ಚಿಕ್ಕೋಡಿ

ಗುರುಪೊರ್ಣಿಮೆ: ಶಾಂತಿಸಾಗರ ಶಾಲಾ ಮಕ್ಕಳಿಂದ ಪಾಲಕರ ಪಾದಪೂಜೆ

ಗುರುಪೊರ್ಣಿಮೆ: ಶಾಂತಿಸಾಗರ ಶಾಲಾ ಮಕ್ಕಳಿಂದ ಪಾಲಕರ ಪಾದಪೂಜೆ

ಲೋಕದರ್ಶನ ವರದಿ

ಮಾಂಜರಿ 04: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶಾಂತಿಸಾಗರ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗುರುಪೊರ್ಣಿಮೆ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಮಕ್ಕಳು ತಮ್ಮ ಪಾಲಕರ ಪಾದಪೂಜೆ ನೆರವೇರಿಸಿ, ವಿಶೇಷತೆ ತೋರಿದರು.

ಹಿಂದೂ ಸಂಪ್ರದಾಯದಂತೆ ಆಷಾಢ ಮಾಸದ ಪೂರ್ಣಿಮೆಯನ್ನು ಗುರುಪೂರ್ಣಿಮೆಯಂದು ಆಚರಿಸಲಾಗುತ್ತಿದ್ದು, ಮಾಂಜರಿ ಗ್ರಾಮದ ಶಾಂತಿಸಾಗರ ಶಾಲೆಯಲ್ಲಿ ಗುರುಪೂಣರ್ಿಮೆಯನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಪಾಲಕರನ್ನು ವಿದ್ಯಾರ್ಥಿಗಳು ಪುಷ್ಪವೃಷ್ಠಿ ಮಾಡುವ ಮೂಲಕ ಸ್ವಾಗತಿಸಿದರು. ನಂತರ ತಾಯಿ ಸರಸ್ವತಿ ಮತ್ತು ಶಾಂತಿಸಾಗರ ಮುನಿಗಳ ಭಾವಚಿತ್ರದ ಪೂಜೆಯೊಂದಿಗೆ, ದೀಪ ಬೆಳಗಿಸಿ, 4ನೇ ತರಗತಿ  ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ಮತ್ತು 8 ನೇ ತರಗತಿ  ವಿದ್ಯಾರ್ಥಿಗಳಿಂದ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳದ ಅಧ್ಯಕ್ಷ ಸನತಕುಮಾರ ಪಾಟೀಲ, ಅಶೋಕ ಕೋಥಳಿ, ಶ್ರೀಪಾಲ ಖಡಕೋಳೆ, ಶೀತಲಕುಮಾರ ಇಂಗಳೆ ಉಪಸ್ಥಿತರಿದ್ದರು. ಸನತಕುಮಾರ ಪಾಟೀಲ್ ಮಾತನಾಡಿ, ಗುರು ಮತ್ತು ಶಿಷ್ಯರ ಅವಿನಾಭಾವ ಸಂಬಂಧದ ಬಗ್ಗೆ  ವಿದ್ಯಾರ್ಥಿಗಳಿಗೆ ತಿಳಿಸಿದರು.

 ಶಾಲೆಯ ಶಿಕ್ಷಕರಾದ ಸುನೀಲ ಹಜಾರೆ,  ವಿದ್ಯಾರ್ಥಿಗಳಾದ ಭೂಮಿಕಾ ಬಂಡಗಾರ, ವಿಜಯಲಕ್ಷಿ ಬಂಡಗಾರ, ಮೇಘಾ ಚೌಗುಲೆ, ಸಾಕ್ಷಿ ಮಾನೆ, ಸ್ಪೂರ್ತಿ ಮಡಿವಾಳ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. 

ಪ್ರೌಢಶಾಲೆಯ ಮುಖ್ಯಾಧ್ಯಾಪಕ ಸುನೀಲ ವಡಗೋಲ, ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ನಮೃತಾ ಶೆಟ್ಟಿ, ಶಿಕ್ಷಕರಾದ ಸುನೀಲ ಖುರಪೆ, ಮಹಾಂತೇಶ ಗಡೆಗಾರ, ಸುಬ್ರಾವ ಹೊನ್ನಾಯಿಕ್, ರಮೇಶ ಕುಂಬಾರ, ಸುನೀಲ ಹಜಾರೆ, ಸಾಗರ ಶಿತೋಳೆ, ಕುಮುದಾ ಬಸನಾಯಿಕ, ಮನಿಷಾ ಖೋತ, ಅಶ್ವಿನಿ ಜಡೆ, ತುಳಜಾ ಅವಟೆ, ಸಂಗೀತಾ ಯಾದವ, ಶಿವಲೀಲಾ ಹಳಿಜೋಳೆ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಿಯರು, ಪಾಲಕರು, ವಿದ್ಯಾಥರ್ಿ-ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು. ಅಣ್ಣಪೂರ್ಣಾ ವಗಾಯಿ ನಿರೂಪಿಸಿದಳು. ಆದಿತಿ ಪಾಟೀಲ್ ಸ್ವಾಗತಿಸಿದಳು. ಸಮೃದ್ಧಿ ಚವ್ಹಾನ ವಂದಿಸಿದಳು 

ಸುದ್ದಿ ಓದಿ