ಬಳ್ಳಾರಿಯ ನೋಬೆಲ್ ಲರ್ನಿಂಗ್ ಸೆಂಟರ್ ನಲ್ಲಿ ಉಚಿತ ಯುನಾನಿ ಆರೋಗ್ಯ ಶಿಬಿರ: 216 ಮಂದಿಗೆ ಚಿಕಿತ್ಸೆ
ಲೋಕದರ್ಶನ ವರದಿ
ಬಳ್ಳಾರಿ 24: ನಗರದ ನೋಬೆಲ್ ಲರ್ನಿಂಗ್ ಸೆಂಟರ್ ನಲ್ಲಿ ಮಂಗಳವಾರ ಉಚಿತ ಯುನಾನಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಯುನಾನಿ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಯುನಾನಿ ಚಿಕಿತ್ಸೆ ಮತ್ತು ಓಷಧಗಳನ್ನು ವಿತರಿಸಲಾಯಿತು. ಸುಮಾರು 216 ಶಿಬಿರಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ಶಿಬಿರದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುನಿವಾಸುದೇವರೆಡ್ಡಿ, ಮುಖ್ಯ ವೈದ್ಯಾಧಿಕಾರಿ ಡಾ. ಸೈಯದ್ ಜೈನುಲ್ ಆಬೀದೀನ್, ಡಾ. ಮಾಧುರಿ, ಡಾ. ದೀಪ ಅರುಣ್ ಕಾಕತೀಕರ, ಡಾ. ಕೆ. ಕಲ್ಯಾಣಿ, ಡಾ. ಗುರುಮುರುಗೇಶ್ ಹಾಗೂ ಸಿಬ್ಬಂದಿಗಳಾದ ಭಾಗ್ಯಶ್ರೀ, ಚಂದ್ರಕಾಂತ್, ವೆಂಕಟಲಕ್ಷ್ಮಮ್ಮ ಮತ್ತು ಚಂದ್ರ್ಪ ಉಪಸ್ಥಿತರಿದ್ದರು.