ವಿದ್ಯಾನಗರ ಚಿದಂಬರ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ
ಗೋಕಾಕ 20 : ಇಲ್ಲಿಯ ವಿದ್ಯಾನಗರ ಚಿದಂಬರ ದೇವಸ್ಥಾನದಲ್ಲಿ ಸಂಸ್ಕಾರ ಭಾರತಿ ಸಂಸ್ಥೆ ಅಡಿಯಲ್ಲಿ ಗುರುವಂದನಾ ಕಾರ್ಯಕ್ರಮ ಜರುಗಿತು. ಹಿರಿಯ ಸಂಗೀತ ಗುರುಗಳಾದ ಕಲಾವಿದ ಶ್ರೀ ದ್ಯಾಮಣ್ಣ ಮಾಲದಿನ್ನಿ ಅವರನ್ನು ಸತ್ಕರಿಸಲಾಯಿತು.
ಉತ್ತರ ಕನ್ನಡ ಪ್ರಾಂತ ಸಂಯೋಜಕರಾದ ಹುಬ್ಬಳ್ಳಿಯ ಶ್ರೀನಿವಾಸ, ಹಿರಿಯ ಕಲಾವಿದ ನಟರಾಜ್ ಮಹಾಜನ, ವಿಶ್ವ ಹಿಂದೂ ಪರಿಷತ್ ಪ್ರಾಂತ ಸತ್ಸಂಗದ ಪ್ರಮುಖರಾದ ಶ್ರೀ ನಾರಾಯಣ ಮಟಾಧಿಕಾರಿ, ಅರವಿಂದ್ ಮಹಾಜನ್, ನಗರ ಸಂಯೋಜಕರಾದ ರಾಜೇಂದ್ರ ಕುಲಕರ್ಣಿ, ಹಿರಿಯ ದಟ್ಟಿ ಕುಣಿತ ಕಲಾವಿದ ಡಾ ಉದ್ದಣ್ಣಾ ಗೋಡೇರ ವಕೀಲರು, ಬಿ ಸಿ ದೇಗಾಂವಿಮಟ್, ಸಂಗೀತಾ ದೇಗಾಂವಿಮಠ, ರಾಮಚಂದ್ರ ದೀಕ್ಸಿತ, ಸೀತಾ ದಿಕ್ಸಿತ, ಅನುಷಾ ಕೌಶಿಕ್, ಸುನಿತಾ ಕುಲಕರ್ಣಿ ಹಾಗೂ ಅಭಿಮಾನಿಗಳು ಉಪಷ್ಠಿತರಿದ್ದರು. ಕಿರಣ ಹೊನ್ನತ್ತಿ ದೇಯಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಮಚಂದ್ರ ಕಾಕಡೆ ಕಾರ್ಯಕ್ರಮ ನಿರೂಪಿಸಿದರು, ಬಾಳೆಶ್ ಕುಲಕರ್ಣಿ ಒಂದಿಸಿದರು.