ಮಕ್ಕಳು ಸಂಸ್ಕಾರವಂತರಾಗಲು ಗುರುವಿನ ಶ್ರಮ ಅಪಾರ: ಸ್ವರೂಪಾನಂದಶ್ರೀ
ಹಾರೂಗೇರಿ 21: ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗಲು ಗುರುವಿನ ಶ್ರಮ ಅಪಾರವಾಗಿದೆ. ವಿದ್ಯೆಯ ಜೊತೆಗೆ ವಿನಯತೆ ಅವಶ್ಯವಾಗಿದೆ. ಶಾಲೆಗಳಲ್ಲಿ ಆ ಎರಡು ಕಾರ್ಯಗಳು ಆಗಬೇಕಿದೆ ಎಂದು ಆನಂದ ಆಶ್ರಮದ ಸ್ವರೂಪಾನಂದ ಸ್ವಾಮಿಗಳು ಹೇಳಿದರು.ಹಾರೂಗೇರಿ ಪಟ್ಟಣದ ಅನುದಾನಿತ ಕರೆಸಿದ್ದೇಶ್ವರ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ವನಮಹೋತ್ಸವ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಭಗವಂತ ಬಂತಿ ಮಾತನಾಡಿ ಸರಕಾರದ ಸೌಲಭ್ಯಗಳು ವಿದ್ಯಾರ್ಥಿಗಳ ಬಳಿ ಹುಡುಕಿಕೊಂಡು ಬರುತ್ತಿವೆ ಅದನ್ನು ಸದ್ಭಳಿಕೆ ಮಾಡಿಕೊಂಡು ಭಾರವಾದ ಕಲಿಕೆಯನ್ನು ಸುಗಮ ಮಾಡಿಕೊಳಬೇಕೆಂದರು.
ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗೆ ಮಹತ್ವ ಕೊಡಬೇಕೆಂದರು. ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಮಹಾಂತೇಶ ಮುಗಳಖೋಡ. ನಿರ್ದೇಶಕರಾದ ಸಿದ್ದಪ್ಪ ಹಾಡಕಾರ. ವಕೀಲರಾದ ಎಮ್. ಜಿ. ಹಾಡಕಾರ. ಸತ್ಯಪ್ಪ ರಬಕವಿ, ಹನಮಂತ ಬನಾಜ. ಎನ್. ಎಲ್. ತಟ್ಟಿಮನಿ. ಡಿ.ಎಸ್. ಬಸಗೌಡರ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರು ಉಪಸ್ಥಿತಿತರಿದ್ದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆಯ್. ಬಿ. ಬಿರಾದಾರ ಸ್ವಾಗತಿಸಿದರು. ಎಸ್. ಎ. ಕಾಂಬಳೆ ನಿರೂಪಿಸಿದರು. ಕೆ. ವಾಯ್ ನಾಯಿಕ ವಂದಿಸಿದರು.