ಶಿಗ್ಗಾವ್

ಪಟ್ಟಣದಲ್ಲಿ ಅಮೃತ ಮಹೋತ್ಸವದ ರಥಯಾತ್ರೆಗೆ ಭವ್ಯ ಸ್ವಾಗತ

ಪಟ್ಟಣದಲ್ಲಿ ಅಮೃತ ಮಹೋತ್ಸವದ ರಥಯಾತ್ರೆಗೆ ಭವ್ಯ ಸ್ವಾಗತ

ಶಿಗ್ಗಾವಿ : ಪಟ್ಟಣದ ಚನ್ನಮ್ಮ ವೃತ್ತದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ದೇಶಕ್ಕಾಗಿ ಹಲವಾರು ಮಹನೀಯರ ತ್ಯಾಗ, ಬಲಿದಾನದ ಪ್ರತೀಕವಾಗಿ ಹಾವೇರಿಯ ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘ ವತಿಯಿಂದ ಹಮ್ಮಿಕೊಂಡ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ರಥಯಾತ್ರೆಯನ್ನು ಸ್ವಾಗತಿಸಿ, ಬೀಳ್ಕೊಡಲಾಯಿತು. 

ಜಿಲ್ಲೆಯ ಹುತಾತ್ಮ ಸ್ವಾತಂತ್ರ್ಯ ಯೋಧರ ತ್ಯಾಗ, ಬಲಿದಾನ ಭಾರತೀಯ ಇತಿಹಾಸ ಪುಟಗಳಲ್ಲಿ ಬರೆಯಲಾಗಿದೆ. ಜಿಲ್ಲೆಯ ಹುತಾತ್ಮ ಸ್ವಾತಂತ್ರ್ಯ ಯೋಧರಾದ ಮೈಲಾರ ಮಹಾದೇವಪ್ಪ, ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ ಬ್ರಿಟಿಷರ ಖಜಾನೆಯನ್ನು ಲೂಟಿ ಮಾಡಿ, ಹೊಸರಿತ್ತಿಯಲ್ಲಿ ಸಾರ್ವಜನಿಕ ಸಮ್ಮುಖದಲ್ಲಿ ಬ್ರಿಟಿಷರ ಗುಂಡಿಗೆ ತಮ್ಮ 25 ನೇ ವಯಸ್ಸಿನಲ್ಲಿ ಹುತಾತ್ಮರಾದರು, ಇಂದು ನಾವೆಲ್ಲಾ ಸ್ವಚ್ಚಂದವಾಗಿ ಜೀವನ ಮಾಡಲು ಇಂತಹ ಮಹನೀಯರ ತ್ಯಾಗ ಬಲಿದಾನ ಸ್ಮರಣೆ ಮಾಡಬೇಕಾಗಿದೆ. ಹಾವೇರಿ ಜಿಲ್ಲೆ ಸ್ವಾತಂತ್ರ್ಯ ಹೋರಾಟ ಅಂದಿನ ದಿನಗಳಲ್ಲಿ ಮುಂಚೂಣಿಯಲ್ಲಿ ಮೈಲಾರ ಮಹದೇವಪ್ಪನವರ ಮುಖಂಡತ್ವದಲ್ಲಿ ಮುಂಚೂಣಿಯಲ್ಲಿತ್ತು, ಸ್ವಾತಂತ್ರ್ಯ ಯೋಧರ ಪರಿವಾರಗಳಿಗೆ ಸರಕಾರ ಸವಲತ್ತುಗಳನ್ನು ಕೊಡಬೇಕಾಗಿದೆ. ಮತ್ತು ಅವರನ್ನು ನಾವು ಗೌರವಿಸಬೇಕಾಗಿದೆ. 

ನಿನ್ನೆ ರಾತ್ರಿ ಶಿಗ್ಗಾಂವ ನಗರಕ್ಕೆ ಆಗಮಿಸಿದ ರಥಯಾತ್ರೆಯು ಹುಲಗೂರು, ಬನ್ನೂರು, ಕೆಂಗಾಪುರ, ಗ್ರಾಮಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ಹುತಾತ್ಮ ಯೋಧರ ಯಶೋಗಾಥೆಯನ್ನು ಪರಿಚಯಿಸಿತು, ಗ್ರಾಮಗಳಲ್ಲಿ ನಾಗರೀಕರು ಹರ್ಷದಿಂದ ಸ್ವಾಗತಿಸಿ, ಬಿಳ್ಕೊಟ್ಟರು.  

ಇದೇ ಸಂದರ್ಭದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿ ಪದಾಧಿಕಾರಿಗಳನ್ನು ಶಿಗ್ಗಾವಿ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  

ತಹಶೀಲ್ದಾರ ಶಿವಾನಂದ ರಾಣೆ, ಮಾಜಿ ವಿ.ಪ.ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಜಾಫರಖಾನ ಪಠಾಣ, ಸದಸ್ಯ ಸುಭಾಷ ಚವ್ಹಾಣ, ಮಜೀದ ಮಾಳಗಿಮನಿ, ಗದಿಗೆಪ್ಪ ಕೊಡ್ಲಿವಾಡ, ಜಗದೀಶ ಮಹಾರಾಜಪೇಟೆ, ಶಿವಯೋಗಯ್ಯ ಬಿ. ಲೋಕನಗೌಡ್ರ ಶಿಗ್ಗಾಂವ ತಾಲೂಕಿನ ಸ್ವಾತಂತ್ರ್ಯ ಹೋರಾಟದ ಪರಿವಾರದ ಟಾಕನಗೌಡ್ರ. ಪಾಟೀಲ, ಗಾಂಧಿ ಹೆಸರೂರ, ಶಂಕರ ಕೆ. ಅರ್ಕಸಾಲಿ, ಶಾಂತಪ್ಪ ಮಡಿವಾಳರ, ಗಣೇಶ ಬಡಿಗೇರ, ಮಂಜುಳಾ ಅರ್ಕಸಾಲಿ, ಹಾಗೂ ನಾಗರೀಕರು ಉಪಸ್ಥಿತರಿದ್ದರು. 


ಸುದ್ದಿ ಓದಿ