ಯರಗಟ್ಟಿ

ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಕಾರ್ಯಕ್ರಮ

ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಕಾರ್ಯಕ್ರಮ

ಯರಗಟ್ಟಿ 22 : ಪಟ್ಟಣ ಮಹಾಂತ ದುರದುಂಡೇಶ್ವರ ಮಠದ ಆವಣದಲ್ಲಿ ಜು. 23 ರಂದು ಬೆಳ್ಳಿಗೆ 10 ಗಂಟೆಗೆ ಹಡಪದ ಸಮಾಜದಿಂದ ಶಿವಶರಣ ಹಡಪದ ಅಪ್ಪಣ್ಣನವರ 890ನೇ ಜಯಂತ್ಯೋತ್ಸವ ಕಾರ್ಯಕ್ರಮ ಜರಗುವುದು. 

ಕಾರ್ಯಕ್ರಮದ ಸಾನಿಧ್ಯವನ್ನು ಉಪ್ಪಿನಬೆಟಗೇರಿ ವಿಕ್ತಮಠದ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು, ತಂಗಡಗಿ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಪೂಜ್ಯ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಉದ್ಘಾಟಕರಾಗಿ ಮಾಜಿ ಜಿ.ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಶ್ರೀಮಂತ ನಿಖಿಲ ದೇಸಾಯಿ, ಅಧ್ಯಕ್ಷತೆಯನ್ನು ತಹಶೀಲ್ದಾರ ಎಂ. ಎನ್‌. ಮಠದ ಮುಖ್ಯ ಅತಿಥಿಗಳಾಗಿ ಎ. ಎಂ. ಃಆದಿಮನಿ, ಮಹಾಮತೇಶ ಜಕಾತಿ, ಕುಮಾರ ಹಿರೇಮಠ, ಎನ್‌. ಕೆ. ಹುಚ್ಚರಡ್ಡಿ, ಬಾಸ್ಕರ ಹಿರೇಮೆತ್ರಿ, ಕಾಶೀಮ ಹೊರಟ್ಟಿ, ಶಿವಪ್ಪ ಅಡಕಲಗುಂಡಿ ಸೇರಿದಂತೆ ಬೆಳಗಾವಿ ಜಿಲ್ಲಾ ಹಡಪದ ಸಮಾಜದ ಅನೇಕ ಮುಖಂಡರು ಆಗಮಿಸಲ್ಲಿದ್ದಾರೆ ಎಂದು ಪ್ರಕಟಣೆ ಮೂಲಕ ತಾಲೂಕಾ ಘಟಕದ ಅಧ್ಯಕ್ಷ ಬಾಲಕೃಷ್ಣ ಹಡಪದ ತಿಳಿಸಿದ್ದಾರೆ. 


ಸುದ್ದಿ ಓದಿ