ತಾಳಿಕೋಟಿ

ಭ್ರಷ್ಠಾಚಾರದ ಸರ್ಕಾರಗಳು ಆಡಳಿತದಲ್ಲಿವೆ: ನಾಡಗೌಡ

ಭ್ರಷ್ಠಾಚಾರದ ಸರ್ಕಾರಗಳು ಆಡಳಿತದಲ್ಲಿವೆ: ನಾಡಗೌಡ

ತಾಳಿಕೋಟೆ 15: ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ರಾಮ ಮಂದಿರದಲ್ಲಿಯೇ ಭ್ರಷ್ಠಾಚಾರ ನಡೆಸುತ್ತಿದ್ದು, ಇನ್ನು ಜನ ಸಾಮಾನ್ಯರಿಗೆ ಯಾವ ಯೋಜನೆಗಳು ನೀಡಲು ಸಾಧ್ಯ. ರಾಷ್ಟ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಮೋದಿಯವರ ಆಟ ಇನ್ನು ನಡೆಯಲ್ಲ. ದೇಶದ ಜನ ತಿರುಗಿ ಬಿಳಲು ಸಿದ್ದರಾಗಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಹೇಳಿದರು. 

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಜನ ಹಿತಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಭ್ರಷ್ಟಾಚಾರ ಹಣದಿಂದ ಶಾಸಕರನ್ನು ಕೊಂಡುಕೊಂಡು ಅನಾಚಾರದಿಂದ ಸರ್ಕಾರ ನಡೆಸುತ್ತಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ 10ಅ ಸರ್ಕಾರ ಎಂದು ಭಾಷಣ ಮಾಡುತ್ತಿದ್ದರು. ಆಧರೆ ಇಂದು ಯಡಿಯೂರ​‍್ಪ ನೇತೃತ್ವದ ಸರ್ಕಾರ 30 ಅ ಸರ್ಕಾರವಾಗಿದೆ. ಯಾವ ಜನಪರ ಯೋಜನೆಗಳು ಇಲ್ಲ. ಶಾಲೆ, ಆಸ್ಪತ್ರೆ, ವಸತಿ ನಿಲಯಗಳ ನಿರ್ಮಾಣ ಇಲ್ಲ. ನಾವು ಕೊಡುವ ಅಕ್ಕಿಯಲ್ಲಿ 2 ಕೆಜಿ ಕಡಿಮೆ ಮಾಡಿದ್ದಾರೆ. ರೈತರಿಗೆ ಪರಿಹಾರ ಇಲ್ಲ. ಕಮಿಷನ್ ಬರುವಂತ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಠಾಚಾರ ತಂಡವವಾಡುತ್ತಿದೆ. ತಹಶಿಲ್ದಾರ ಕಚೇರಿ, ಸಬ್ ರಿಜಿಸ್ಟಾರ ಕಚೇರಿ, ಪೊಲೀಸ್ ಇಲಾಖೆಯಲ್ಲಿ ಭ್ರಷ್ಠಾಚಾರ ಮಿತಿ ಮೀರಿದೆ. ಒಂದು ಕ್ಷೇತ್ರ ಅಂತಲ್ಲಾ ಎಲ್ಲ ಕ್ಷೇತ್ರಗಳಲ್ಲಿ ಬ್ರಷ್ಠಾಚಾರ ನಡೆಯುತ್ತಿದೆ. ಜನರನ್ನು ಹಗಲಿನಲ್ಲೇ ಕೊಲೆ ಮಾಡುತ್ತಿದೆ. ರಾಮ ಮಂದಿರದಲ್ಲಿಯೂ ಸಹ ಬ್ರಷ್ಠಾಚಾರ ನಡೆಯುತ್ತಿದೆ ಎಂದರೇ ಮಂದಿರ ನಿರ್ಮಾಣದಲ್ಲಿ ಎಷ್ಟು ದುಡ್ಡು ಹೊಡೆಯುತ್ತಾರೆ? ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವವರು ಸಹ ಅವನ ಹೆಸರನಲ್ಲಿ ಬ್ರಷ್ಠಾಚಾರ ನಡೆಸುತ್ತಿರುವದು ಎಷ್ಟು ಸರಿ. ಬಿಜೆಪಿ ಸರ್ಕಾರ ಕಿತ್ತೆಸೆಯುವ ಆಂದೋಲನ ಕಾಂಗ್ರೇಸ್ ಪಕ್ಷ ರಾಷ್ಟ್ರ ವ್ಯಾಪಿಯಾಗಿ ಜರುಗಲಿದೆ. ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದ ನೀತಿಗಳಿಂದ ಜನಸಾಮಾನ್ಯ ಸಾವನ್ನಪ್ಪಿದ್ದಾನೆ. ಆಕ್ಸಿಜನ್, ಓಷಧಿ, ಅಂಬುಲೇನ್ಸ್‌ ಕೂಡಾ ಸಿಗುತ್ತಿಲ್ಲ. ಕೂಲಿ ಕೆಲಸವಿಲ್ಲದೇ ಕಾರ್ಮಿಕರು ಪರದಾಡುವಂತಾಗಿದೆ. ರೈತರಿಗೆ ಬೀಜ, ಗೊಬ್ಬರ ಸಿಗುತ್ತಿಲ್ಲ. ಕಾಟಾಚಾರಕ್ಕೆ ಪರಿಹಾರ ಘೋಷಣೆ ಮಾಡಿದೆ. ಆದರೆ ಯಾರಿಗೂ ತಲುಪಿತ್ತಿಲ್ಲ ಎಂದು ಆರೋಪಿಸಿದರು. 

ಕೆಪಿಸಿಸಿ ಸದಸ್ಯ ಬಿ.ಎಸ್‌.ಪಾಟೀಲ ಯಾಳಗಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಜಿ.ಎಸ್‌.ಕಶೇಟ್ಟಿ, ಅಕ್ಕಮಹಾದೇವಿ ಕಟ್ಟಿಮನಿ, ಸೈಯದಶಕೀಲ ಅಹ್ಮದ ಖಾಜಿ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ