ವಿಜಯಪುರ

ವೇತನಕ್ಕಾಗಿ ಗ್ರಾ.ಪಂ. ನೌಕರನ ಧರಣಿ ಎರಡನೆ ದಿನಕ್ಕೆ

ವೇತನಕ್ಕಾಗಿ ಗ್ರಾ.ಪಂ. ನೌಕರನ ಧರಣಿ ಎರಡನೆ ದಿನಕ್ಕೆ

ಲೋಕದರ್ಶನ ವರದಿ  

           ವಿಜಯಪುರ 24 : ಸಿಂದಗಿ ತಾಲುಕಿನ ಹಂದಿಗನೂರ ಗ್ರಾಮ ಪಂಚಾಯತ ನೌಕರನ ಕುಟುಂಬ ಸಹಿತ ಧರಣಿ ಸತ್ಯಾಗ್ರಹವು ಇಂದು ಎರಡನೆ ದಿನದಲ್ಲಿ ಕಾಲಿಟ್ಟದೆ ಕಳೆದ ಹದಿಮೂರು ತಿಂಗಳಿದ ವೇತನ ಇಲ್ಲದೆ ಕೆಲಸ ಮಾಡುತ್ತಿರುವ ಅಂಗವಿಕಲ ನೌಕರ ಮುರಗೇಂದ್ರ ಹುಣಶ್ಯಾಳ ತನ್ನ ಕುಟುಂಬ ನಿರ್ವಹಣೆ ಗೆ ಸಾಲ ಮಾಡಿ ಮಾಡಿ ಹೈರಾಣ ಆಗಿದ್ದಾನೆ.

            ವೇತನ ಬಟವಡೆ ಮಾಡುವಂತೆ ಸಂಬಂದ ಪಟ್ಟ ಅಧಿಕಾರಿಗಳಿಗೆ ಅಂಗಲಾಚಿ ಬೇಡಿಕೊಂಡರು ಯಾವದೆ ಪ್ರಯೋಜನೆ ಆಗದ್ದರಿಂದ ಕಳೆದ ಎರಡು ತಿಂಗಳ ಹಿಂದೆ ಹಂದಿಗನೂರ ಗ್ರಾಮ ಪಂಚಾಯತ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಕುಳಿತುಕೊಂಡಾಗ ತಾಲುಕಾ ಪಂಚಾಯತ ಆಡಳಿತಾಧಿಕಾರಿಗಳಾಗಿದ್ದ ಅನಿಲ್ ಹಳ್ಳಿಯವರು ಎರಡು ದಿನಗಳಲ್ಲಿ ವೇತನ ಬಟವಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು ಇಗ ಎರಡು ತಿಂಗಳದರೂ ಇಲ್ಲಿಯವರೆಗೆ ವೇತನ ನಿಡದೆ ಇರುವದರಿಂದ ಅನಿವಾರ್ಯವಾಗಿ ಇಗ ವಿಜಯಪುರ ಜಿಲ್ಲಾ ಪಂಚಾಯತ ಮುಂದೆ ದರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. 

               ಧರಣಿಕಾರರಿಗೆ ಬೆಟ್ಟಿಯಾಗಿ ವೆತನ ಮಾಡುವುದಾಗಿ ಹೇಳುತ್ತಿದ್ದರೆ ವಿನಹ ವೆತನ ನೀಡುತ್ತಿಲ್ಲ. ಸಿಬ್ಬಂದಿ ವೆತನ. ನೀಡುವಂತೆ ಸರಕಾರವು ಕಳೆದ ಒಂದು ವರುಷದಿಂದ ಸದರಿ ನೌಕರನ ವೇತನ ಬಿಡುಗಡೆ ಮಾಡಿದ್ದರು. ಪಿಡಿಓ ಲಕ್ಷ್ಮಣ ತಾರಾ ನಾಯಕ ಅವರು ವೇತನ ನೀಡದೆ ಸತಾಯಿಸುತ್ತಿದ್ದಾರೆ. 

                ಜಿಲ್ಲಾ ಪಂಚಾಯತ ಡಿ ಎಸ್‌-1 ಪ್ರಕಾಶ ವಡ್ಡರ ತಾಲೂಕಾ ಪಂಚಾಯತ ಆಡಳಿತ ಅಧಿಕಾರಿಗಳಾದ ಅನಿಲ್ ಹಳ್ಳಿಯವರು ಸತ್ಯಾಗ್ರಹಿ ಕುಟುಂಬಕ್ಕೆ ಭೆಟ್ಟಿ ಕೊಟ್ಟು ಪಿಡಿಓ ಅವರಿಗೆ ವೇತನ ಬಿಡುಗಡೆ ಮಾಡುವಂತೆ ಆದೆಶಿಸಿದ್ದರು. ವೇತನ ಬಿಡುಗಡೆ ಮಾಡುತ್ತಿಲ್ಲ ಎರಡನೆ ದಿನದ ಸತ್ಯಾಗ್ರಹ ಸ್ಥಳಕ್ಕೆ ಗ್ರಾಪಂ ನೌಕರರ ಸಂಘದ ಜಿಲ್ಲಾ ಗಭರವ ಅದ್ಯಕ್ಷ ಅಣ್ಣಾರಾಯ ಈಳಗೇರ. ಜನವಾದಿ ಮಹಿಳಾ ಸಂಘದ ಜಿಲ್ಲಾ ಮುಖಂಡರಾದ ಸುರೆಖಾ ರಜಪೂತ ಕರ್ನಾಟಕ ಪ್ರಾಂತ ರಭತ ಸಂಘದ ಸಿಂಧಗಿ ತಾಲೂಕ ಅಧಯಕ್ಷ ಬಸಿರ ಅಹ್ಮದ ತಾಂಬೆ ಮುಂತಾದವರು ಬೆಂಬಲ ವ್ಯಕ್ತಪಡಿಸಿದರು. 


ಸುದ್ದಿ ಓದಿ