ಹೂವಿನ ಹಡಗಲಿ

ಅನುದಾನ ತಾರತಮ್ಯ: ಸರ್ಕಾರ ವಿರುದ್ಧ ಶಾಸಕ ಕೃಷ್ಣನಾಯಕ ಆಕ್ರೋಶ

ಅನುದಾನ ತಾರತಮ್ಯ: ಸರ್ಕಾರ ವಿರುದ್ಧ ಶಾಸಕ ಕೃಷ್ಣನಾಯಕ ಆಕ್ರೋಶ

ಹೂವಿನಹಡಗಲಿ: 17: ’ಬಿಜೆಪಿ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವ ರಾಜ್ಯ ಸರಕಾರ ವಿರುದ್ಧ  ಶಾಸಕ ಕೃಷ್ಣನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.   

ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮಕ್ಕೆ ನೀಡಿರುವ 5 ಸಾವಿರ ಕೋಟಿ ರೂ. ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಹಂಚಿಕೆಯಾಗುತ್ತಿದೆ. ಬಿಜೆಪಿ ಶಾಸಕರಿಗೆ ಕೊಡದೇ ತಾರತಮ್ಯ ಆಗುತ್ತಿದೆ ಎಂದು ಆರೋಪಿಸಿದರು. ಕೆಕೆಆರಿ​‍್ಡಬಿ ಅನುದಾನ 7ಜಿಲ್ಲೆಗಳ ಅಭಿವೃದ್ಧಿಗೆಅನುದಾನ ನೀಡಬೇಕು. ಕ್ಷೇತ್ರದ ಶಾಸಕರಿಂದ ಕ್ರಿಯಾಯೋಜನೆ ಪಡೆದು ಹಣ ಹಂಚಿಕೆಯಾಗಬೇಕು. ಆದರೆ ಸರಕಾರ 1470 ಕೋಟಿ ರೂ.ಗಳನ್ನು ಶಿಕ್ಷಣ, ಆರೋಗ್ಯ, ಕಾರ್ಮಿಕ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಹಂಚಿಕೆ ಮಾಡಲಾಗುತ್ತಿದೆ. ಸಚಿವರು ತಮ್ಮ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ. ಬಿಜೆಪಿಯ ಶಾಸಕರಿಂದಲೂಕ್ರಿಯಾಯೋಜನೆ ಪಡೆಯದೇ ತಾರತಮ್ಯ ಮಾಡುತ್ತಿ ರುವುದು ಕ್ಷೇತ್ರಗಳ ಜನರನ್ನು ಅಭಿವೃದ್ಧಿಯಿಂದ ವಂಚಿತಗೊಳಿಸಲಾಗುತ್ತಿದೆ ಎಂದು ಟೀಕಿಸಿದರು.  

ನಿಗಮದಿಂದ ಸಾವಿರ ಕೋಟಿ ರೂ.ಗಳನ್ನು ಪ್ರಾದೇಶಿಕ ನಿಧಿಯಾಗಿ ಕಾಯ್ದಿರಿಸಿದೆ, ಬರೀ ಕಾಂಗ್ರೆಸ್ ಶಾಸಕರಿಗೆ ಹಂಚಿಕೆ ಮಾಡಲಾಗುತ್ತಿದೆ. ಜತೆಗೆ ಸಿಎಂ ವಿವೇಚನೆ 125 ಕೋಟಿ ರೂ., ಕೆಕೆಆರ್ ಡಿಬಿ ಸಚಿವರ ವಿವೇಚನೆ 125ಕೋಟಿ ರೂ., ನಿಗಮದ ಅಧ್ಯಕ್ಷರ ವಿವೇಚನೆ 125ಕೋಟಿ ರೂ., ಹೀಗೆ ಪ್ರತ್ಯೇಕವಾಗಿ ಹಂಚಿಕೆ ಮಾಡಿಕೊಂಡು ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಜತೆಗೆ ಬಡ್ಡಿ ಹಣದಲ್ಲೂ ತಾರತಮ್ಯ ಮಾಡುತ್ತಿರುವ ಸರಕಾರ ಇಡಿಯಾಗಿ ಕೆಕೆಆರಿ​‍್ಡಬಿ ಪ್ರದೇಶದ ಮತದಾರರನ್ನು ವಂಚಿಸುತ್ತಿದೆ. ಬಿಜೆಪಿ ಶಾಸಕರಿಗೆ ಅನುದಾನ ನೀಡದಿದ್ದರೆ ಸರಕಾರದ ತಾರತಮ್ಯ ನೀತಿಯನ್ನು ಸದನದಲ್ಲಿ  ಧರಣಿ, ರಾಜ್ಯಪಾಲರಿಗೆ ದೂರು ಕೊಡುವುದು ಸೇರಿದಂತೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಸಿದರು. 


ಸುದ್ದಿ ಓದಿ