ಹಡಗಿನಾಳ ಜಾನಪದ ಸಂಸ್ಕೃತಿಕ ಕಾರ್ಯಕ್ರಮ, ನಾಟಕೋತ್ಸವ
ಗೋಕಾಕ 25: ತಾಲೂಕಿನ ಮುತ್ತೇಶ್ವರ ಜಾತ್ರಾ ನಿಮಿತ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಜಾನಪದ ಸಂಸ್ಥೆ ಗೋಕಾಕ ಇವರ ಸಹಯೋಗದಲ್ಲಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕೋತ್ಸವ ಜರುಗಿತು.
ದಿವ್ಯ ಸಾನಿದ್ಯ ವಹಿಸಿದ ತಪೋನಿಧಿ ಮುತ್ತೇಶ್ವರ್ ಸ್ವಾಮಿಗಳು ನಮ್ಮ ಕಲೆ, ಸಂಸ್ಕೃತಿ ಉಳಿಯಬೇಕಾದರೆ ಯುವಕರು ಮುಂದೆ ಬರಬೇಕು ಮತ್ತು ಕಲೆಗಳನ್ನು ಕಲಿಯಬೇಕು ಎಂದು ಕರೆ ನೀಡಿದರು. ಉದ್ಘಾಟನೆ ಯಲ್ಲಪ್ಪಸ್ವಾಮಿ ವಡೇರ, ಅಧ್ಯಕ್ಷತೆ ಲಂಕೇಪ್ಪಾ ಯರಾಗುದ್ರಿ, ಹಾಗೂ ಮುಖ್ಯ ಅತಿಥಿಗಳಾಗಿ ಬಾಳಪ್ಪಾ ಕಲ್ಲೋಳಿ, ಉದಗಟ್ಟಿಯ ಉದ್ದಪ್ಪಾ ದಳವಾಯಿ, ಸಿದ್ದಪ್ಪಾ ಮಂಗಿ, ವಿಠ್ಠಲ ಆಡಿನ ಗ್ರಾಮ ಪಂ ಅಧ್ಯಕ್ಷರು, ರಾಮಚಂದ್ರ ಪತ್ತಾರ, ಮಹಾದೇವ ವಡೇರ, ಶಶಿಕಾಂತ್ ಕಲ್ಲೋಳಿ, ಈಶ್ವರಚಂದ್ರ ಬೆಟಗೇರಿ,, ಮುತ್ತೇನಗೌಡ ಪಾಟೀಲ್ ಉಪಸ್ಥಿತರಿದ್ದರು.
ಎ ಎಮ್ ನಗಾರಶೀ ಗುರುಗಳು ಜಾನಪದ ಕಲೆಗಳು ಬೆಳೆಯಲು ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಕರೆ ನೀಡಿದರು
ಅಧ್ಯಕ್ಷತೆ ವಹಿಸಿದ ಡಾ. ಉದ್ದಣ್ಣಾ ಗೌಡರ (ಗೋಡೇರ ) ಪ್ರಾಸ್ತಾವಿಕವಾಗಿ ಮಾತನಾಡಿ ಜಾನಪದ ಕಲೆ ತಾನಾಗೇ ಉಳಿಯದು. ಅದನ್ನು ಬೆಳೆಸಲು, ಉಳಿಸಲು ಗ್ರಾಮದ ಹಿರಿಯರು, ಅಧಿಕಾರಿಗಳು, ರಾಜಕಾರಣಿಗಳ ಪ್ರೋತ್ಸಾಹದ ಅವಶ್ಯಕತೆ ಇದೆ. ಪ್ರತಿಯೊಂದು ಕಲಾ ಪ್ರಕಾರದ ಕಲಾವಿದರು ತಮ್ಮ ಒಬ್ಬ ಮಗನನ್ನು ಕಲಾವಿದನನ್ನಾಗಿ ಮಾಡಿದರೆ ಮಾತ್ರ ಜಾನಪದ ಕಲೆ ಉಳಿಯುತ್ತದೆ ಎಂದು ತಿಳಿಸಿದರು. ಜಾನಪದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವತಿ ಚೌಗಲಾ ತಂಡದಿಂದ ಸೋಬಾನ ಪದ, ಮಹಾಂತಯ್ಯಾ ಗುಡಿ ಸಾಂಬಾಲವಾದನ, ಕಲ್ಲಪ್ಪಾ ಹಿಪ್ಪರಗಿ ಭಜನಾ ಪದ, ಬೆಂಗಳೂರಿನ ಜಾನಪದ ಹಾಡುಗಾರ ಸಾಲಕಟ್ಟಿ ಎಸ್ ಆರ್ ಶಾಂತಯ್ಯಾ ಆಡಿಯೋದಲ್ಲಿ ಹಾಡಿದ ಹಾಡನ್ನು ಕೇಳಿ ಚೆಪ್ಪಾಳೆ ತಟ್ಟಿದ್ದರು, ರಾಮಪ್ಪಾ ಜೋಗನ್ನವರ ಡೊಳ್ಳಿನ ಪದ, ರಾಮಪ್ಪಾ ವಡೇರ ದಟ್ಟಿ ಕುಣಿತ, ಹಾಗೂ ಗೋಕಾಕ ಲಕ್ಷ್ಮಿದೇವಿ ಬೈಲಾಟ ಸಂಘದಿಂದ "ಸತ್ಯವಾನ ಸಾವಿತ್ರಿ "ನಾಟಕ ಜರುಗಿತು.
ಮುತ್ತೇಶ್ವರ್ ಸ್ವಾಮಿಗಳಿಗೆ "ತಪೋನಿಧಿ ರಾಜ್ಯ ಪ್ರಶಸ್ತಿ "ನೀಡಿಗೌರವಿಸಲಾಯಿತು. ಹಿರಿಯ ಗುರುಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದ ನಿರ್ದೇಶನವನ್ನು ಮುತೆಪ್ಪಾ ಆಡಿನ ಹಾಗೂ ವಂದನಾರೆ್ಣಯನ್ನು ಡಾ ಉದ್ದಣ್ಣಾ ಗೋಡೇರ ನೆರವೇರಿಸಿದರು.