ಎಚ್ ಶೇಷಗಿರಿರಾವ್ ಕೃತಿ ಬಿಡುಗಡೆ ಮಾ.14ಕ್ಕೆ
ಲೋಕದರ್ಶನ ವರದಿ
ಹೂವಿನ ಹಡಗಲಿ 11: ಮಲ್ಲಿಗೆ ನೆಲದ ಹಿರಿಯ ಬಂಡಾಯ ಸಾಹಿತಿ ಹೆಚ್ ಶೇಷಗಿರಿರಾವ್ ರವರ "ಏನಿದು ಬದುಕು ಇದೆಂಥಾ ತಿರುವು" ಕೃತಿ ಬಿಡುಗಡೆ ಮಾರ್ಚ್ 14 ಶನಿವಾರ ನಡೆಯಲಿದೆ ಎಂದು ಸಮತಾ ಹವಾಲ್ದಾರ್ ತಿಳಿಸಿದ್ದಾರೆ.ವಿಶ್ವ ಕಿಡ್ನಿ ದಿನ ಅಂಗವಾಗಿ ತಂದೆ ದಿವಂಗತ ಶೇಷಗಿರಿರಾವ್ ಹವಾಲ್ದಾರ್ ರವರ ಪರಿಷ್ಕೃತ ಆವೃತ್ತಿ ಬಿಡುಗಡೆ ಸಮಾರಂಭವನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ತಾಲೂಕು ಪಂಚಾಯಿತಿ ಮಲ್ಲಿಗೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ ಹಿರಿಯ ರೈತ ಹೋರಾಟಗಾರರಾದ ಜಿ ಎಂ ವೀರಸಂಗಯ್ಯ ಅಧ್ಯಕ್ಷತೆ ವಹಿಸುವರು. ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಕೃತಿ ಬಿಡುಗಡೆ ಮಾಡುವರು.ಡಾ ಸಂದೀಪ್ ಕೃತಿ ಕುರಿತು ಮಾಹಿತಿ ನೀಡುವರು. ಪ್ರಕಾಶಕಿ ಕಲಾವತಿ ಹವಾಲ್ದಾರ್ ಉಪಸ್ಥಿತರಿರುವರು.ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಮತಾ ಹವಾಲ್ದಾರ್ ಕೋರಿದ್ದಾರೆ.