ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಯರಗಟ್ಟಿ 20 : ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ತಹಶೀಲ್ದಾರ ಎಂ. ಎನ್. ಮಠದ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ 890ನೇ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು. ಹಡಪದ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಮಾತನಾಡಿ, ಸರ್ಕಾರ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವವರು ಯಾರೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿಲ್ಲದ ಕಾರಣ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ ಎಂದರು. ಉಪತಹಸೀಲ್ದಾರ ಸಿದ್ದು ಕುಲಕರ್ಣಿ, ಪ. ಪಂ. ಮುಖ್ಯಾಧಿಕಾರಿ ಡಿ ಎನ್ ತಹಶೀಲ್ದಾರ, ಕಂದಾಯ ನೀರೀಕ್ಷಕ ವಾಯ್. ಎಫ್. ಮುರ್ತೆನ್ನವರ, ಹಡಪದ ಸಮಾಜ ಬಾಂಧವರಾದ ಬಾಲಕೃಷ್ಣ ಹಡಪದ, ಪಾಂಡು ರೈನಾಪೂರ, ಅಪ್ಪಣ್ಣಾ ನಾವಿ, ಈರಣ್ಣಾ ಹಡಪದ, ನಿಂಗಪ್ಪ ನಾವಿ, ಸಂಗಪ್ಪ ಹಡಪದ, ಅಡಿವೆಪ್ಪ ನಾವಿ ಸೇರಿದಂತೆ ಅನೇಕ ಇದ್ದರು.