ನಿತ್ಯದ ಪ್ರತಿ ಕಾಯಕಕ್ಕೆ ಗುರುವಿನ ಅನುಗ್ರಹ ಅವಶ್ಯ: ಚನ್ನಬಸವೇಶ್ವರ ಶ್ರೀ
ಶಿಗ್ಗಾವಿ: ನಿತ್ಯದ ಪ್ರತಿ ಕಾಯಕಕ್ಕೆ ಗುರುವಿನ ಅನುಗ್ರಹ ಅವಶ್ಯವಾಗಿದ್ದು, ಗುರುವಿನ ಮಾರ್ಗದರ್ಶದಲ್ಲಿ ನಡೆಯುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಬೇಕು ಎಂದು ಗಂಗೇಭಾವಿ ಸುಕ್ಷೇತ್ರದ ಷ.ಬ್ರ.ಗೋಸಲ ಚನ್ನಬಸವೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಗಂಗೇಭಾವಿ ಸುಕ್ಷೇತ್ರದಲ್ಲಿ ಭಾನುವಾರ ಲಿಂಗೈಕ್ಯ ಯೋಗಿರಾಜೇಂದ್ರ ಸ್ವಾಮೀಜಿ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಲಿಂಗೈಕ್ಯ ಯೋಗಿರಾಜೇಂದ್ರ ಸ್ವಾಮೀಜಿಗಳು ತಮ್ಮ ತತ್ವದ ಸಂದೇಶ ಮತ್ತು ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಬರುವಾಗ ಏನು ತಂದಿರುವೆ, ಹೋಗುವಾಗ ಏನು ತೆಗೆದುಕೊಂಡು ಹೋಗುವೆ ಎಂಬ ಪ್ರಶ್ನೆ ಮೂಡಿದಾಗ ಮನುಷ್ಯ ಪರಿವರ್ತನೆಯಾಗಲು ಸಾಧ್ಯವಿದೆ. ಅವುಗಳಲ್ಲಿನ ಮಹತ್ವವನ್ನು ಅರಿಯಬೇಕು. ಇತರರಿಗೆ ತಿಳಿಸಬೇಕು. ನೈತಿಕ ಚಿಂತನೆಗಳು ಸಮಾಜವನ್ನು ಗಟ್ಟಿಗೊಳಿಸುತ್ತವೆ. ಸರ್ವ ಧರ್ಮಗಳ ಸಾರ ಒಂದೇಯಾಗಿದ್ದು, ಆಚರಣೆಗಳು ಮಾತ್ರ ವಿಶಿಷ್ಠವಾಗಿವೆ. ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರ ನಾಡಿನ ಸರ್ವಾಂಗೀನ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಅಂತಹ ಮನೋಭಾವನೆಗಳು ಜನಮನದಲ್ಲಿ ಬೆಳೆಯಬೇಕಾಗಿದೆ ಎಂದರು.
ಬೆಳಿಗ್ಗೆ ಮಠದ ವಠುಗಳಾದ ಶಿವಯೋಗಿ, ಶರಣಯ್ಯ ಅವರಿಂದ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಹೊಸೂರ ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಲಮಾಣಿ ಮಾತನಾಡಿ ಗಂಗೇಭಾವಿ ಸುಕ್ಷೇತ್ರದ ಅಭಿವೃದ್ದಿಗೆ ತನು,ಮನ,ಧನದಿಂದ ಸಹಾಯ ಸಹಕಾರವನ್ನು ನೀಡುವದಾಗಿ ಹೇಳಿದರು. ಮಾಜಿ ಅಧ್ಯಕ್ಷ ಚನ್ನಪ್ಪ ಬಿಂದ್ಲಿ ಸುಕ್ಷೇತ್ರದ ಅಭಿವೃದ್ದಿಗೆ ನಾವೆಲ್ಲ ಸುತ್ತಮುತ್ತಲಿನ ಭಕ್ತ ವೃಂಧವು ಇದ್ದು ಸಂಪೂರ್ಣ ಅಭಿವೃದ್ದಿಗೋಳಿಸಲು ಮುಂದಾಗುತ್ತೆವೆ ಎಂದರು ಈ ಸಂದರ್ಭದಲ್ಲಿ ಸ್ನೇಹ ಜೀವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಈರಣಗೌಡ್ರ ದೊಡ್ಡಗೌಡ್ರ ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಅರ್ಜಪ್ಪ ಲಮಾಣಿ, ನ್ಯಾಯವಾದಿಗಳಾದ ಬಸವರಾಜ ರಾಗಿ, ವಿ.ಸಿ.ಪಾಟೀಲ, ಮುಖಂಡರಾದ ಕಾಳಪ್ಪ ಬಡಿಗೇರ, ಪ್ರಕಾಶ ತಿಪ್ಪಣ್ಣವರ, ಶಂಕರಗೌಡ್ರ ಪಾಟೀಲ, ಈರಪ್ಪ ಡವಗಿ, ನೀಲಕಂಠಗೌಡ ಪಾಟೀಲ, ಮಹಾದೇವಪ್ಪ ದೇವತಿ, ಶಿವಾಜಿ ಕುಲಕರ್ಣಿ, ಈಶ್ವರಗೌಡ ಪಾಟೀಲ, ಶೇಖಣ್ಣ ಡವಗಿ, ಈರಪ್ಪ ತೆಗ್ಗಿಹಳ್ಳಿ, ಮಡಿವಾಳಪ್ಪ ಕಮ್ಮಾರ, ಬಿ.ಎಸ್.ಹಿರೇಮಠ, ಶಿದ್ರಮಗೌಡ ಮೆಳ್ಳಾಗಟ್ಟಿ, ಬ್ಯಾಡಗಿಯ ವಿರುಪಾಕ್ಷಪ್ಪ ಸೇರಿದಂತೆ ಹಲವರು ಇದ್ದರು.