ಹೂವಿನ ಹಡಗಲಿ

ಜೈನ್ ಸಮುದಾಯ ಭವನಕ್ಕೆ ಅನುದಾನ: ಶಾಸಕ ಕೃಷ್ಣನಾಯ್ಕ

ಜೈನ್ ಸಮುದಾಯ ಭವನಕ್ಕೆ ಅನುದಾನ: ಶಾಸಕ ಕೃಷ್ಣನಾಯ್ಕ

ರಜತಮಹೋತ್ಸವ, ಮಹಾವೀರ ಭವನ ಕಟ್ಟಡ ಉದ್ಘಾಟನೆ  

ಹೂವಿನಹಡಗಲಿ ಜು.16: ಪಟ್ಟಣದಲ್ಲಿ ಇನ್ನು ಒಂದು ತಿಂಗಳಲ್ಲಿ ಅಲ್ಪಸಂಖ್ಯಾತರ ಅನುದಾನದಲ್ಲಿ ಜೈನ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಶಾಸಕ ಕೃಷ್ಣನಾಯ್ಕ ಭರವಸೆ ನೀಡಿದರು. 

ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದಿಂದ ಭಾನುವಾರ ರಜತಮಹೋತ್ಸವ ಮತ್ತು ಮಹಾವೀರ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಜೈನ್ ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಹೇಳಿದ ಅವರು ಶಾಸಕರ ಅನುದಾನ 2ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ನಾನಾ ಸಮುದಾಯಗಳ ಅಪೂರ್ಣಗೊಂಡ ದೇಗಲುಗಳಿಗೆ ಮತ್ತು ನಿವೇಶನ ಹೊಂದಿರುವ ಸಮಾಜದವರಿಗೆ ಸಮುದಾಯ ಭವನಕ್ಕೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡುವುದಾಗಿ ಹೇಳಿದರು. 

ಪಟ್ಟಣ ಬೆಳೆದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಬೆಳವಣಿಗೆಗಳಾಗಿವೆ. ರಜತ ಮಹೋತ್ಸವ ಆಚರಿಸುವ ಮಹಾವೀರ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘ ಉತ್ತಮ ವಹಿವಾಟು ಹೊಂದಿದೆ. ಮುಂದಿನ ದಿನದಲ್ಲಿ ನೂರಾರು ಕೋಟಿ ವಹಿವಾಟು ಹೊಂದಲಿ ಎಂದು ಶಾಸಕರು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಮಹಾವೀರ ಅಲ್ಪಸಂಖ್ಯಾತರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಜೈನ್ 25ವರ್ಷದ ನಡೆದ ಬಂದ ಬ್ಯಾಂಕಿನ ನಷ್ಟ ಮತ್ತು ಪ್ರಗತಿ ಬಗ್ಗೆ ವಿವರಿಸಿದರು.ಅರ್ಬನ ಬ್ಯಾಂಕಿನ ನಿರ್ದೇಶಕರಾದ ಎಂ.ಪಿ.ಸುಮಾವಿಜಯ ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ಹೊಸನಗರದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿದರು.  

ಬ್ಯಾಂಕಿನ ಉಪಾಧ್ಯಕ್ಷ ವಿಜಯಕುಮಾರ ಜೈನ್, ಜೈನ್ ದಿಗಂಬರ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಹೆಚ್‌.ಎಸ್‌.ಪ್ರಶಾಂತ, ಮಹಾವೀರ ಅಲ್ಪಸಂಖ್ಯಾತರ ಸಹಕಾರ ಸಂಘದ ನಿರ್ದೇಶಕರಾದ ಬೊಮ್ಮಾಣ್ಣ, ಡಾ.ಎಂ.ಧರ್ಮಣ್ಣ, ಸಂತೋಷ ಜೈನ್, ಎಂ.ಭರತೇಶ, ಪುಷ್ಪಾವತಿ, ಹೆಚ್‌.ಪಾರ್ಶ್ವನಾಥ, ಹೆಚ್‌.ಡಿ.ಅಜಿತ್, ಹೆಚ್‌.ಜಿ.ಅಮಿತ್, ಎಂ.ಶಾಂತರಾಜ, ಡಿ.ನಾಗರಾಜ, ಆಶಾ, ಭರತೇಶ ಜೋಷಿ ಮತ್ತು ಸಿಬ್ಬಂದಿ ಇದ್ದರು. ಶಿಕ್ಷಕ ಪ್ರಕಾಶ ಜೈನ್ ಸಂಗಡಿಗರಿಂದ ಪ್ರಾರ್ಥನೆ ನಂತರ ಭರತೇಶ ಜೋಷಿ ಸ್ವಾಗತಿಸಿದರು. ಶಿಕ್ಷಕ ದ್ವಾರಕೇಶ ರೆಡ್ಡಿ ನಿರೂಪಿಸಿದರು. ಇದಕ್ಕೂ ಮುನ್ನ ಈಚೆಗೆ ಜೈನ್ ಮುನಿಗಳ ಹತ್ಯೆಯನ್ನು ಖಂಡಿಸಿ ಶ್ರದ್ಧಾಂಜಲಿ ಸಲ್ಲಿಸಿದರು. 


ಸುದ್ದಿ ಓದಿ