ಗುರುವಿನ ಋಣ ದೊಡ್ಡದು: ಮಗದುಮ್ಮ
ಗೋಕಾಕ 29: ಮನುಕುಲಕ್ಕೆ ಗುರುವಿನ ಮಾರ್ಗದರ್ಶನ ಅವಶ್ಯ ಆತನ ಋಣ ದೊಡ್ಡದು,ಎಂದು ರೋಟರಿ ರಕ್ತ ಭಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ್ಮ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಆವರಣದಲ್ಲಿ ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಅವರ ಶೃದ್ಧಾಂಜಲಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಾಚಾರ್ಯ ಜಯಾನಂದ ಮಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ವಿದ್ಯಾ ರೆಡ್ಡಿ ಸ್ವಾಗತಿಸಿದರು,ಡಾ.ಲಕ್ಷ್ಮಣ ಚೌರಿ ಕಾಪಸೆ ಅವರ ಬದುಕನ್ನು ಕುರಿತು ಮಾತನಾಡಿದರು.ಶಿಕ್ಷಕ ರಾಮಚಂದ್ರ ಕಾಕಡೆ,ಡಾ.ಅರುಣ ಸವತಿಕಾಯಿ, ಡಾ.ಉದ್ದಣ್ಣಾ ಗೋಡೇರ, ವಿಶ್ರಾಂತ ಶಿಕ್ಷಕ ಬಿ.ಬಿ.ಪಟಗುಂದಿ ಉಪಸ್ಥಿತರಿದ್ದರು.