ಶಿಗ್ಗಾವ್

ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಕೃತಜ್ಞತೆ

ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಕೃತಜ್ಞತೆ

ಶಿಗ್ಗಾವಿ 05:  ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ದಿದೃಷ್ಟಿಯಿಂದ ಪ್ರತ್ಯೇಕ ಸಚಿವಾಲಯವನ್ನು ರಚನೆ ಮಾಡಿ ಐತಿಹಾಸಿಕ ಮೈಲುಗಲ್ಲನ್ನು ನಿರ್ಮಿಸಿದ ಕರ್ನಾಟಕರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಬಸವರಾಜ ಬೊಮ್ಮಾಯಿಯವರಿಗೆ ಎನ್‌.ಎಮ್‌. ತಡಸಗ್ರಾಮ ಪಂಚಾಯತ ಸದಸ್ಯ ಹಾಗೂ ಮಹರ್ಷಿ ವಾಲ್ಮೀಕಿ ಬೇಡ ನಾಯಕ ಹಿತಾಭಿವೃದ್ದಿ ಸಂಘ ಅಧ್ಯಕ್ಷರು ಮತ್ತು  ಭಾ.ಜ.ಪ. ಎಸ್‌.ಟಿ ಮೋರ್ಚಾ ಕಾರ್ಯದರ್ಶಿಯಾದ ಬಸನಗೌಡ ರಾಮನಗೌಡ್ರ ಹೃದಯ ಪೂರ್ವಕ ಕೃತ್ಯಜ್ಞತೆಗಳನ್ನು ಸಲ್ಲಿಸಿದರು. 

ಸುದ್ದಿಗಾರರೊಂದಿಗೆ ಬಸನಗೌಡ ರಾಮನಗೌಡ್ರ ಕೃತ್ಯಜ್ಞತೆಗಳನ್ನು ಸಲ್ಲಿಸಿ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳು ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ಧಿ ಅನುದಾನದತ್ವರಿತ ಹಾಗೂ ಪರಿಣಾಮಕಾರಿ ಬಳಕೆಗೆ ಪ್ರತ್ಯೇಕ ಪರಿಶಿಷ್ಟ ಪಂಗಡಕಲ್ಯಾಣ ಸಚಿವಾಲಯ ನಿರ್ಧಾರವನ್ನು ಮುಖ್ಯಮಂತ್ರಿಗಳ ಮೊದಲ ಸಚಿವ ಸಂಪುಟದಲ್ಲಿಕೈಗೊಂಡಿದ್ದು ಸ್ವಾಗತಾರ್ಹಅಲ್ಲದೇ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದಂತೆಒಂದೇ ಸಚಿವಾಲಯವಿತ್ತುಆದರೆ ಪರಿಶಿಷ್ಟ ಪಂಗಡಕಲ್ಯಾಣದ ಕಾರ್ಯಕ್ರಮಗಳ ತ್ವರಿತಜಾರಿ, ಮೇಲ್ವಿಚಾರಣೆಗೆ ಪ್ರತ್ಯೇಕ ಸಚಿವಾಲಯ ಸೂಕ್ತ ಎಂದುತಜ್ಞರಅಭಿಪ್ರಾಯವಿತ್ತುಅದನ್ನು ಮನಗಂಡು ಪ್ರತ್ಯೇಕ ಸಚಿವಾಲಯ ನಿರ್ಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆಕರ್ನಾಟಕರಾಜ್ಯದ ಪರಿಶಿಷ್ಟ ಪಂಗಡದ ಹಾಗೂ ತಾಲೂಕಿನ ಪರಿಶಿಷ್ಟ ಪಂಗಡದ ಸದಸ್ಯರ ಪರವಾಗಿ ವಂದನೆ ಅಭಿನಂದನೆಗಳು ಸಲ್ಲಿಸಿದರು. 

ಈ ಸಂದರ್ಭದಲ್ಲಿಎಸ್‌.ಟಿ. ಮೋರ್ಚಾಜಿಲ್ಲಾಆದ್ಯಕ್ಷಯಮಕ್ಕನವರ, ತಾಲೂಕಎಸ್‌.ಟಿ. ಮೋರ್ಚಾಅಧ್ಯಕ್ಷ ಹನುಮಂತಪ್ಪ ಗುಳೇದ, ಉಪಾಧ್ಯಕ್‌ಯಲ್ಲಪ್ಪ ತಳವಾರ, ನಾಗರಾಜದೊಡ್ಡಮನಿ, ಪಕ್ಕೀರೇಶ ವಾಲ್ಮೀಕಿ, ಬಸವರಾಜ ಮಲ್ಲೂರ, ಶ್ರೀಕಾಂತ ಓಲೇಕಾರ, ಶ್ರೀಕಾಂತಗೌಡ ಪಾಟೀಲ, ಶಾಂತಪ್ಪ ತಳವಾರ ಸೇರಿದಂತೆತಾಲೂಕಿನಎಸ್‌.ಟಿ. ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ