ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ!
ಲೋಕದರ್ಶನ ವರದಿ
ವಿಜಯಪುರ 24 : ವಿಶ್ವ ಗುರು ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಲೇಖಕ ರವಿಹಂಜ ಹೇಳಿಕೆಯನ್ನು ಖಂಡಿಸಿ ನೂರಾರು ಪ್ರತಿಭಟನಕಾರರೊಂದಿಗೆ ದಲಿತ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಪರಸರಾಮ ಲಂಬು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಗಳಿಗೆ ಮನವಿ ಸಲ್ಲಿಸಿದರು.
ಸೋಮವಾರ ನಗರದ ಅಂಬೇಡ್ಕರ್ ಸರ್ಕಲ್ನಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಘೋಷಣೆಗಳನ್ನು ಕೂಗುವ ಮುಖಾಂತರ ಭೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ರಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪು ಗುಣಕಿ ಜಗಜ್ಯೋತಿ ಬಸವಣ್ಣನವರು 12ನೇ ಶತಮಾನಿನಲ್ಲಿ ಜಾತಿ ವ್ಯವಸ್ಥೆಯ ವಿರುದ್ದ ಹೋರಾಡಿ ಅಂತರ ಜಾತಿ ವಿವಾಹ ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತಂದವರು, ದೀನದಲೀತರ ಪರವಾಗಿದ್ದವರು, ಸಮಾನತೇಯ ಹರಿಕಾರರು ಅಂತಹ ಮಹಾನ್ ಶರಣರ ಬಗ್ಗೆ ಕೆಟ್ಟದಾಗಿ ಮಾತನಾಡಿದ ರವಿ ಹಂಜಗೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ರವಿ ಹಂಜ ಯಾರದೋ ಮಾತು ಕೇಳಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಹೀಗೆ ಬಸವಣ್ಣನವರನ್ನು ಅವಮಾನಿಸಿ ಮಾತನಾಡಿದ್ದಾನೆ. ಸ್ವಂತ ಬುದ್ದಿ ಇಲ್ಲದ ಕಳ್ಳ ಲೇಖಕ, ಇವನನ್ನು ದೇಶಬಿಟ್ಟು ಓಡಿಸಿ ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಚೆನ್ನು ಕಟ್ಟಿಮನಿ, ಸುರೇಶ ಘೋಣಸಗಿ, ಪರಶು ಛಲವಾದಿ, ಸಿದ್ದು ರಾಯಣ್ಣವರ, ಸುರೇಶ್ ಬಿಜಾಪುರ, ಸೋಮು ಹಟ್ಟಿ, ಮುತ್ತೀನಕುಮಾರ ದೇವದಾರ,
ಸೋಮು ರಣದೇವಿ, ರಮೇಶ್ ಭೋರಗಿ, ವಿಠ್ಠಲ ವಡ್ಡರ, ರಮೇಶ ಕವಲಗಿ, ಭಾಸ್ಕರ ಮಾದೇವ ಲಂಬು, ಹಣಮಂತ ಹೇಂಡೇಗಾರ, ರಮೇಶ ಹೇಂಡೇಗಾರ, ಸಂಜು ಶಹಾಪುರ, ಮಲ್ಲು ಶಹಾಪುರ, ಕಂಠಿ ಸಿದ್ದು, ಆಳೂರ ಶಿವರಾಯ ಕಟ್ಟಿಮನಿ, ಗೋಪಿ ಛಲವಾದಿ, ಅಜಯ್ ಭೋರಗಿ, ಯಮನಪ್ಪಾ ಮಾಯಾವಂಶಿ, ಮಾರುತಿ ಬೂದಿಹಾಳ, ಸುಖದೇವ್ ಛಲವಾದಿ, ಅಡಿವೆಪ್ಪ ಸಾಲಗಲ್, ಉಮೇಶ್ ಹೆಂಡೇಗಾರ, ವಿರೇಶ ವಾಲಿಕಾರ, ಮಹಾದೇವ ಕಾಂಬಳೆ, ಕಿರಣ ಅಲಿಯಾಬಾದ, ರವಿ ಕವಲಗಿ,
ಶ್ರೀಧರ್ ಬ್ಯಾಲ್ಯಾನ್, ಮಲ್ಲಪ್ಪಾ ಕಾಂಬಳೆ, ಮಲ್ಲು ಜಾಲಗೇರಿ, ಸುನೀಲ್ ಸೂರ್ಯವಂಶಿ, ಸುನೀಲ್ ಭೋರಗಿ, ಬಸಪ್ಪ ಭೋರಗಿ, ಅಶೋಕ ನಡುವಿನಮನಿ, ಸಂತೋಷ ಠಕ್ಕೆ, ಭೀಮಣ್ಣ ಹಂಚನಾಳ, ಮಾಹಾಂತೇಶ ಕಾಳೆ, ಅನೀತಾ ದಡೇಕರ, ನೀತಾ ಕಾಳೆ, ಆಯುಸ್ಮಾನ ಆಶಾ ಕಲಕೇರಿ, ಆಯುಸ್ಮಾನ ಕಲ್ಮೇಶ ಶಹಾಪೇಟಿ, ಪರಸುರಾಮ ಗರಸಂಗಿ, ಅಶೋಕ ನಡುವಿನಮನಿ, ಸಂಜಯ ಬಡನ್ನವರ, ಸಂಗು ಗುಣಕಿ, ಆನಂದ ಅವದಿ, ರಾಕೇಶ ಕುಮಟಗಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.