯಾಪ್ತಿಗೆ ಸೇರೆ​‍್ಡಗೊಂಡಿವೆ ಎಂದರು.  

ಕಾರ್ಖಾನೆಯು ಬಹುರಾಜ್ಯಗಳ ಸ್ಥಾನಮಾನ ಹೊಂದಿನ್ವಯ ನಿರ್ದೇಶಕರ ಸಂಖ್ಯೆ 16 ರಿಂದ 21 ಕ್ಕೆ ಹೆಚ್ಚಾಗಲಿದೆ. ಕಬ್ಬು ನುರಿಸುವ ಸಾಮರ್ಥ್ಯವನ್ನು 9 ಸಾವಿರ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸುವ ಮೂಲಕ, ಬರುವ ಹಂಗಾಮಿನಲ್ಲಿ ಕಬ್ಬು ನುರಿಸುವ ಗುರಿಯನ್ನು ಪೂರ್ಣಗೊಳಿಸಲಾಗುವುದು. ಎಥೆನಾಲ್ ಘಟಕ ಪೂರ್ಣಗೊಂಡಿದ್ದು ಉತ್ಪಾದನೆ ಶೀಘ್ರದಲ್ಲೆ ಪ್ರಾರಂಭವಾಗಲಿದೆ. 

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಕಾರ್ಖಾನೆಯ ಅಭಿವೃದ್ಧಿ ನಿಟ್ಟಿನಲ್ಲಿ ವಿಸ್ತರೀಕರಣ ಮಾಡಿದ ಪರಿಣಾಮ ಹೆಚ್ಚಿನ ಕಬ್ಬು ಅಗತ್ಯವಿತ್ತು. ಇದನ್ನು ಮನಗಂಡು ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಈ ಕಾರ್ಖಾನೆಯನ್ನು ಬಹುರಾಜ್ಯ ದರ್ಜೆಗೇರಿಸಿದರು. ಇದರಿಂದ ಗಡಿಭಾಗದ ರೈತರಿಗೆ ಮತ್ತು ಕಬ್ಬು ಉತ್ಪಾದಕರಿಗೆ ಅನುಕೂಲವಾಗಲಿದೆ. ಕಾರ್ಖಾನೆಯ ಆರ್ಥಿಕ ವಹಿವಾಟು ಹೆಚ್ಚಾಗಲಿದ್ದು ಕಾರ್ಖಾನೆಯು ಸಾಲಮುಕ್ತವಾಗುವ ದಿನಗಳು ಸಮೀಪಿಸಿವೆ ಎಂದರು. 

ಈ ಸಂದರ್ಭದಲ್ಲಿ ಕಾರ್ಖಾನೆಯ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ಪಪ್ಪು ಪಾಟೀಲ, ಸಮಿತ ಸಾಸನೆ, ಮ್ಹಾಳಪ್ಪಾ ಪಿಸೂತ್ರೆ, ಪ್ರತಾಪ ಮೇತ್ರಾಣಿ, ಕಲ್ಲಪ್ಪಾ ನಾಯಿಕ, ಉಜ್ವಲಾ ಶಿಂಧೆ, ಮನಿಷಾ ರಾಂಗೋಳೆ, ಜಯಕುಮಾರ ಖೋತ, ಕಿರಣ ನಿಕಾಡೆ, ಅಮಿತ ರಣದಿವೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಕಾಶ ಶಿಂಧೆ, ವೈಭವ ರಾಂಗೋಳೆ, ರಾಜೇಂದ್ರ ಖರಾಬೆ, ಮೊದಲಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ