ಗುರುಪೌರ್ಣಿಮೆ ಹಾಗೂ 9ನೇ ವಾರ್ಷಿಕೋತ್ಸವ ಜುಲೈ 29ರಂದು
ಬ್ಯಾಡಗಿ, ಜು.27: ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜುಲೈ 29ರಂದು ಗುರುಪೌರ್ಣಿಮೆ ಹಾಗೂ ಮಂದಿರದ 9ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 5.30ಕ್ಕೆ ಕಾಕಡ ಆರತಿ, ಸತ್ಯನಾರಾಯಣ ಪೂಜೆ, ಕ್ಷೀರಾಭಿಷೇಕ, ದತ್ತಾತ್ರೇಯ ಹೋಮ ಹಾಗೂ ಮಧ್ಯಾಹ್ನ 12ಕ್ಕೆ ನೈವೇದ್ಯ ಆರತಿ ನಡೆಯಲಿದೆ. ಸಂಜೆ 6.30ಕ್ಕೆ ಧೂಪಾರತಿ, ಶ್ರೀ ಸಾಯಿಬಾಬಾ ಪಲ್ಲಕ್ಕಿ ಉತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಅಲ್ಲದೆ ಆಶ್ಲೇಷ ಬಲಿ ಪೂಜೆ, ಸರೋ್ದಷ ನಿವಾರಣ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಜಪ, ನಕ್ಷತ್ರ ಶಾಂತಿ ಮಂಡಲ ಆರಾಧನೆ, ಅಕ್ಷರಾಭ್ಯಾಸ ಹಾಗೂ ತಾಯಂದಿರಿಗೆ ಉಡಿ ವಿತರಣೆ ಕಾರ್ಯಕ್ರಮಗಳೂ ನಡೆಯಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಯಿಬಾಬಾರ ಆಶೀರ್ವಾದ ಪಡೆಯುವಂತೆ ಶಿರಡಿ ಸಾಯಿಬಾಬಾ ಪ್ರತಿಷ್ಠಾನ ಸಂಸ್ಥೆಯ ಧರ್ಮಾಧಿಕಾರಿ ಮೃತ್ಯುಂಜಯ ಸ್ವಾಮೀ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.