ಗುರುಪೂರ್ಣಿಮೆ ನಿಮಿತ್ಯ ಗುರುವಂದನಾ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ25: ಪಟ್ಟಣದ ಜಯನಗರದ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ಸತ್ಯ ಸಾಯಿ ಸೇವಾ ಸಮಿತಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ನಿಮಿತ್ಯ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಪ್ರೊ.ಡಾ.ಡಿ. ಎಗೊಬ್ಬರಗುಂಪಿ, ನಿವೃತ್ತ ಪ್ರಾಚಾರ್ಯ ಜಿ.ಎನ್.ಎಲಿಗಾರ, ನಿವೃತ್ತ ಶಿಕ್ಷಕ ಬಿ.ಡಿ. ಚಾರಿ, ನಿವೃತ್ತ ಪ್ರೊ.ಕೆ.ಎನ್.ದಳವಾಯಿ, ನಿವೃತ್ತ ಶಿಕ್ಷಕ ಜಯರಾಮ ಹೀರೂಲಾಲ್ ಇವರನ್ನು ಸನ್ಮಾನಿಸಲಾಯಿತು. ಸಾಯಿ ಸೇವಾ ಸಮಿತಿ ಅಧ್ಯಕ್ಷ ಉದಯಕುಮಾರ್ ಹೊಸಮನಿ, ಪುರಸಭೆ ಅಧ್ಯಕ್ಷೆ ರೂಪಾಬನ್ನಿಕೂಪ್ಪ, ಭೂಧಾನಿ ಸುಶೀಲಕ್ಕಾ ಪಾಟೀಲ್, ಕೆಎಂಎಫ್ ನಿರ್ದೇಶಕ ಬಸನಗೌಡ ಮೇಲಿನಮನಿ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು