ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು: ಮುನವಳ್ಳಿಮಠ
ರಾಣೇಬೆನ್ನೂರು 04: ಕಾರ್ಮಿಕರು ಶ್ರಮಿಜೀವಿಗಳು ಅವರು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವರು ಅಂಥವರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂದು 2 ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರಾದ ನಿವೇದಿತಾ ಮುನವಳ್ಳಿಮಠ ಹೇಳಿದರು.
ನಗರದ ಎಪಿಎಂಸಿ ಆವರಣದ ಗಣೇಶ ದೇವಸ್ಥಾನದ ಸಭಾಭವನದಲ್ಲಿ ಕಾರ್ಮಿಕರ ದಿನಾಚರಣೆ ಪ್ರಯುಕ್ತ ತಾಲೂಕ ಕಾನೂನು ಸೇವಾ ಸಮೀತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ, ಕಟ್ಟಡಕಾರ್ಮಿಕರ ಸಂಘ, ಹಾಗೂ ದಿನಗೂಲಿ ಮತ್ತು ಹೊರಗುತ್ತಿಗೆ ಕಾರ್ಮಿಕರ ಸಂಘದ ಸಂಯುಕ್ತಾಶ್ರಯಗಳ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ಇಂದಿನ ದಿನಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಲ್ಲರಿಗೂ ಸಂವಿಧಾನದ ಆಶಯದಂತೆ ಒಂದೇರೀತಿಯ ಸೌಲಭ್ಯಗಳು ಸಿಗುವಂತಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾದರೆ ನಿಮ್ಮಲ್ಲಿಒಗ್ಗಟ್ಟು ಬಹಳ ಮುಖ್ಯ ಈ ದಿಶೆಯಲ್ಲಿ ಸಂಘಟನೆಗೆಒತ್ತು ನೀಡುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಿರಿಎಂದರು.
ಹಾವೇರಿ ಜಿಲ್ಲಾ ದಿನಗೂಲಿ ಹಾಗೂ ಹೊರಗುತ್ತಿಗೆಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಗಿಯವರ ಮಾತನಾಡಿ, ಕಾರ್ಮಿಕರಿಗೆ ಸೌಲಭ್ಯ ನೀಡುವಲ್ಲಿ ಸರ್ಕಾರಗಳು ತಾರತಮ್ಯ ನೀತಿಅನುಸರಿಸುತ್ತಿವೆ. ಕಾರ್ಮಿಕರಲ್ಲಿ ಯಾವುದೇ ಜಾತಿ, ಮತ, ಪಂಥಎನ್ನುವುದಿಲ್ಲಾ. ಎಲ್ಲರೂ ಸಮಾನರು ಈಗಲೂ ಗಂಡು-ಹೆಣ್ಣು ಎಂಬ ಬೇಧದಿಂದ ಶೋಷಣೆ, ದಬ್ಬಾಳಿಕೆಗಳು ನಿರಂತರ ನಡೆಯುತ್ತಿವೆ. ಸರ್ಕಾರದ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲಾ.ಕಾರ್ಮಿಕಕಾರ್ಡ ವಿತರಣೆಯಲ್ಲಿ ಸಾಕಷ್ಠು ಬ್ರಷ್ಠಾಚಾರ ತಾಂಡವವಾಡುತ್ತಿದೆ ನಿಜವಾದಕಾರ್ಮಿಕರಿಗೆ ನ್ಯಾಯ ಸಿಗುತ್ತಿಲ್ಲಾ ದುಡಿಯುವ ಕೈಗಳೇ ಆಳುವ ಕೈಗಳಾಗಬೇಕು ಅಂದಾಗ ಮಾತ್ರ ಎಲ್ಲರಲ್ಲಿಯೂ ಸಮಾನತೆಕಾಣಲು ಸಾಧ್ಯ ಎಂದರು.
ವಕೀಲರ ಸಂಘದ ಉಪಾಧ್ಯ ಕ್ಷಕುಮಾರ ಮಡಿವಾಳರ, ಕಾರ್ಯದರ್ಶಿ ಜಿ.ಕೆ.ಮುಂಡಾಸದ, ಕುಮಾರ ಎಳೇಹೊಳಿ, ರವೀಂದ್ರಗೌಡ ಪಾಟೀಲ, ಎಸ್.ಡಿ. ಹಿರೇಮಠ ಮಾತನಾಡಿದರು. ಕಟ್ಟಡಕಾರ್ಮಿಕರ ಸಂಘದರಾಜ್ಯಾಧ್ಯಕ್ಷ ನಾಗರಾಜ ಬಿ, ದಿಳ್ಳೆಪ್ಪ ಸತ್ಯಪ್ಪನವರ, ಅಹ್ಮದರಂಗವಾಲೆ, ಅಸ್ಲಾಂ ಪಾಣಿಬಂದೆ, ನಾಗರಾಜ ಸುರ್ವೆ, ಅಜೀಂ ಮಕರಿ, ನಾಗರೆಡ್ಡಿ ಶಿವಮ್ಮನವರ, ರೇಣುಕಾ ಲಮಾಣಿ, ನಾಗೇಂದ್ರ್ಪಅರ್ಕಾಚಾರಿ, ವಿಶ್ವನಾಥಕಮ್ಮಾರ ಸೇರಿದಂತೆ ಮತ್ತಿತರರು ಇದ್ದರು.