ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿಯಿಂದ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ಸರ್ಕಾರ
ಕಾರವಾರ 06: ರಾಜ್ಯದಲ್ಲಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿಯಿಂದ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳುವ ಪ್ರಕ್ರಿಯೆಗೆ ಸರ್ಕಾರ ಅನುಮತಿ ನೀಡಿದೆ. ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಸಮಸ್ಯೆಯಿಂದ ತಾತ್ಕಾಲಿಕ ತಡೆ ಹಿಡಿದಿದ್ದ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು , ಇದೇ ಜೂ.5 ರಂದು ,ನೇಮಕತಿ ಪುನಃ ಪ್ರಾರಂಭಿಸುವಂತೆ ( ಆದೇಶ ಸಂಖ್ಯೆ ಸಿ8(3)ಶಾ.ಶಿ.ಅ.ಖಾ.ಹು 2/2024-25 ಹೊರಡಿಸಿದೆ.
ಇದನ್ನು ಸ್ವಾಗತಿಸುವೆ ಎಂದು ವಿ.ಪ.ಸದಸ್ಯ ಎಸ್.ವಿ. ಸಂಕನೂರು ತಿಳಿಸಿದ್ದಾರೆ. ಎಸ್.ಸಿ. ಒಳ ಮೀಸಲಾತಿಯ ಸಮಸ್ಯೆಯನ್ನು ಸರ್ಕಾರ 101 ರೋಸ್ಟರ್ ಬಿಂದುವನ್ನು ಮಾರಿ್ಡಸಿ 400 ಬಿಂದುಗಳ ರೋಸ್ಟರ್ ಪಟ್ಟಿಯನ್ನು ಬಿಡುಗಡೆ ಮಾಡಿ ಬಗೆ ಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ನೇಮಕಾತಿ ಮಾಡಿಕೊಳ್ಳುವಾಗ ಈ ಹಿಂದಿನ ರೋಸ್ಟರ್ ಬಿಂದು 101ರ ಪಟ್ಟಿಯಲ್ಲಿ ನೇಮಕಾತಿಗೆ ಯಾವ ಬಿಂದುವಿನವರೆಗೆ ಆಗಿರುತ್ತದೆ ಅದರ ನಂತರದ ಬಿಂದುವಿನಿಂದ ಪ್ರಾರಂಭಿಸುವಂತೆ ಅವರು ಸೂಚಿಸಿರುವರು.
ಅಲ್ಲದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಒಂದೇ ಪ್ರೌಢಶಾಲೆ ಅಥವಾ ಒಂದಕ್ಕಿಂತ ಹೆಚ್ಚು ಪ್ರೌಢಶಾಲೆಗಳಲ್ಲಿ 14 ಅಥವಾ ಅದಕ್ಕಿಂತ ಕಡಿಮೆ ಹುದ್ದೆ ಸಂಬಂಧಪಟ್ಟ ತುಂಬಬೇಕಾದಲ್ಲಿ ಈ ಹಿಂದಿನ 101ರ ರೋಸ್ಟರ್ ಬಿಂದುವಿನ ಪಟ್ಟಿಯನ್ನು ಪಾಲಿಸಬೇಕು ಮತ್ತು 14ಕ್ಕೂ ಹೆಚ್ಚು ಹುದ್ದೆಗಳನ್ನು ತುಂಬುವ ಸಂದರ್ಭದಲ್ಲಿ ಹೊಸದಾಗಿ ರೂಪಿಸಿರುವ 400 ಬಿಂದುವಿನ ರೋಸ್ಟರ್ ಬಿಂದುವಿನ ಪಟ್ಟಿಯನ್ನು ಪಾಲಿಸಬೇಕಾಗಿರುತ್ತದೆ.
ಆದ್ದರಿಂದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಸಂಬಧಪಟ್ಟ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಇವರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದು ನೇಮಕ ಮಾಡಿ ಕೊಳ್ಳಬೇಕಾದ ಹುದ್ದೆಗಳ ರೋಸ್ಟರನ್ನು ನಿರ್ಧರಿಸಿ ,ಠರಾವು ಮಾಡಿ ಅದನ್ನು ಆಯುಕ್ತರ ಕಚೇರಿ ಬೆಂಗಳೂರ ಇವರಿಗೆ ಆನ್ಲೈನ್ ಮೂಲಕ ಅಪ್ಲೋಡ್ ಮಾಡಬೇಕೆಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.