ಶಿಗ್ಗಾವ್

ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ

ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ

ಶಿಗ್ಗಾವಿ 27:  ನಿಮ್ನ ವರ್ಗದ ಜನರಿಗೆ ಆತ್ಮಸ್ಥೈರ್ಯ ತುಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿ ಬದಲಾವಣೆಯ ದೊಡ್ಡ ಕ್ರಾಂತಿಯನ್ನು ಮಾಡಿದವರು ಜಗಜ್ಯೋತಿ ಬಸವಣ್ಣನವರು ಎಂದು ರಾಜ್ಯ ದಲಿತ ಮುಖಂಡ ಡಿ ಎಸ್ ಮಾಳಗಿ ಹೇಳಿದರು. 

ತಾಲೂಕಿನ ಕುನ್ನೂರ ಗ್ರಾಮದ ಹಡಪದ ಅಪ್ಪಣ್ಣ ಸಭಾಭವನದಲ್ಲಿ ಹಡಪದ ಸಮಾಜದ ವತಿಯಿಂದ ಹಮ್ಮಿಕೊಂಡ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಕಾಯಕವೇ ಕೈಲಾಸ ಎಂದರು ಅದರಂತೆ ಇಂದು ನಿಷ್ಠೆಯಿಂದ ಯಾರು ಕಾಯಕ ಮಾಡುತ್ತಾರೋ ಅವರಿಗೆ ಯಾವ ಸಮಸ್ಯೆಗಳು ಬಾರವು, ನಾವು ಮಾಡುವ ಕಾಯಕ ಪ್ರಾಮಾಣಿಕವಾಗಿರಬೇಕು, ಎಲ್ಲಿಯವರೆಗೆ ನಾವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವದಿಲ್ಲವೋ ಅಲ್ಲಿಯ ವರಗೆ ಶೋಷಣೆ ತಪ್ಪುವದಿಲ್ಲ ಎಂದರು. 

ಪ್ರಗತಿಪರ ರೈತ ಹಾಗೂ ಅಗಡಿ ತೋಟದ ಮಾಲೀಕ ಜಯದೇವ ಅಗಡಿ ಮಾತನಾಡಿ, ವೃತ್ತಿಯಲ್ಲಿ ಸಮಾನತೆ ಬರಬೇಕು, ಬಸವ ತತ್ವ ಆಧಾರಿತ ಜೀವನವಾಗಬೇಕು, ಸಮಾನತೆಯ ತತ್ವದಡಿ ಬದುಕು ಸಾಗಬೇಕು, ದೌರ್ಬಲ್ಯರನ್ನು ಮುಂದೆ ತರುವ ಪ್ರಯತ್ನಗಳಾಬೇಕು ಎಂದರು. 

ತಾಲೂಕಾ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಹಡಪದ ಸಮಾಜ ನಂಬಿಕೆ ಮತ್ತು ವಿಶ್ವಾಸಯುತ ಸಮಾಜ, ಈ ಸಮಾಜ ಇಂದು ಸಾಧಕರನ್ನು ಸನ್ಮಾನಿಸುವ ಮಟ್ಟಕ್ಕ ಬೆಳೆದಿರುವದು ಸಂತಸ ತಂದಿದೆ, ಮುಂದಿನ ದಿನಗಳಲ್ಲಿ ನಾವೇಲ್ಲರೂ ಸೇರಿ ತಾಲೂಕಾ ಕೇಂದ್ರ ಸ್ಥಾನದಲ್ಲಿ ಹಡಪದ ಅಪ್ಪಣ್ಣನವರ ಸಭಾಭವನ  ನಿರ್ಮಿಸಲು ಶ್ರಮಿಸೋಣ ಎಂದರು. 

ತಡಸ ಪಿಎಸ್‌ಐ ಪೋಲಿಸ್‌ಗೌಡ್ರ ಪಾಟೀಲ್ ಮಾತನಾಡಿ, ಸಣ್ಣ ಸಮಾಜ ಇಂದು ಉನ್ನತ ಮಟ್ಟದ ಕಾರ್ಯಕ್ರಮ ಮಾಡುತ್ತಿರುವದು ಸಂತಸ ತಂದಿದೆ, ಕೋರೊನಾ ವರ್ರಿಒರ್ಸ್ರನ್ನು ಸನ್ಮಾನಿಸಿ ಅವರಿಗೆ ಸ್ಪೂರ್ತಿ ತುಂಬಿದೆ ಈ ಸಮಾಜ ಎಂದರು.  

ಕಾರ್ಯಕ್ರಮದಲ್ಲಿ ಕೋರೊನಾ ವಾರಿಯರ‌್ಸಗಳಾದ ವೈಧ್ಯರನ್ನು, ಪೊಲೀಸ್‌ರನ್ನು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. 

ಮುಖಂಡ ಪರಶುರಾಮ ಕಾಳೆ, ಹಡಪದ ಸಮಾಜದ ತಾಲೂಕಾ ಅಧ್ಯಕ್ಷ ಬಸವರಾಜ ಹಡಪದ ಮಾತನಾಡಿದರು. 

ವೇದಮೂರ್ತಿ ಸೋಮಯ್ಯನವರು ಸಾನಿದ್ಯ ವಹಿಸಿದ್ದರು, ಅಪ್ಪಣ್ಣ ಸೋಸೈಟಿ ಅದ್ಯಕ್ಷ ಮುತ್ತುರಾಜ ಕ್ಷೌರದ, ಮಲ್ಲಿಕಾರ್ಜುನ ಹಡಪದ, ಶಿವರಾಜ ಕ್ಷೌರದ, ವೀರೇಶ ಹಡಪದ, ರುದ್ರಪ್ಪ ಹಡಪದ, ಗಂಗಪ್ಪ ಹಡಪದ, ತಿಪ್ಪಣ್ಣ ಹಡಪದ, ಬಸವರಾಜ ಹಡಪದ ಸೇರಿದಂತೆ ಹಡಪದ ಸಮಾಜದ ಭಾಂದವರು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ