ಯರಗಟ್ಟಿ

ಗುರುವಿನ ಕಾರ್ಯ ಶ್ರೇಷ್ಠ: ಎಮ್ ಬಿ ಬಿರಾದರಗೌಡರ

ಗುರುವಿನ ಕಾರ್ಯ ಶ್ರೇಷ್ಠ: ಎಮ್ ಬಿ ಬಿರಾದರಗೌಡರ

ಯರಗಟ್ಟಿ, 10 : ಸಮಾಜದಲ್ಲಿ ಗುರುವಿಗೆ ಉತ್ತಮ ಸ್ಥಾನಮಾನ ನೀಡಲಾಗುತ್ತದೆ. ಶಿಕ್ಷಕ ವೃತ್ತಿ ಪ್ರತಿಯೊಬ್ಬರ ಜೀವನದಲ್ಲಿ ಅಮೂಲ್ಯವಾಗಿದೆ. ಗುರುವಿನ ಕಾರ್ಯ ತುಂಬಾ ಶ್ರೇಷ್ಠವಾದದ್ದು. ಎಲ್ಲಾ ಶಿಕ್ಷಕರು ಗುಣಮಟ್ಟದ ಶಿಕ್ಷಣ ಒದಗಿಸಲು ಮುಂದೆ ಬರಬೇಕೆಂದು ನಿವೃತ್ತ ಮುಖ್ಯೋಪಾಧ್ಯ ಎಮ್ ಬಿ ಬಿರಾದರಗೌಡರ ಹೇಳಿದರು. 

ಅವರು ಸಮೀಪದ ಕಡಬಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ 2018-2019ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಗುರುಗಳ ಮಾರ್ಗದರ್ಶನ ಮುಖ್ಯ. ಜೀವನದ ಗುರಿ ಸಾಧನೆಗೆ ಗುರು ದಾರೀದೀಪ ಎಂದರು. 

ಸ್ಥಳೀಯ ಪ್ರೌಢ ಶಾಲೆಯಿಂದ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. 

ಸಂದರ್ಭದಲ್ಲಿ ಶಿಕ್ಷಕ ಕಿರಣ ಚಿವಟಗುಂಡಿ, ಎಮ್ ಜೆ ಅರಕೇರಿ, ಬಿ ಡಿ ಪಾಟೀಲ, ಆರ್ ವೈ ಯರಗಟ್ಟಿ, ಎಮ್ ಡಿ ಮಾಳಿ, ಎಸ್ ಎಚ್ ಪತ್ತಾರ, ಸಕ್ಕುಬಾಯಿ ವಿಧಾತೆ, ಎಸ್ ಜೆ ಪೂಜೇರ, ಎ ಕೆ ಗುಡದರಿ, ಹಳೆಯ ಹಾಗೂ ಈಗಿನ ವಿದ್ಯಾರ್ಥಿಗಳು ಉಪಸ್ಥೀತರಿದ್ದರು. 


ಸುದ್ದಿ ಓದಿ