ಗ್ರಾಪಂ ಚುನಾವಣೆ: ಶಾಂತಿಯುತ ಮತದಾನ
ಲೋಕದರ್ಶನ ವರದಿ
ಇಂಡಿ 28: ಸ್ಥಳೀಯ ಸರಕಾರ ಎಂದು ಬಿಂಬಿತವಾದ ಗ್ರಾಮ ಪಂಚಾಯತಿಗಳ ಎರಡನೇ ಹಂತದ ಚುನಾವಣೆ ತೀವೃ ಹಣಾ ಹಣಿ ನಡುವೆ ಯಾವುದೇ ಗದ್ದಲ ಗಲಾಟೆಯಾಗದೆ 38 ಗ್ರಾಮ ಪಂಚಾಯತಿಗಳಿಗೆ ಶಾಂತಿ-ಸುವ್ಯವಸ್ಥೆಯಿಂದÀ ರವಿವಾರದಂದು ಮತದಾನ ನಡೆಯಿತು.
ಗ್ರಾಮ ಪಂಚಾಯತ ಚುನಾವಣೆ ಬೆಳಗಿನ ಜಾವದ ಸಮಯದಲ್ಲಿ ಚಳಿ ಹೆಚ್ಚಾಗಿರುವ ಕಾರಣಕ್ಕಾಗಿ ಪ್ರಾರಂಭದಲ್ಲಿ ಮತದಾನ ಮಂದ ಗತಿಯಲ್ಲಿ ಸಾಗಿತು. ನಂತರ ಸ್ವಲ್ಪ ಬಿಸಿಲು ಕಾಣುತ್ತಿದಂತೆ ಮತಗಟ್ಟೆಗಳತ್ತ ಜನ ದವಡಾಯಿಸಿದರು ಇದರಿಂದಾಗಿ ಬೆಳಿಗ್ಗೆ 11 ಗಂಟೆಗೆ 22.85 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಶೇಕಡಾ 61 ರಷ್ಟು ಮತದಾನವಾಗಿದ್ದು ಕಂಡು ಬಂತು. ಇದರಿಂದಾಗಿ ಏರುಗತಿಯಲ್ಲಿ ಸಾಗಿದ ಮತದಾನ ಕಂಡು ಕೆಲವು ಅಭ್ಯರ್ಥಿಗಳಿಗೆ ಸಮಾದಾನ ತಂದರೆ ಕೆಲವರಿಗೆ ಅಭ್ಯರ್ಥಿಗಳಿಗೆ ದಿಗಿಲು ಹುಟ್ಟಿಸಿದ ವಾತವರಣ ಮೆಲ್ನೋಟಕ್ಕೆ ಕಂಡು ಬರುತ್ತಿತ್ತು. ನಂತರದಲ್ಲಿ ಮತದಾನ ಮಾಡಲು ಮಹಿಳೆಯರು, ಪುರುಷರು ಸೇರಿದಂತೆ ಯುವಕರು ಕೂಡಾ ಗುಂಪು ಗುಂಪಾಗಿ ಬಂದು ಮತದಾನ ಮಾಡಿದರು. ಒಟ್ಟು ತಾಲೂಕಿನ 38 ಗ್ರಾಮಪಂಚಾಯತಿಗಳ ಪುರುಷ-113,224/- ಮಹಿಳಾ-105412/- ಇತರರು-17 ಮತದಾರರು ಸೇರಿ ಒಟ್ಟು ಮತದಾರರು-218653 ಜನ ಮತದಾರಿದ್ದಾರೆ. ಕೊರೊನಾ ಮರೆತ ಮತದಾರರು ಬಹುತೇಕ ಗ್ರಾಮಗಳಲ್ಲಿ ಜನರು ಮತಗಟ್ಟೆಗಳಿಗೆ ಮಾಸ್ಕ್ ಧರಿಸದೆ ಆಗಮಿಸಿ ಮತದಾನ ಮಾಡಿದ್ದು ಕಂಡು ಬರುತ್ತಿತ್ತು.
ಜಿಲ್ಲಾಧಿಕಾರಿ ಭೇಟಿ: ಇಂಡಿ ತಾಲೂಕಿನ ಸೂಕ್ಷ್ಮ ಅತಿ ಸೂಕ್ಷ್ಮವಾಗಿದ್ದ ಹೊರ್ತಿ, ಸಾಲೋಟಗಿ, ಚವಡಿಹಾಳ, ಬಬಲಾದ, ಹಳಗುಣಕಿ ಗ್ರಾಮಗಳ ಕೆಲವು ಮತ ಗಟ್ಟೆಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನಿಲಕುಮಾರ ಅವರು ಭೆಟಿ ನೀಡಿದರು. ಅಲ್ಲಿನ ವಾಸ್ತು ಸ್ಥಿತಿ ಕುರಿತು ಚುನಾವಣಾ ಸಿಬ್ಬಂದಿಗಳ ಜೊತೆ ಖುದ್ದಾಗಿ ಚರ್ಚಿಸಿ ಮತಗಟ್ಟೆಗಳ ಭದ್ರತೆಯನ್ನು ಕೂಡಾ ಅವಲೋಕಿಸಿದರು. ನಂತರ ನಾದ ಕೆಡಿ ಹಾಗೂ ನಾದ ಬಿಕೆ ಗ್ರಾಮಗಳ ಮತಗಟ್ಟೆಗಳಿಗೆ ಕೂಡಾ ಭೇಟಿ ನೀಡಿ ಅಲ್ಲಿಂದ ಆಲಮೇಲ ಮಾರ್ಗವಾಗಿ ಸಿಂದಗಿ ತಾಲೂಕಿಗೆ ನಿರ್ಗಮಿಸಿದರು ಎಂದು ತಿಳಿದು ಬಂದಿದೆ.
ಇಂಡಿ ತಾಲೂಕಿನ ಪ್ರಸ್ತೂತ 38 ಗ್ರಾಮ ಪಂಚಾಯತಿಗಳ 620 ಸದಸ್ಯ ಸ್ಥಾನಗಳಿಗಾಗಿ 1716 ಜನ ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರ ಪ್ರಭುಗಳು ಬರೆದ ಹಣೆ ಬರಹವನ್ನು ಮತದಾನದ ರೂಪದಲ್ಲಿ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಮ್ ಸೇರಿವೆ.