ಯರಗಟ್ಟಿ

ಯಕ್ಕುಂಡಿ ಗ್ರಾಪಂನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

ಯಕ್ಕುಂಡಿ ಗ್ರಾಪಂನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

ಲೋಕದರ್ಶನ ವರದಿ

ಯರಗಟ್ಟಿ 31: ಸಮೀಪದ ಯಕ್ಕುಂಡಿ ಗ್ರಾಮದ ಪಂಚಾಯತಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಕುಟುಂಬ ನಿರ್ವಹಣೆಯ ಉದ್ದೇಶದಿಂದ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಯಕ್ಕುಂಡಿ ಕುಮಾರೇಶ್ವರ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಗ್ರಾ. ಪಂ. ಅಧ್ಯಕ್ಷೆ ಪೈರೋಜಾ ಬಾ ಬಾರಿಗಿಡದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಾಸಾಬಿ ಇಮ್ಮನ್ನವರ, ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ, ಅಬ್ದುಲ್ಖಾದರಜೈಲಾನಿ ಬಾರಿಗಿಡದ, ಬಸನಗೌಡ ಪಾಟೀಲ, ಪರ್ತಕರ್ತ ಚಂದ್ರಕಾಂತ ಸಂಗಟಿ,ವಿನೋದರಾವ ದೇಸಾಯಿ, ನಾಗಪ್ಪ ಹಿಟ್ಟಣಗಿ, ಇಸ್ಮಾಯಿಲ್ ಮುಜಾವರ, ದುಂಡಯ್ಯಾ ಹಿರೇಮಠ, ಸಂಜಯ ಕೋರಕೊಪ್ಪ, ಅಡಿವೆಪ್ಪ ಬೆಳಗಾವಿ, ಲಕ್ಷ್ಮಣ ದೊಡಮನಿ, ವಾಲಪ್ಪ ಪಮ್ಮಾರ, ಪಿಡಿಓ ಶ್ರೀಶೈಲಗೌಡ ಎನ್, ಗ್ರಾಮಲೆಕ್ಕಾದಿಕಾರಿ ಮುದಕಪ್ಪ ಕದಂ, ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೈನಾಜ ಮುಜಾವರ, ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ, ಕಾರ್ಲಕಟ್ಟಿ ತಾಂಡೆ ಗ್ರಾಮಗಳ ಹಿರಿಯರು, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ಪ್ರಕಾಶ ಕಮ್ಮಾರ ಸ್ವಾಗತಿಸಿ ನಿರೂಪಿಸಿದರು. ಸಂಗಮೇಶ ಸಿದ್ನಾಳ ವಂದಿಸಿದರು 

ಸುದ್ದಿ ಓದಿ