ಯರಗಟ್ಟಿ

ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ

ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ

ಲೋಕದರ್ಶನ ವರದಿ 

ಯರಗಟ್ಟಿ 31: ವೀರ ವಿರಾಗಿನಿ ಅಕ್ಕಮಹಾದೇವಿಯು ಲೌಕಿಕದ ಗಂಡನನ್ನು ತಿರಸ್ಕರಿಸಿ, ತನ್ನ ಆರಾಧ್ಯ ದೈವದಲ್ಲಿಯೇ ಪಡೆದ ಪತಿಯನ್ನು ಕಂಡಂತೆ ಗುಡ್ಡಾಪುರದ ದಾನಮ್ಮಳು ಕೂಡ ಸಾವಿಲ್ಲದ, ಕೇಡಿಲ್ಲದ ಗಂಡನಿಗೆ ಒಲಿದವಳು' ಎಂದು ಪ್ರವಚನಕಾರ ಮೃತ್ಯುಂಜಯ ಹಿರೇಮಠ ಹೇಳಿದರು. 


ಪಟ್ಟಣದ ದುರದುಂಡೇಶ್ವರ ಮಠದಲ್ಲಿ ನಡೆದ 'ಗುಡ್ಡಾಪುರ ದಾನಮ್ಮದೇವಿ ಪುರಾಣ' ಕಾರ್ಯಕ್ರಮದ ಒಂಬತ್ತನೆಯ ದಿನದ ಪ್ರವಚನ ನೀಡುತ್ತಾ ಮಾತನಾಡಿದ ಅವರು, ದಾನಮ್ಮ ದೇವಿಯು ಬಾಲ್ಯದಿಂದಲೇ ಶಿವಭಕ್ತಿಯಲ್ಲಿ ನಿರತಳಾಗಿದ್ದು, ಬೆಳೆಯುತ್ತ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿದಳು' ಎಂದು ಪ್ರತಿಪಾದಿಸಿದರು. 


ಅಕ್ಕನ ಬಳಗದ ಎಲ್ಲಾ ಸದಸ್ಯರು ದಾನಮ್ಮ ಹಾಗೂ ಸೋಮನಾಥರ ವಿವಾಹ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಪ್ರವಚನದ ನಂತರ ಭಕ್ತಾದಿಗಳಿಗೆ ಹೊಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 


ಪಂಪಾಪತಿ ತೋರಗಲಮಠ, ಶರಣೆ ಉಮಾತಾಯಿ ಪೂರ್ವಿಮಠ, ಮಾಜಿ ಗ್ರಾ. ಪಂ. ಅಧ್ಯಕ್ಷೆ ಕಸ್ತೂರಿ ಕಡೆಮನಿ, ಮಹಾದೇವಿ ಪಟ್ಟಣಶೆಟ್ಟಿ, ದ್ರಾಕ್ಷಾಯಣಿ ವಾಲಿ, ಹೇಮಾವತಿ ಹಾದಿಮನಿ, ಸುನೀತಾ ಪರಾಳಶೆಟ್ಟಿ, ನಿರ್ಮಲಾ ನಿಜಗುಲಿ, ರಾಜೇಶ್ವರಿ ಜಕಾತಿ, ಅಶ್ವಿನಿ ಪಟ್ಟಣಶೆಟ್ಟಿ, ಆಶಾ ಪರೀಟ ಸೇರಿದಂತೆ ಅಕ್ಕನ ಬಳಗದ ಸದಸ್ಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ