ಯರಗಟ್ಟಿ

ಅದ್ದೂರಿಯಾಗಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ಅದ್ದೂರಿಯಾಗಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ಯರಗಟ್ಟಿ 24: ಪಟ್ಟಣದ ಮಹಾಂತ ದುರದುಂಡೇಶ್ವರ ಮಠದ ಆವರಣದಲ್ಲಿ ಹಡಪದ ಸಮಾಜದ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. 

ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮನವರ ಭಾವಚಿತ್ರವನ್ನು ಕುಂಭಮೇಳ, ಆರತಿ ಮೇಳದವರು ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಶ್ರೀಮಠಕ್ಕೆ ಬರಮಾಡಿಕೊಳ್ಳಲಾಯಿತು.ಜಯಂತಿ ನಿಮಿತ್ಯ ಶ್ರೀಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೀರಸ್ದಾರ ಸಿದ್ದು ಕುಲಕರ್ಣಿಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ​‍್ಾರೆ್ಪಣ ಅರ​‍್ಿಸಿ ನಮನ, ಸಲ್ಲಿಸಲಾಯಿತು. 

ಬಳಿಕ ಉಪ್ಪಿನಬೆಟಗೇರಿ ವಿರಕ್ತಮಠದ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖ ಪಾತ್ರವಹಿಸಿದ್ದರು. ಅವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ. ಅಪ್ಪಣ್ಣನವರ ಜೀವನ, ತತ್ವ, ಸಿದ್ದಾಂತಗಳನ್ನು ಎಲ್ಲರಿಗೂ ತಿಳಿಸಲು ಜಯಂತಿಯನ್ನು ಆಚರಿಸಲಾಗುತ್ತಿದೆ. ಶರಣರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಬದುಕು ರೂಪಿಸಿಕೊಳ್ಳಬೇಕು. ಅಪ್ಪಣ್ಣನವರು ಒಬ್ಬ ಸೇವಾಯೋಗಿ, ಕಾಯಕನಿರತ ಶರಣರಾಗಿದ್ದಾರೆ. ಅಂಥಹ ಮಹಾನ್ ಶರಣರು ನಡೆದು ಬಂದ ದಾರಿಯಲ್ಲಿ ಸಾಗಿದರೆ ಜೀವನ ಸಾರ್ಥಕ ಸಾರ್ಥಕವಾಗುತ್ತದೆ. ಅವರ ಸ್ಮರಣೆಗೂ ಅರ್ಥಪೂರ್ಣತೆ ಸಿಗುತ್ತದೆ ಎಂದರು.ಎ. ಎಂ. ಹಾದಿಮನಿ, ಕುಮಾರ ಹಿರೇಮಠ, ಸೋಮಲಿಂಗಪ್ಪ ಹಡಪದ, ಭಾಸ್ಕರ ಹಿರೇಮೆತ್ರಿ, ಎಸ್‌. ಎಸ್‌. ಕುರುಬಗಟ್ಟಿಮಠ, ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದಣ್ಣಾ ಹಡಪದ, ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ, ರಾಜ್ಯ ಕಾರ್ಯದರ್ಶಿ ಬಸವರಾಜ ಹಡಪದ, ಜಿಲ್ಲಾಧ್ಯಕ್ಷ ಸುರೇಶ ಹಡಪದ, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಹಡಪದ, ನಗರ ಘಟಕ ಅಧ್ಯಕ್ಷ ಬಾಲಕೃಷ್ಣ ಹಡಪದ, ಸೋಮು ರೈನಾಪೂರ, ನಿಂಗಪ್ಪ ನಾವಿ, ಅಪ್ಪಣ್ಣಾ ನಾವಿ, ಮುತ್ತು ನಾವಿ, ಪ್ರಕಾಶ ಹಡಪದ, ಸಂಗಮೇಶ ಹಡಪದ, ಈರಣ್ಣಾ ಹಡಪದ ಸೇರಿದಂತೆ ಹಡಪದ ಸಮಾಜದ ಮುಖಂಡರು ಇದ್ದರು. 


ಸುದ್ದಿ ಓದಿ