ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ: ಬಳ್ಳಾರಿ ಭರವಸೆ
ಬ್ಯಾಡಗಿ 30: ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಸ್ಮಾರ್ಟ್ ಕ್ಲಾಸ್ ಕೊಠಡಿ ಹಾಗೂ ಕಾಂಪೌಂಡ್ ನಿರ್ಮಾಣ ಮಾಡಲು ತಮ್ಮ ಶಾಸಕರ ನಿಧಿಯಿಂದ ಅನುದಾನವನ್ನು ನೀಡುವುದಾಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.
ನಿರ್ಮಿತಿ ಕೇಂದ್ರದ ವತಿಯಿಂದ ಪಟ್ಟಣದ ಶಾಸಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ 11ಲಕ್ಷ ರೂಗಳ ವೆಚ್ಚದ ಕೊಠಡಿ ಹಾಗೂ ಅಗಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ಲಕ್ಷ ರೂಗಳ ವೆಚ್ಚದಲ್ಲಿ ನವೀಕೃತಗೊಂಡ ಕೊಠಡಿಯನ್ನು ಮಂಗಳವಾರದಂದು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿ ಹಿನ್ನಲೆಯಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಅವಶ್ಯವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇದಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರಲ್ಲದೇ, ಸರ್ಕಾರವು ಹಲವಾರು ಯೋಜನೆಗಳನ್ನು ತರುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ತಿಮ್ಮಾರೆಡ್ಡಿ, ಬಿಇಒ ಬಿ.ಕೆ.ರುದ್ರಮುನಿ, ಎಂ.ಎಫ್.ಬಾರ್ಕಿ, ಪುರಸಭಾಧ್ಯಕ್ಷೆ ಕವಿತಾ ಸೊಪ್ಪಿನಮಠ, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಸದಸ್ಯರಾದ ಫಕ್ಕೀರಮ್ಮ ಚಲುವಾದಿ, ಮಲ್ಲಮ್ಮ ಪಾಟೀಲ, ಮುಖಂಡರಾದ ಎಸ್.ಎನ್.ಮಾತನವರ. ಸುರೇಶ ಯತ್ನಳ್ಳಿ, ಸುರೇಶ ಆಸಾದಿ, ವೀರೇಂದ್ರ ಶೆಟ್ಟರ, ಸುರೇಶ ಉದ್ಯೋಗಣ್ಣನವರ, ಜಿತೇಂದ್ರ ಸುಣಗಾರ, ಬಸವರಾಜ ಹಾವನೂರ, ಮಂಜಪ್ಪ ಬಣಕಾರ, ಭರಮಪ್ಪ ಗಾಜೇರ ಇಂಜನೀಯರ್ ಎಚ್.ಡಿ.ಶಾಂತಕುಮಾರ, ಶಾಲಾ ಮುಖ್ಯಶಿಕ್ಷಕರು, ಎಸ್’ಡಿಎಂಸಿ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.