ರಾಣೆಬೆನ್ನೂರ

ಚೌಡೇಶ್ವರಿದೇವಿ ಜಾತ್ರೆ ಸರಳವಾಗಿ ಆಚರಿಸಲು ನಿರ್ಧಾರ

ಚೌಡೇಶ್ವರಿದೇವಿ ಜಾತ್ರೆ ಸರಳವಾಗಿ ಆಚರಿಸಲು ನಿರ್ಧಾರ

ರಾಣೆಬೆನ್ನೂರು 15: ನಗರದ ಪ್ರಸಿದ್ಧ ಜಾತ್ರೆಯಾಗಿರುವ ಗ್ರಾಮದೇವತೆ ಚೌಡೇಶ್ವರಿ ಜಾತ್ರಾ ಮಹೋತ್ಸವವು ಜ. 25 ರಿಂದ 30ರವರೆಗೆ ನಡೆಯಲಿದ್ದು,  

ಕೊರೊನಾ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಗಳ ಮಾರ್ಗಸೂಚಿ ಅನ್ವಯ ಡಿಜೆ ಹಾಗೂ ಮೆರವಣಿಗೆ ನಿಷೇಧಿಸಲಾಗಿದೆ. ಧಾರ್ಮಿಕ ವಿಧಿವಿಧಾನಗಳ ಮೂಲಕ ಭಕ್ತರು ಹಾಗೂ ದೇವಸ್ಥಾನ ಸಮಿತಿಯವರು ಒಗ್ಗೂಡಿ ಸರಳವಾಗಿ ಆಚರಿಸಬೇಕೆಂದು ತಹಶೀಲ್ದಾರ ಬಸವನಗೌಡ ಕೋಟೂರು ಹೇಳಿದರು.  

ಸ್ಥಳೀಯ  ನಗರ ಪೊಲೀಸ್ ಠಾಣೆಯಲ್ಲಿ ಗಂಗಾಜಲ ಹಾಗೂ ತುಂಗಾಜಲ ಚೌಡೇಶ್ವರಿದೇವಿ ಹಾಗೂ ಕಟ್ಟಿ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಶಾಂತಿ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಾತ್ರೆಯ ಮೆರವಣಿಗೆಯಲ್ಲಿ 100 ಜನರು ಮಾತ್ರ ಭಾಗವಹಿಸಬೇಕು, ಡಿಜೆ ಧ್ವನಿವರ್ಧಕ, ದೊಡ್ಡ ಮೆರವಣಿಗೆ, ಅದ್ದೂರಿ, ಆಡಂಬರಗಳಿಗೆ ಈ ಬಾರಿ ಅವಕಾಶವಿಲ್ಲ.ಆದರೆ ಧಾರ್ಮಿಕ ವಿಧಿ ವಿಧಾನಗಳಿಗೆ ಯಾವುದೇ ಅಡೆತಡೆಯಿಲ್ಲ. ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಬರುತ್ತಾರೆ, ಆದ್ದರಿಂದ ಜನರು ಸಹಕಾರ ನೀಡಿ, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಜಾತ್ರೆಯಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನೆಯ ಯಾವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಹಾಗೂ ಅಂಗಡಿಗಳಿಗೆ ಪರವಾನಿಗೆ ನೀಡುವುದಿಲ್ಲ. ನಗರಸಭೆಯಿಂದ ಸ್ವಚ್ಛತೆ, ದೇವಸ್ಥಾನದ ಬಳಿ ದಿನದ 24 ಗಂಟೆ ನೀರು ಸರಬರಾಜು, ಅಗ್ನಿಶಾಮಕದಳ, ಗೃಹರಕ್ಷಕದಳ ಹಾಗೂ ಪೋಲಿಸರ ಅವಶ್ಯತೆಯ ಸೇವೆ ಲಭ್ಯವಾಗಲಿದೆ. ಸರಳ ರೀತಿಯಲ್ಲಿ ಜಾತ್ರೆಯನ್ನು ಆಚರಿಸಲು ಜನರು ಸಹಕಾರ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಹರ ಸಿಪಿಐ ಎಂ.ಐ. ಗೌಡಪ್ಪಗೌಡ್ರ,ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಪೌರಾಯುಕ್ತ ಡಾ.ಮಹಾಂತೇಶ, ಪಿಎಸ್‍ಐ ಪ್ರಭು ಕೆಳಗಿನಮನಿ, ಕೆ.ಸಿ.ಕೋಮಲಾಚಾರ್ ಮತ್ತಿತರರು ಮಾತನಾಡಿದರು. 

ಗಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿಯ ಶಶಿಧರ ಬಸೇನಾಯ್ಕರ್,  ತುಂಗಾಜಲ ಚೌಡೇಶ್ವರಿ ದೇವಿಯ ಸಮಿತಿಯ ಶೇಖಪ್ಪ ಹೊಸಗೌಡ್ರ, ನಗರಸಭಾ ಸದಸ್ಯರುಗಳಾದ ಮಲ್ಲಿಕಾ ರ್ಜುನ ಅಂಗಡಿ, ನಾಗರಾಜ ಪವಾರ, ನಿಂಗರಾಜ ಕೋಡಿ ಹಳ್ಳಿ, ಪ್ರಕಾಶ ಪೂಜಾರ, ನೂರುಲ್ಲಾ ಖಾಜಿ, ಜಯಶ್ರಿ ಪಿಸೆ, ಪ್ರಭಾವತಿ ತಿಳವಳ್ಳಿ, ಪ್ರಮು ಖರಾದ ರಾಮಣ್ಣ ಕಾಕಿ, ಅನಿಲಕುಮಾರ ಸಿದ್ದಾಳಿ,ರಾಘವೇಂದ್ರ ಚಿನ್ನಿಕಟ್ಟಿ, ಮಲ್ಲಿಕಾ ರ್ಜುನ ಪೂಜಾರ, ಕೃಷ್ಣಪ್ಪ ಬ್ಯಾಡಗಿ, ಮೈಲಪ್ಪ ಗೋಣಿಬಸಮ್ಮನವರ ಸೇರಿದಂತೆ ಮತ್ತಿತರರು ಭಾಗವಹಿಸಿ ಸಲಹೆ-ಸೂಚನೆ ನೀಡಿದರು.

ಸುದ್ದಿ ಓದಿ