ಬ್ಯಾಡ್ಗಿ

ಬೆಳೆ ಹಾನಿಗೆ ಸರಕಾರ ಪರಿಹಾರ ನೀಡಿದೆ ಸತಾಯಿಸುತ್ತದೆ: ಮಲ್ಲಿಕಾರ್ಜುನ

ಬೆಳೆ ಹಾನಿಗೆ ಸರಕಾರ ಪರಿಹಾರ ನೀಡಿದೆ ಸತಾಯಿಸುತ್ತದೆ: ಮಲ್ಲಿಕಾರ್ಜುನ

ಬ್ಯಾಡಗಿ 02:  ಒಂದು ಕಡೆ ಪ್ರವಾಹ, ಮತ್ತೊಂದು ಕಡೆ ಬೆಳೆಹಾನಿಗೆ ಸಿಗದ ಪರಿಹಾರ. ಇದರಿಂದಾಗಿ ರಾಜ್ಯದ ರೈತರು ಬಸವಳಿದಿದ್ದಾರೆ. ಪ್ರವಾಹದಿಂದಾದ ಬೆಳೆ ಹಾನಿಗೆ ಸರಕಾರ ಪರಿಹಾರ ನೀಡಿದೆ ಸತಾಯಿಸುತ್ತದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸರಕಾರದ ವಿರುದ್ಧ ಹರಿಹಾಯ್ದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಮಾ ಕಂಪನಿಯವರು ವಿಮಾ ತುಂಬುವ ಸಮಯ ಹಾಗೂ ದಿನಾಂಕ ಘೋಷಣೆಮಾಡಿಕೊಂಡು ರೈತರಿಂದ ವಿಮಾ ಪಾವತಿಸಿಕೊಳ್ಳುತ್ತಾರೆ. 

ಆದರೆ ಬೆಳೆವಿಮಾ ಕಂಪನಿಯವರು ಬೆಳೆಹಾನಿಯಾಗಿದ್ದಲ್ಲಿ ಪರಿಹಾರ ನೀಡುವ ದಿನಾಂಕ ಮತ್ತು ಸಮಯ ಏಕೆ ನಮೂದಿಸುವದಿಲ್ಲ. ರೈತರಿಗೊಂದು ಕಾನೂನು, ವಿಮಾ ಕಂಪನಿಯವರಿಗೆ ಒಂದು ಕಾನೂನಾ...? ಸರಕಾರ ಮತ್ತು ವಿಮಾ ಕಂಪನಿ ಶಾಮೀಲಾಗಿ ರೈತರಿಂದಲೇ ಹಣ ದೋಚುತ್ತಿದ್ದಾರೆ.ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.60 ರಷ್ಟು ಮಳೆ ಹೆಚ್ಚಾಗಿ, ಬೆಳೆ ಸಂಪೂರ್ಣ ನಾಶವಾಗಿದೆ. ಈ ಕೊಡಲೇ ಜಿಲ್ಲೆಯನ್ನು ಹಸಿಬರಿಗಾಲ ಎಂದು ಘೋಷಿಸಿ ಬೇಳೆವಿಮಾ ಹಾಗೂ ಬೆಳೆ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು. ರಾಜ್ಯದ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು ಜೋಳ, ಹತ್ತಿ, ಸುಂಟಿ, ಸೋಯಾಬೀನ್, ಹೆಸರು, ಬತ್ತ ಸಹಿತ ವಿವಿಧ ಬೆಳೆಗಳಿಗೆ ಮುಂಗಾರು ಹಂಗಾಮಿನ ಪ್ರತ್ಯೇಕವಾಗಿ ವಿಮೆ ಕಂತು ಪಾವತಿಸಿದ್ದಾರೆ. 

ಎರಡು ಮೂರು ವರ್ಷದಿಂದ ರಾಜ್ಯದಲ್ಲಿ ನಿರಂತರ ಪ್ರವಾಹ ಉಂಟಾಗುತ್ತಿದೆ. ಮುಂಗಾರು ಹಂಗಾಮಿ ನಲ್ಲಿ ರೈತರ ಬೆಳೆ ನಾಶವಾಗಿರುವುದನ್ನು  ಕಂದಾಯ ಇಲಾಖೆ ಮೂಲಕ ಸಮೀಕ್ಷೆ ನಡೆಸಿ, ಸಂಪೂರ್ಣ ಬೆಳೆಹಾನಿ ಹಾಗೂ ಬೆಳೆವಿಮೆ ರೈತರಿಗೆ ಪರಿಹಾರ ನೀಡಬೇಕೆಂದರು. ಹಸಿರು ಸೇನೆಯ ತಾಲೂಕು ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಿಲ್ಲೆಯ ರೈತ ಮುಖಂಡರ ಸಭೆಯನ್ನು ಶೀಘ್ರದಲ್ಲಿ ಕರೆದು ಚರ್ಚೆಸಲಾಗುವುದು ಎಂದು ರೈತರ ಪ್ರತಿಭಟನೆಯನ್ನು ಶಮನಗೊಳಿಸಿದ್ದರು. ಆದರೆ ಇಲ್ಲಿವರೆಗೂ ರೈತರ ಸಭೆ ನಡೆಸದೆ ಉದ್ದಟತನ ತೋರಿದ್ದಾರೆ. ಜಿಲ್ಲೆಯಲ್ಲಿ ಮುಖ್ಯ ಮಂತ್ರಿಗಳ ಕಾರ್ಯಕ್ರಮ ನಡೆದರೆ ರೈತ ಸಂಗದಿಂದ ಪ್ರತಿಭಟನೆ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು. 

 ಈ ಸಂದರ್ಭದಲ್ಲಿ ರೈತ ಮುಖಂಡರಾದ ಕಿರಣ ಗಡಿಗೋಳ, ಚಿಕ್ಕಪ್ಪ ಛತ್ರದ, ಮೌನೇಶ ಕಮ್ಮಾರ, ಮಲ್ಲೇಶಪ್ಪ ಡಂಬಳ, ಡಾ. ಕೆ. ವಿ. ದೊಡ್ಡಗೌಡ್ರ ಸೇರಿದಂತೆ ಇನ್ನಿತರರಿದ್ದರು 

ಸುದ್ದಿ ಓದಿ