ಗುಂಡೇನಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ಬ್ಯಾಡಗಿ 10: ತಾಲೂಕಿನ ಗುಂಡೆನಹಳ್ಳಿ ಗ್ರಾಮ ಪಂಚಾಯತನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ. ಸೋಮುವಾರ ಗ್ರಾಮ ಪಂಚಾಯತ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಚುನಾವಣೆಗೆ ಚುನಾವಣಾಧಿಕಾರಿಯಾಗಿ ತಾ.ಪಂ.ಕಾರ್ಯನಿರ್ವಾಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಆಗಮಿಸಿ ಅವರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು.
ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಭಾಗ್ಯಾ ಮಹಿಂದ್ರ ತಳವಾರ ಇವರು ಅವಿರೋಧವಾಗಿ ಆಯ್ಕೆ ಆದರು. ಒಟ್ಟು 11 ಸದಸ್ಯರಿದ್ದು, 6 ಜನ ಬಿಜೆಪಿ ಬೆಂಬಲಿತ ಸದಸ್ಯರು, 5 ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದು, ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.ಉಪಾಧ್ಯಕ್ಷರಾಗಿ ಶಿವಯೋಗಿ ಗುಂಡಪ್ಪ ಹುಣಸಿಕಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು. ಪ್ರಕಾಶ್ ಹುಣಸಿಕಟ್ಟಿ, ನಿಕಟ್ ಪೂರ್ವ ಅಧ್ಯಕ್ಷ ಲಲಿತಾ ದೇಸಗತ್ತಿ, ಉಪಾಧ್ಯಕ್ಷ ಪರುಶುರಾಮ ಚನ್ನಗಿರಿ ಹಾಗೂ ಇನ್ನುಳಿದ ಸದಸ್ಯರು ಉಪಸ್ಥಿತರಿದ್ದರು.