ನಲಂದ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಗ್ರ್ಯಾಂಡ್ ಗಾಲಾವಾಣಿಜ್ಯ ಸಾಂಸ್ಕೃತಿಕ ಮೇಳ

ನಲಂದ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಗ್ರ್ಯಾಂಡ್ ಗಾಲಾವಾಣಿಜ್ಯ ಸಾಂಸ್ಕೃತಿಕ ಮೇಳ

ಬಳ್ಳಾರಿ 31:ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವದರ ಜೊತೆಗೆ, ಮಕ್ಕಳಲ್ಲಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ವಾಣಿಜ್ಯ ಮೇಳ ಸೂಕ್ತ ವೇದಿಕೆಯಾಗಿದೆ ಎಂದು ನಲಂದಾ ವಿದ್ಯಾನಿಕೇತನ ಶಾಲೆ ಪ್ರಾಚಾರ್ಯ ಶ್ರೀಕಲಾ ಅವರು ಹೇಳಿದರು. ನಗರದ ಮೋಕಾ ರಸ್ತೆಯ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ನಲಂದ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್ವಿಎನ್ ಗ್ರ್ಯಾಂಡ್ ಗಾಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಲು ಆದ್ಯತೆ ನೀಡಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಮಕ್ಕಳಲ್ಲೂ ನಾನಾ ಪ್ರತಿಭೆಗಳಿರುವುದು ಸಹಜ, ಈ ಹಿನ್ನೆಲೆಯಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ವಾಣಿಜ್ಯ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಮೇಳಗಳನ್ನು ಆಯೋಜಿಸುವದರಿಂದ ಮಕ್ಕಳ ಜ್ಞಾನ ವೃಧ್ಧಿಯಾಗಲಿದೆ ಎಂದರು. ಅರ್ಥಪೂರ್ಣವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಲಂದ ವಿದ್ಯಾನಿಕೇತನ ಶಾಲೆ ಸೇರಿದಂತೆ ನಾನಾ ಶಾಲೆ ಮಕ್ಕಳಿಂದ ನೃತ್ಯ ಸ್ಪಧರ್ೆ, ಫ್ಯಾಶನ್ ಶೋ, ಛದ್ಮವೇಷ, ನಾನು ಮತ್ತು ಅಮ್ಮ ಸೇರಿದಂತೆ ನಾನಾ ಸ್ಪಧರ್ೆಗಳನ್ನು ಆಯೋಜಿಸಲಾಗಿದೆ. ನಲಂದ ಶಿಕ್ಷಣ ಸಂಸ್ಥೆ ಕಳೆದ 30ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವಲ್ಲಿ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ನಮ್ಮ ಸಂಸ್ಥೆ ಎಲ್ಲ ಮಕ್ಕಳ ಸರ್ವತೋಮುಖ ಅಭಿವೃಧ್ಧಿಗೆ ಮೊದಲ ಆದ್ಯತೆ ನೀಡಿದ್ದು, ರಾಜ್ಯ ಸೇರಿದಂತೆ ದೇಶದ ನಾನಾ ಕಡೆ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು. ಶಾಲೆ ಡೀನರಾದ ಗೌರಂಗ ಚರಣ್ ಮಹಂತೂ ಅವರು ಪ್ರಾಸ್ತಾವಿಕವಾಗಿ  ಮಾತನಾಡಿದರು. ನಂತರ ನಲಂದ ಶಾಲೆ ಸೇರಿದಂತೆ ನಗರದ ನಾನಾ ಶಾಲೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಫ್ಯಾಶನ್ ಶೋ, ನೃತ್ಯ ಸ್ಪಧರ್ೆಗಳು ನಡೆದವು. ವಿಜೇತ ಮಕ್ಕಳೀಗೆ ಸಂಸ್ಥೆಯ ಮುಖ್ಯಸ್ಥರು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಪ್ರೋತ್ಸಾಹಿಸಿದರು. ಪಾಲಕರಿಗೆ ಆಯೋಜಿಸಿದ್ದ ನಾನು ಮತ್ತು ಅಮ್ಮ ಎನ್ನುವ ಸ್ಪಧರ್ೆ ಎಲ್ಲರ ಗಮನಸೆಳೆಯಿತು. ಶಾಲೆ ಆವರಣದಲ್ಲಿ ಶಾಲೆ ಮಕ್ಕಳು, ಫುಡ್ಬಜಾರ್, ಗೇಮ್ಸ್, ಗಿಫ್ಟ್ ಮಳಿಗೆಗಳನ್ನು ಸ್ಥಾಪಿಸಿ ವ್ಯವಹಾರ ನಡೆಸಿ ಗಮನಸೆಳೆದರು. ಈ ಸಂದರ್ಭದಲ್ಲಿ ಸಹ ಪಠ್ಯ ಚಟುವಟಿಕೆ ವಿಭಾಗದ ಮುಖ್ಯಸ್ಥರಾದ ಕರಿಯಪ್ಪ ಡಿ., ಅನ್ನಪೂರ್ಣ, ಈರಾಬಾಯಿ, ನೃತ್ಯ ವಿಭಾಗದ ಪ್ರಶಾಂತ್, ಕಲಾ ವಿಭಾಗದ ಹೊನ್ನೂರು ಸ್ವಾಮೀ ಸೇರಿದಂತೆ ನಗರದ ನಾನಾ ಶಾಲೆಯ ನೂರಾರು ಮಕ್ಕಳು, ಪಾಲಕರು ಇತರರಿದ್ದರು. ಶಿಕ್ಷಕಿ ಮಿತಿಲಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಕರಿಯಪ್ಪ ಡಿ., ವಂದಿಸಿದರು.


ಸುದ್ದಿ ಓದಿ