ಚಿಕ್ಕೋಡಿ

ಸರ್ಕಾರಿ ನೌಕರರು ವೇತನದಲ್ಲಿ ವಂತಿಗೆ ನೀಡಿ : ಸಂಘದ ಅಧ್ಯಕ್ಷ ಬಿ.ಎ.ಕುಂಬಾರ

ಸರ್ಕಾರಿ ನೌಕರರು ವೇತನದಲ್ಲಿ ವಂತಿಗೆ ನೀಡಿ : ಸಂಘದ ಅಧ್ಯಕ್ಷ ಬಿ.ಎ.ಕುಂಬಾರ

ಲೋಕದರ್ಶನ ವರದಿ 

ಸರ್ಕಾರಿ ನೌಕರರು ವೇತನದಲ್ಲಿ ವಂತಿಗೆ ನೀಡಿ : ಸಂಘದ ಅಧ್ಯಕ್ಷ ಬಿ.ಎ.ಕುಂಬಾರ 

ಚಿಕ್ಕೋಡಿ 06: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅ.1ರಿಂದ ಜಾರಿಗೊಳಿಸಿದ್ದು, ನೌಕರರು ತಮ್ಮ ತಮ್ಮ ವಂತಿಗೆಯನ್ನು ವೇತನದಲ್ಲಿ ನೀಡಬೇಕೆಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎ.ಕುಂಬಾರ ತಿಳಿಸಿದ್ದಾರೆ. 

ಪತಿ- ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಗೆ ನೀಡುವುದು. ರಾಜ್ಯ ಸರ್ಕಾರದ ಅಧಿಕಾರಿ, ನೌಕರರ ತಂದೆ- ತಾಯಿ ಪಿಂಚಣಿದಾರರಾ ಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿ ?17 ಸಾವಿರ ದಿಂದ ?27 ಸಾವಿರಗಳಿಗೆ ಹೆಚ್ಚಳ ಮಾಡಿದೆ ಎಂದರು. ವಿವಾಹಿತ ಮಹಿಳಾ ನೌಕರರ ತಂದೆ- ತಾಯಿಯೂ ಸಹ ಈ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಮಾಸಿಕ ವಂತಿಕೆ ನೀಡಲು ಇಚ್ಛಿಸದೇ ಇರುವ ನೌಕರರು ಲಿಖಿತ ವಾಗಿ 18-10-2025 ರೊಳಗೆ ಸಂಬಂಧಿಸಿದ ಡಿಡಿಒ ಗಳಿಗೆ ನೀಡುವುದು. 

ಈ ಯೋಜನೆಯ ಸೌಲಭ್ಯ ಪಡೆ ಯಲು ರಾಜ್ಯ ಸರ್ಕಾರದಈ ಯೋಜನೆಯ ಸೌಲಭ್ಯ ಪಡೆ ಯಲು ರಾಜ್ಯ ಸರ್ಕಾರದ ಅಧಿಕಾರಿ, ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ಧಿಷ್ಟಪ ಡಿಸಿರುವ ವಂತಿಕೆಯನ್ನು ಅಕ್ಟೋರ್ಬ-2025ನೇ ಮಾಹೆಯಿಂದ ನೀಡುವುದು. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬ ಸದಸ್ಯ ರು ಈ ಯೋಜನ ಲಾಭಪಡೆಯಲಿದ್ದಾರೆ ಎಂದರು. 


ಸುದ್ದಿ ಓದಿ