ಗೋಕಾಕ್

ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರೆ ಆರಂಭ

ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರೆ ಆರಂಭ
ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಘಟಪ್ರಭಾ: ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರೆ ಮಾ.23ದಿಂದ ಎ.5ರ ತನಕ ನಡೆಯಲಿದೆ.ದಿ.23ರಂದು ಬೆಳಿಗ್ಗೆ 9 ಗಂಟೆಗೆ ಬೆಲ್ಲದ ಬಾಗೇವಾಡಿಯ ಶಿವಾನಂದ ಮಹಾಸ್ವಾಮಿಗಳಿಂದ ಘಟಸ್ಥಲ ಧ್ವಜಾರೋಹಣ ನಡೆಯಲಿದೆ. ಘಟಪ್ರಭಾ ಮತ್ತು ಮಲ್ಲಾಪೂರ ಪಿ.ಜಿ ಅಕ್ಕನ ಬಳಗದವರಿಂದ ಪೂಜೆ ನಡೆಯಲಿದೆ.

ಸಂಜೆ 6 ಗಂಟೆಗೆ ಶರಣರ ಚರಿತಾಮೃತ ಪ್ರವಚನ ಪ್ರಾರಂಭವಾಗಲಿದ್ದು ಕಾರ್ಯಕ್ರಮಕ್ಕೆ ಘೋಡಗೇರಿ ವಿರಕ್ತಮಠದ ಕಾಶಿನಾಥ ಮಹಾಸ್ವಾಮಿಗಳು, ಬೆಂಡವಾಡದ ಗುರುಸಿದ್ಧ ಮಹಾಸ್ವಾಮಿಗಳು, ಘಟಪ್ರಭಾ ಹೊಸಮಠದ ವಿರೂಪಾಕ್ಷ ಮಹಾಸ್ವಾಮಿಗಳು ಹಾಗೂ ಪ್ರವಚನಕಾರ ಶಿವಕುಮಾರ ದೇವರು ತೇರದಾಳ ಆಗಮಿಸಲಿದ್ದಾರೆಎಂದು ಮಠದ ಪೀಠಾಧಿಕಾರಿ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದ್ದಾರೆ.


ಸುದ್ದಿ ಓದಿ